ಕೋಲ್ಕತ್ತಾ ನಗರದ ಅತ್ಯಂತ ದುಬಾರಿ ಹೋಟೆಲ್ ಆದ ಹಯಾತ್ ರೀಜೆನ್ಸಿ ಹೋಟೆಲ್ನಲ್ಲಿ ಮೆಸ್ಸಿ ಉಳಿದುಕೊಂಡಿದ್ದಾರೆ. ಬೆಳಿಗ್ಗೆ 9:30ರಿಂದ 10.30ರವರೆಗೆ ಸೌರವ್ ಗಂಗೂಲಿ, ಸಿಎಂ ಮಮತಾ ಬ್ಯಾನರ್ಜಿ ಸೇರಿ ಅನೇಕ ಜನರನ್ನು ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಾಲ್ಟ್ ಲೇಕ್ ಕ್ರೀಡಾಂಗಣ ಆಗಮಿಸಲಿದ್ದು, ಅಲ್ಲಿ ಸ್ನೇಹಪರ ಪಂದ್ಯವನ್ನಾಡಲಿದ್ದಾರೆ. ಇದೇ ವೇಳೆ ಕ್ರೀಡಾಂಗಣದಲ್ಲಿ ಮೆಸ್ಸಿಯ 70 ಅಡಿ ಎತ್ತರದ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ.