‘ಮೊದಲು ಶಿವಸೇನೆ, ಬಳಿಕ ಎನ್‌ಸಿಪಿ, ಈಗ ಟಿಎಂಸಿ’: ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ! Rahul Gandhi

ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
Published on
ನವದೆಹಲಿ: ಮಮತಾ ಬ್ಯಾನರ್ಜಿ ನಾಯಕತ್ವದ ತ್ರಣಮೂಲ ಕಾಂಗ್ರೆಸ್ ಪಕ್ಷದ ಚಿಹ್ನೆ (ಹೂವು ಮತ್ತು ಹುಲ್ಲು) ಯನ್ನು ಮುಂಬರುವ ಉಪಚುನಾವಣೆಯಲ್ಲಿ ಬಳಸಿದಂತೆ ಕೇಂದ್ರ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಆಯೋಗದ ಈ ನಿರ್ಧಾರವನ್ನು ಕಾಂಗ್ರೆಸ್​ ಮುಖಂಡ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ (Rahul Gandhi) ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ. 

ಆಗ ಮತ ಕಳ್ಳತನ; ಈಗ ಪಕ್ಷ ಕಳ್ಳತನ!

ಅಕ್ಟೋಬರ್​​ 6 ರಂದು ಪಶ್ಚಿಮ ಬಂಗಾಲದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ತ್ರಣಮೂಲ ಕಾಂಗ್ರೆಸ್​​ನಲ್ಲಿ ಬಂಡಾಯ ಎದ್ದಿರುವ ಸದಸ್ಯರು ಆಲ್​ ಇಂಡಿಯಾ ತ್ರಣಮೂಲ ಕಾಂಗ್ರೆಸ್​ನ ಅಧಿಕೃತ ಚಿಹ್ನೆಯನ್ನು ಬಳಸುವಂತಿಲ್ಲ ಎಂದು ಆದೇಶಿಸಿದೆ.
ಈಗ ಈ ನಿರ್ಧಾರವನ್ನು ಖಂಡಿಸಿರುವ ರಾಹುಲ್​ ಗಾಂಧಿ, ಬಿಜೆಪಿ ಹಾಗೂ ಕೇಂದ್ರ ಚುನಾವಣಾ ಆಯೋಗ ಭಾರತದಲ್ಲಿರುವ ಎಲ್ಲಾ ಪಕ್ಷಗಳನ್ನು ಹೈಜಾಕ್​ ಮಾಡಲು ಮುಂದಾಗಿದೆ ಎಂದು ಕಿಡಿ ಕಾರಿದ್ದಾರೆ. ಮೊದಲು ಶಿವ ಸೇನೆ, ಆಮೇಲೆ ಎನ್​ಸಿಪಿ ಈಗ ಟಿಎಂಸಿ ಎಂದು ಟ್ವಿಟ್​ ಮಾಡಿದ್ದಾರೆ.
ಪ್ರತಿ ಬಾರಿ ಬಿಜೆಪಿ ಮತ್ತು ಚುನಾವಣಾ ಆಯೋಗ ಒಂದೇ ರೀತಿಯ ಕ್ರಮವನ್ನು ಅನುಸರಿಸುತ್ತದೆ. ಮೊದಲು ಪಕ್ಷವನ್ನು ಒಡೆಯುವುದು, ಆಮೇಲೆ ಆ ಪಕ್ಷದ ಚಿಹ್ನೆಯನ್ನು ಕಸಿದು ಮತಕಳ್ಳತನ ಮಾಡಿ, ಒಡೆದು ಹೋಗಿರುವ ಪಕ್ಷವನ್ನೇ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಚಿಹ್ನೆ ಕಸಿಯಲು ಕಾರಣವೇನು? 

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಟಿಎಂಸಿಯಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಪಕ್ಷದ ಆಂತರಿಕ ಬೆಳವಣಿಗೆಯಲ್ಲಿ ಉಂಟಾದ ಬಿರುಕಿನಿಂದಾಗಿ 58 ಬಂಡಾಯ ಶಾಸಕರು ಒಗ್ಗೂಡಿ ರಿತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. 
ಕೇವಲ ಶಾಸಕರಷ್ಟೇ ಅಲ್ಲದೆ, ಸಂಸತ್ತಿನಲ್ಲೂ ಈ ಬಂಡಾಯ ಪ್ರತಿಧ್ವನಿಸಿತ್ತು. ಹಿರಿಯ ನಾಯಕರ ನೇತೃತ್ವದಲ್ಲಿ ಹಲವು ಸಂಸತ್ ಸದಸ್ಯರು ಕೂಡ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು ಟಿಎಂಸಿಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತ್ತು. ಈ ಹಿನ್ನಲೆ ಪಕ್ಷದ ಮೇಲಿನ ಹಕ್ಕಿಗಾಗಿ ಮಮತಾ ಬ್ಯಾನರ್ಜಿ ಬಣ ಮತ್ತು ಬಂಡಾಯ ಬಣ ಎರಡೂ ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು.  

ಆಯೋಗದ ನಿರ್ದೇಶನವೇನು?  

ಅಕ್ಟೋಬರ್ 6 ರಂದು ನಂದಿಗ್ರಾಮ್ ಮತ್ತು ರೆಜಿನಗರ್ ಕ್ಷೇತ್ರಗಳಿಗೆ ಮತ್ತೊಮ್ಮೆ ಚುನಾವಣೆ ನಡೆಯಲಿದ್ದು, ಈ ಚುನಾವನೆಯಲ್ಲಿ ಸ್ಪರ್ಧಿಸುವ, ಯಾವುದೇ ಟಿಎಂಸಿ ಬಣದ ಅಭ್ಯರ್ಥಿ  'ಟಿಎಂಸಿ' ಹೆಸರು ಮತ್ತು 'ಹೂವು-ಹುಲ್ಲು' ಚಿಹ್ನೆಯನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. 
ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಕಾರಣ  ಎರಡೂ ಬಣಗಳು ತುರ್ತಾಗಿ ಬೇರೆ ಹೆಸರು ಮತ್ತು ಮುಕ್ತ ಚಿಹ್ನೆಗಳ ಪಟ್ಟಿಯಿಂದ ಹೊಸ ಚಿಹ್ನೆಗಳನ್ನು ಆಯ್ಕೆ ಮಾಡಿ ಸಲ್ಲಿಸುವಂತೆ ಆಯೋಗ ಸೂಚನೆ ನೀಡಿದೆ. ಆಯೋಗದ ಈ ಸೂಚನೆಯಂತೆ ತೀವ್ರ ಅಸಮಾಧಾನ ಹಾಗೂ ಪ್ರತಿಭಟನೆಯ ನಡುವೆಯೂ ಟಿಎಂಸಿಯ ಬಣಗಳು ರಾತ್ರೋರಾತ್ರಿ ಹೊಸ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿವೆ, (ಏಜೆನ್ಸೀಸ್​). 

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net