ಎಲ್ಲಾ ಸ್ಥಾನಗಳನ್ನು ನಾವೇ ಗೆದ್ರೂ ಇವಿಎಂ ಮೇಲೆ ನಂಬಿಕೆಯಿಲ್ಲ: ಇವಿಎಂಗೆ ಮತ್ತೆ ವಿರೋಧ ವ್ಯಕ್ತಪಡಿಸಿದ ಅಖಿಲೇಶ್ ಯಾದವ್ ಮತ್ತು ಮಾಯಾವತಿ | EVMs

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್​ಪಿ ನಾಯಕಿ ಮಾಯಾವತಿ ಅವರು ಮತ್ತೊಮ್ಮೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ವಿರೋಧಿಸಿದ್ದು, ಅವುಗಳ ಬಳಕೆಯನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸವನ್ನು ಹೆಚ್ಚಿಸಬೇಕೆಂದು ಇಬ್ಬರೂ ಕರೆ ನೀಡಿದ್ದಾರೆ.
Akhilesh Yadav
ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಮಾಯಾವತಿ
Published on: 

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್​ಪಿ ನಾಯಕಿ ಮಾಯಾವತಿ ಅವರು ಮತ್ತೊಮ್ಮೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ವಿರೋಧಿಸಿದ್ದು, ಅವುಗಳ ಬಳಕೆಯನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸವನ್ನು ಹೆಚ್ಚಿಸಬೇಕೆಂದು ಇಬ್ಬರೂ ಕರೆ ನೀಡಿದ್ದಾರೆ.

ಸೋಮವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದರೂ ಸಮಾಜವಾದಿ ಪಕ್ಷವು ಇವಿಎಂಗಳನ್ನು ವಿರೋಧಿಸುತ್ತದೆ. ಮತದಾನದಲ್ಲಿ ತಂತ್ರಜ್ಞಾನದ ಬಹು ಹಂತಗಳ ಅಗತ್ಯವಿದೆಯೇ? ಒಂದರ ನಂತರ ಮತ್ತೊಂದು ಯಂತ್ರದ ಅಗತ್ಯವೇಕೆ ಎಂದು ಪ್ರಶ್ನಿಸಿದ್ದಾರೆ.

Also Read
ಯುಪಿಐ ವಹಿವಾಟುಗಳ ಮೇಲಿನ ಶುಲ್ಕಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್: ಕೇಂದ್ರಕ್ಕೆ ನೋಟಿಸ್ ಜಾರಿ | Supreme Court
Akhilesh Yadav

ಬ್ಯಾಲೆಟ್ ಪೇಪರ್‌ಗಳನ್ನು ಬಳಸುವ ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳನ್ನು ಉದಾಹರಣೆಯಾಗಿ ನೀಡಿದ ಅವರು, ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂದುವರಿದಿದ್ದರೂ ಆ ದೇಶಗಳು ಇವಿಎಂಗಳನ್ನು ಅಳವಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮಾಯಾವತಿ ಸಹ ವಿರೋಧ

ಚುನಾವಣೆಗಳಲ್ಲಿ ಇವಿಎಂ ಬಳಕೆಗಳನ್ನು ವಿರೋಧಿಸಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಯವರು, ಮತದಾರರು ತಮ್ಮ ಮತಗಳನ್ನು ಬೇರೆ ಅಭ್ಯರ್ಥಿಯ ಪರವಾಗಿ ತಿರುಗಿಸಲು ಅಥವಾ ಎಣಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ಹೊಂದಿರಬೇಕು. ಅಂತಹ ಯಾವುದೇ ಸಂದೇಹವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡಬಹುದು ಎಂದು ಹೇಳಿದ್ದಾರೆ.

ಭಾರತದಲ್ಲಿ ಚುನಾವಣೆಗಳನ್ನು ಪರಿಚಯಿಸಿದ ಬಳಿಕ ದಶಕಗಳವರೆಗೆ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿತ್ತು. ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇವಿಎಂ ಅನ್ನು ಪರಿಚಯಿಸಿತು. ಬಳಿಕ ನಡೆದ ಚುನಾವಣೆಗಳಲ್ಲಿ ಬಿಜೆಪಿ ಇವಿಎಂಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿತ್ತು ಎಂದು ತಿಳಿಸಿದ್ದಾರೆ.

Also Read
ಅವರಿಗೋಸ್ಕರ ನಾನೇಕೆ ಮದುವೆಯಾಗಲಿ? ಈ ಮಾತುಗಳನ್ನಾಡಿದ್ದೇಕೆ ಅಂಜಲಿ? ಅಷ್ಟಕ್ಕೂ ಏನಾಯ್ತು? Actress Anjali
Akhilesh Yadav

ಆದರೆ ಆಶ್ಚರ್ಯಕರ ರೀತಿಯಲ್ಲಿ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸಿದ ಬಳಿಕ ಬಿಜೆಪಿ ಇವಿಎಂಗಳನ್ನು ರದ್ದುಗೊಳಿಸಲಿಲ್ಲ, ಬದಲಾಗಿ, ಅದೇ ಯಂತ್ರಗಳ ಮೂಲಕವೇ ಮತದಾನ ಮತ್ತು ಎಣಿಕೆಯ ಅಭ್ಯಾಸವನ್ನು ಮುಂದುವರೆಸಿದೆ ಎಂದಿದ್ದಾರೆ.

ಭಾರತೀಯ ಚುನಾವಣಾ ಆಯೋಗ ಕಾರ್ಯವಿಧಾನ ಮತ್ತು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಬಂಧ ವ್ಯಾಪಕವಾಗಿ ಚರ್ಚೆ, ಆರೋಪ ಮತ್ತು ಪ್ರತ್ಯಾರೋಪಗಳ ನಡುವೆ ಉತ್ತರ ಪ್ರದೇಶದ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಇವಿಎಂ ವಿರೋಧಿಸಿ ಹೇಳಿಕೆ ನೀಡಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net