ಕಾಂಗ್ರೆಸ್​ ಒಂದು ಸ್ಥಾನವನ್ನೂ ಪಡೆಯಲ್ಲ: ಪಶ್ಚಿಮ ಬಂಗಾಳದಲ್ಲಿ ನಿಮ್ಮ ಪಕ್ಷ ಸೊನ್ನೆ ಸುತ್ತಲಿದೆ; ರಾಹುಲ್​ಗೆ ಅಮಿತ್​ ಶಾ ಲೇವಡಿ! Amit Shah on Rahul Gandhi

ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ
ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದಲ್ಲಿ ನಿಮ್ಮ ಪಕ್ಷ ಒಂದು ಸೀಟ್​ನ್ನು ಪಡೆಯುವುದಿಲ್ಲ
  • ತಮಿಳನಾಡು ಮತ್ತು ಪುದುಚೇರಿಯಲ್ಲಿ ಒಂದಕ್ಕಿ ದಾಟಲ್ಲ
  • ಅಸ್ಸಾಂನಲ್ಲಿ ಹೀನಾಯ ಸೋಲನ್ನು ಕಾಣುತ್ತಿರಿ
  • ರಾಹುಲ್​ ಗಾಂಧಿ ಜೊತೆ ಸೇರಿ ಮಲ್ಲಿಕಾರ್ಜುನ್​ ಖರ್ಗೆ ಅವರ ನಾಲಿಗೆ ಹದಗೆಟ್ಟಿದೆ
  • ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ
ಪಶ್ಚಿಮ ಬಂಗಾಳ:  ಬುಧವಾರ (ಏ.22) ಪಶ್ಚಿಮ ಬಂಗಾಳದ ದಮ್​ದಮ್​ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah on Rahul Gandhi), ಈ ಭಾರಿಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿ ಸಹ ಜಯವನ್ನು ಸಾಧಿಸುವುದಿಲ್ಲ ಎಂದು ಹೇಳಿದ್ದಾರೆ. 
ಅದೇ ರೀತಿ ಅಸ್ಸಾಂನಲ್ಲಿ ಅತ್ಯಂತ ಹೀನಾಯವಾಗಿ ಸೋಲಲಿದ್ದು, ಇನ್ನು ತಮಿಳನಾಡು ಮತ್ತು ಪುದುಚೇರಿಯಲ್ಲಿ ಒಂದಕ್ಕಿ ದಾಟುವುದಿಲ್ಲ ಎಂದು ನಾನು ರಾಹುಲ್​ ಗಾಂಧಿಗೆ ಹೇಳಲು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್​ ಮುಖ್ಯಸ್ಥರ ನಾಲಿಗೆ ಹದಗೆಟ್ಟಿದೆ

ನಿನ್ನೆ (ಏ.21) ಕಾಂಗ್ರೆಸ್​ ಮುಖ್ಯಸ್ಥ ಮಲ್ಲಿಕಾರ್ಜುನ್​ ಖರ್ಗೆ ಪತ್ರಿಕಾಗೋಷ್ಠಿವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಬಳಿಕ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆ, ನನ್ನ ಮಾತಿನ ಬೇರೆಯಾಗಿತ್ತು, ಮೋದಿ ಜನರನ್ನು ಭಯಗ್ರಸ್ಥರಾಗಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಹೇಳಿಕೆಗೆ ತೀರುಗೇಟು ಕೊಟ್ಟ ಅಮಿತ್​ ಶಾ, ರಾಹುಲ್​ ಗಾಂಧಿ ಜೊತೆ ಸೇರಿಕೊಂಡು ಮಲ್ಲಿಕಾರ್ಜುನ್​ ಖರ್ಗೆ ಅವರ ನಾಲಿಗೆ ಸಹ ಹದಗೆಟ್ಟು ಹೋಗಿದೆ. ಕಾಂಗ್ರೆಸ್​ ಪ್ರತಿ ಸಲ ಪ್ರಧಾನಿಗಳ ಮೇಲೆ ಮತ್ತು ಬಿಜೆಪಿ ಮೇಲೆ ಸುಳ್ಳು ಆರೋಪಗಳನ್ನು ಮಾಡಲು ಹೋದಾಗ ಭಾರತದ ಜನರೇ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಹೇಳಿದರು.

ಪ್ರಧಾನಿಗೆ ಟೆರರಿಸ್ಟ್​ ಎಂದ ಖರ್ಗೆ

ಮಂಗಳವಾರ (ಏ.21) ತಮಿಳುನಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಈ ಎಐಎಡಿಎಂಕೆ ಅವರು ಏಕೆ ಆ ಮೋದಿ ಜೊತೆ ಕೈ ಜೋಡಿಸಬೇಕು, ಅವರೊಬ್ಬ ಟೆರರಿಸ್ಟ್​, ಆ ಪಕ್ಷ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ನಂಬಿಕೆ ಇಲ್ಲದ ಪಕ್ಷದ ಜೊತೆ ಅಣ್ಣಾ ಧುರೈರಂತ ಮಹಾನ್​ ಚೇತನ ಕಟ್ಟಿ ಬೆಳೆಸಿದ ಪಕ್ಷ ಏಕೆ ಸೇರಿಕೊಂಡಿದೆ ಎಂದು ಖರ್ಗೆ ಹೇಳಿದ್ದರು.
ನಂತರ ತಮ್ಮ ಈ ಭಯೋತ್ಪಾದಕ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ನಾನು ಮೋದಿ ಅವರನ್ನು ನೇರವಾಗಿ ಭಯೋತ್ಪಾದಕನೆಂದು ಕರೆದಿಲ್ಲ. ಅವರು ಜನರನ್ನು ಹೆದರಿಸುತ್ತಾರೆ, ಅವರನ್ನು ಪ್ರಶ್ನಿಸುವ ಜನರ ಮನೆಗೆ ಇಡಿ, ಸಿಬಿಐ ಮತ್ತು ಐಟಿ ಅಧಿಕಾರಿಗಳನ್ನು ಬಿಟ್ಟು ಭಯ ಪಡಿಸುವ ಪ್ರಯತ್ನ ಮಾಡುತ್ತಾರೆ. ನಾನು ಈ ಅರ್ಥದಲ್ಲಿ ಅವರನ್ನು ಭಯೋತ್ಪಾದಕನೆಂದು ಹೇಳಿದ್ದು, ಎಂದು ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net