ಪ್ರಾಣ ಉಳಿಸಿಕೊಳ್ಳಲು ಓಡಿದರೂ ಬಿಡಲಿಲ್ಲ ! ಊಟ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು | Crime news

ರಾತ್ರಿ ಹೊತ್ತು ಧಾಬಾದಲ್ಲಿ ಕುಳಿತು ಊಟ ಮಾಡುತ್ತಿದ್ದ ಯುವಕರ ಮೇಲೆ ಏಕಾಏಕಿ ಗುಂಡಿನ ಮಳೆ ಸುರಿದ ದುಷ್ಕರ್ಮಿಗಳು, ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ತಡರಾತ್ರಿ ಮಿಲನ್ ಧಾಬಾದಲ್ಲಿ ನಡೆದ ಈ ಭೀಕರ ದಾಳಿಯಿಂದ ಗ್ರಾಹಕರು ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.Crime news
ಊಟ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಊಟ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು WEB
Published on: 

ನವದೆಹಲಿ: ರಾತ್ರಿ ಹೊತ್ತು ಧಾಬಾದಲ್ಲಿ ಕುಳಿತು ಊಟ ಮಾಡುತ್ತಿದ್ದ ಯುವಕರ ಮೇಲೆ ಏಕಾಏಕಿ ಗುಂಡಿನ ಮಳೆ ಸುರಿದ ದುಷ್ಕರ್ಮಿಗಳು, ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ತಡರಾತ್ರಿ ಮಿಲನ್ ಧಾಬಾದಲ್ಲಿ ನಡೆದ ಈ ಭೀಕರ ದಾಳಿಯಿಂದ ಗ್ರಾಹಕರು ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಐವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರಾತ್ರಿ ಸುಮಾರು 12.30ರ ವೇಳೆಗೆ ಸ್ವಿಫ್ಟ್ ಕಾರಿನಲ್ಲಿ ಧಾಬಾಕ್ಕೆ ಬಂದ ಐವರು ದುಷ್ಕರ್ಮಿಗಳು ಊಟ ಮಾಡುತ್ತಿದ್ದ ಯುವಕರ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಧಾಬಾದಲ್ಲಿದ್ದವರು ಪ್ರಾಣ ಉಳಿಸಿಕೊಳ್ಳಲು ಮೇಜು ಮತ್ತು ಕುರ್ಚಿಗಳ ಹಿಂದೆ ಅಡಗಿಕೊಂಡಿದ್ದಾರೆ. ಕೆಲವರು ದಿಕ್ಕಾಪಾಲಾಗಿ ಓಡಿದ್ದಾರೆ.

ಹೊರಗೆ ಓಡಿದ ಯುವಕನನ್ನೂ ಬೆನ್ನಟ್ಟಿ ಹತ್ಯೆ

ದಾಳಿಯಲ್ಲಿ ಮೂವರು ಯುವಕರು ಊಟದ ಮೇಜಿನಲ್ಲೇ ಕುಳಿತಿದ್ದಾಗ ಗುಂಡೇಟಿಗೆ ಬಲಿಯಾಗಿದ್ದಾರೆ. ಮತ್ತೊಬ್ಬ ಯುವಕ ಆರಂಭಿಕ ದಾಳಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿದ್ದಾನೆ. ಆದರೆ ಆತನನ್ನು ಬೆನ್ನಟ್ಟಿದ ದುಷ್ಕರ್ಮಿಗಳು ಹೊರಭಾಗದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಷ್ಟಕ್ಕೇ ನಿಲ್ಲದ ಆರೋಪಿಗಳು, ಕೆಲಕಾಲ ಸ್ಥಳದಲ್ಲೇ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾ ಓಡಾಡಿದ್ದಾರೆ. ಬಳಿಕ ಬಂದಿದ್ದ ಕಾರಿನಲ್ಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧರಿಸಿ ವರದಿಯಾಗಿದೆ.

ಮೃತರು ಝಜ್ಜರ್ ಜಿಲ್ಲೆಯ ನಿವಾಸಿಗಳು

ಮೃತ ನಾಲ್ವರೂ ಹರಿಯಾಣದ ಝಜ್ಜರ್ ಜಿಲ್ಲೆಯವರು ಎನ್ನಲಾಗಿದೆ. ಅವರಲ್ಲಿ ಮೂವರು ದೀಘಲ್ ಗ್ರಾಮದವರಾಗಿದ್ದು, ಮತ್ತೊಬ್ಬರು ಬೇರಿ ಪ್ರದೇಶದ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನಾ ಸ್ಥಳಕ್ಕೆ ರೋಹ್ಟಕ್ ವಲಯದ ಐಜಿ ಹಮೀದ್ ಅಖ್ತರ್, ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಜ್‌ಪುರೋಹಿತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಐಎ, ವಿಶೇಷ ಘಟಕ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.

Also Read
ಜಂಕ್ ಫುಡ್ ಕಂಪನಿಗಳಿಗೆ ಸುಪ್ರೀಂ ಶಾಕ್: ಪ್ಯಾಕೆಟ್ ಮೇಲೆ ಪ್ರತ್ಯೇಕ ಎಚ್ಚರಿಕೆ ಲೇಬಲ್ ಕಡ್ಡಾಯ! Supreme Court
ಊಟ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಗ್ಯಾಂಗ್ ಹೆಸರಿನ ಉಲ್ಲೇಖ

ಈ ಹತ್ಯೆಯ ಹೊಣೆ ಹೊತ್ತುಕೊಂಡಿರುವುದಾಗಿ rohitbajrang07 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಪ್ರಕಟವಾಗಿದೆ ಎನ್ನಲಾಗಿದೆ. ಭೌ ರಿಟೋಲಿಯಾ ಗ್ಯಾಂಗ್ ಹೆಸರಿನಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ ಇದೊಂದು ಪ್ರತೀಕಾರದ ಕೃತ್ಯ ಎಂದು ಹೇಳಿಕೊಂಡು, ಮುಂದಿನ ದಾಳಿಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ. ಮುಂದಿನ ಸರದಿ ಯಾರದ್ದು ನೋಡೋಣ ಎಂಬ ಬೆದರಿಕೆಯ ಮಾತನ್ನೂ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆದರೆ ಈ ಪೋಸ್ಟ್‌ನ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಭೌ ಮತ್ತು ಸನ್ನಿ ರಿಟೋಲಿಯಾ ಗ್ಯಾಂಗ್‌ಗಳ ನಡುವಿನ ಹಳೆಯ ವೈಷಮ್ಯಕ್ಕೂ ಈ ದಾಳಿಗೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಯ ನಿಖರ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

Also Read
ಬೆದರಿಕೆ ನಿರ್ಲಕ್ಷಿಸಿದ ಮಾಲೀಕ ! ಜ್ಯುವೆಲ್ಲರಿ ಶೋರೂಂ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ | Mumbai crime
ಊಟ ಮಾಡುತ್ತಿದ್ದ ನಾಲ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಗ್ಯಾಂಗ್ ವಾರ್ ಆಗಿದೆಯೇ? ತನಿಖೆ ಚುರುಕು

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಎಸ್‌ಪಿ ರಿಷಿಕಾಂತ್, ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಗುರುತು ಪತ್ತೆ ಪ್ರಕ್ರಿಯೆ ನಡೆಯುತ್ತಿದೆ. ಇದು ಗ್ಯಾಂಗ್ ವಾರ್ ಆಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆರೋಪಿಗಳ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಧಾಬಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದಾಳಿಕೋರರು ಬಂದಿದ್ದ ಕಾರು, ಅವರ ಗುರುತು ಹಾಗೂ ಹತ್ಯೆಯ ಹಿಂದಿನ ಉದ್ದೇಶ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.