

ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ, ಆದರೆ ಈಗಲೇ ರಾಜಕೀಯ ನಾಯಕರ ಮಾತಿನ ಚಕಮಕಿಗಳು ಶುರುವಾಗಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ತಮ್ಮ ಗಡ್ಡದ ಕುರಿತು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಮ್ ಖಾನ್ ಮಾಡಿದ್ದ ಟಿಪ್ಪಣಿಗೆ ಕಟುವಾಗಿ ಟೀಕಿಸಿದ್ದಾರೆ.
ಲಖನೌದಲ್ಲಿ ಸಾಮಾಜಿಕ್ ಪರಿವರ್ತನ್ ಮೋರ್ಚಾ ಆಯೋಜಿಸಿದ್ದ ಸಮಾವೇಶವೊಂದರಲ್ಲಿ ಮಾತನಾಡಿರುವ ಓವೈಸಿ, ಕೇವಲ ಗಡ್ಡ ಬಿಟ್ಟ ಮಾತ್ರಕ್ಕೆ ಯಾರೂ ಧರ್ಮಗುರು ಅಥವಾ ಮೌಲಾನಾ ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದ ಅಜಂ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಅಜಂ ಖಾನ್ರನ್ನು ಪರೋಕ್ಷವಾಗಿ ಟೀಕಿಸಿರುವ ಅವರು, ಗಡ್ಡವಿರುವ ಮುಸ್ಲಿಂ ಬೇಕೋ ಅಥವಾ ಅಖಿಲೇಶ್ ಯಾದವ್ ಅವರಂತಹ ಹಿಂದುತ್ವ ಬೆಂಬಲಿಗ ಬೇಕೋ ಎಂಬುದನ್ನು ನಿರ್ಧರಿಸುವಂತೆ ಅಜಮ್ ಖಾನ್ ಅವರಿಗೆ ಸವಾಲು ಹಾಕಿದ್ದಾರೆ.
ಮುಂದುವರೆದು, ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಅನ್ಯಾಯಗಳಿಗೆ ಅಖಿಲೇಶ್ ಯಾದವ್ ಅವರೇ ಕಾರಣ ಎಂದು ಆರೋಪಿಸಿದ ಅವರು, ಕರ್ಹಲ್ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ, ಮುಸ್ಲಿಂ ಪ್ರಾತಿನಿಧ್ಯದ ಬಗೆಗಿನ ತಮ್ಮ ಬದ್ಧತೆಯನ್ನು ಸಾಬೀತುಪಡಿಸುವಂತೆ ಯಾದವ್ಗೆ ಸವಾಲು ಹಾಕಿದ್ದಾರೆ (ಏಜೆನ್ಸೀಸ್).