ಮುಂದಿನ 30 ವರ್ಷ ಕಾಂಗ್ರೆಸ್‌ಗೆ ಅಧಿಕಾರವಿಲ್ಲ; ರಾಹುಲ್ ಗಾಂಧಿ ಪ್ರಧಾನಿ ಆಗಲ್ಲ: 'ವೋಟ್​ ಚೋರಿ' ಗೆ ಅಮಿತ್ ಶಾ ಕೌಂಟರ್​! Amit Shah

ಮುಂದಿನ 30 ವರ್ಷ ಕಾಂಗ್ರೆಸ್‌ಗೆ ಅಧಿಕಾರ ಸಿಗಲ್ಲ, ರಾಹುಲ್ ಗಾಂಧಿ ಪ್ರಧಾನಿ ಆಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ. ಯಮುನಾ ಕಾರ್ಯಕ್ರಮದಲ್ಲಿ ಶಾ ನೀಡಿದ ಖಡಕ್ ಹೇಳಿಕೆ ಇಲ್ಲಿದೆ.
Union Home Minister Amit Shah launching an attack against the Congress and Rahul Gandhi in New Delhi.
ನವದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
Published on: 

ನವದೆಹಲಿ: ಭಾರತೀಯ ಜನತಾ ಪಾರ್ಟಿಯು ಬೂತ್​ ಮಟ್ಟದಿಂದ ಪ್ರಧಾನಿ ಹಂತದವೆರೆಗೆ ಈ ದೇಶದ ಜನರೊಟ್ಟಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಮುಂದಿನ 30 ವರ್ಷಗಳವರೆಗೆ ಕಾಂಗ್ರೆಸ್​ ಪಕ್ಷ ಮತ್ತು ರಾಹುಲ್​ ಗಾಂಧಿ ಅಧಿಕಾರ ಪಡೆಯುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಭವಿಷ್ಯ ನುಡಿದಿದ್ದಾರೆ.

ಗುರುವಾರ (ಅ.22) ಯಮುನಾ ಪುನರುಜ್ಜೀವನ ಯೋಜನೆಗಳ ಉದ್ಘಾಟನೆ ಮತ್ತು ಶಂಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವರು ಕಾಂಗ್ರೆಸ್​ ಮತ್ತು ಲೋಕಸಭಾ ವಿರೋಧ ಪಕ್ಷಗಳ ನಾಯಕ ರಾಹುಲ್​ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

ನಿಮ್ಮ ನಿಜ ಬಣ್ಣ ಜನರಿಗೆ ತಿಳಿದಿದೆ!

ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ರಾಹುಲ್​ ಗಾಂಧಿ ಮತ್ತು ಅವನ ಸಹಚರರು, ಬೇರೆ ದೇಶದಿಂದ ಬಂದಿರುವ, ಅಕ್ರಮ ನಿವಾಸಿಗಳ ಮತವನ್ನು ಕಾಪಾಡಲು ಮುಂದಾಗಿದೆ ಎಂದು ಈ ದೇಶದ ಜನರಿಗೆ ತಿಳಿದಿದೆ. ಹೀಗಾಗಿ ನಿಮ್ಮ ವೋಟ್​ ಚೋರಿ ಎಂಬ ಡ್ರಾಮಾ ಬಹಳ ದಿನ ನಡೆಯಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ನಿಮಗೆ ನೀವು ಮಾಡುವ ಕೆಲಸ ಮತ್ತು ನಿರ್ಧಾರಗಳ ಬಗ್ಗೆಯೇ ದ್ವಂದ್ವ ನಿಲುವನ್ನು ಹೊಂದಿದ್ದಿರಿ. ಹೀಗಾಗಿ ನಿಮ್ಮ ಯೋಜನೆಗಳು ಯಾವುದು ಯಶಸ್ಸನ್ನು ಕಾಣುತ್ತಿಲ್ಲ. ಮೊದಲು ನಿಮ್ಮ ಪಕ್ಷ ಹಾಗೂ ವೈಯಕ್ತಿಕವಾಗಿ ಸುಧಾರಿಸಿಕೊಳ್ಳಬೇಕಾದನ್ನು ಸರಿ ಪಡಿಸಿಕೊಳ್ಳಿ. ಅದನ್ನು ಬಿಟ್ಟು ಜನರ ಮನಸ್ಸನ್ನು ಬದಲಿಸುವ ವ್ಯರ್ತ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.

'ಯಮುನೆ' ಯನ್ನು ನಾವೇ ಸ್ವಚ್ಛಮಾಡಿದೆವು!

ಇನ್ನು ಯಮುನಾ ನದಿ ಸ್ವಚ್ಛತೆ ಬಗ್ಗೆ ಮಾತನಾಡಿದ ಗೃಹ ಸಚಿವರು, ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್​, ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದ ಆಮ್​ ಆದ್ಮಿ ಪಕ್ಷ, ಯಮುನಾ ನದಿಯನ್ನು ಸ್ವಚ್ಛ ಮಾಡುವ ಬಗ್ಗೆ ಕೇವಲ ಭಾಷಣವನ್ನಷ್ಟೇ ಮಾಡಿತು. ಆದರೆ ಇದನ್ನು ಸ್ವಚ್ಛ ಮಾಡಲು ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು ಎಂದಿದ್ದಾರೆ.

Also Read
ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಪಾರಾ ಈಜುಗಾರ ಶಮ್ಸ್ ಆಲಂ ಕ್ರೀಡಾಕೂಟದಿಂದ ಉಚ್ಚಾಟನೆ! Shams Aalam Shaikh
Union Home Minister Amit Shah launching an attack against the Congress and Rahul Gandhi in New Delhi.

ಆಮ್​ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರದಲ್ಲಿದ್ದಾಗ, ಪ್ರತಿದಿನ ಯಮುನಾ ನದಿಗೆ 2 ಸಾವಿರ ಟನ್​ ತ್ಯಾಜ್ಯಗಳು ಸೇರುತ್ತಿದ್ದವು. ಇದರಲ್ಲಿ ದೊಡ್ಡ ಪಾಲು ಉತ್ತರಪ್ರದೇಶ ರಾಜ್ಯದ್ದಾಗಿತ್ತು. ಆದರೆ ಈಗ, ದೇಶ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿದ್ದು, ಪವಿತ್ರ ನದಿಯನ್ನು ನಮ್ಮ ಸರ್ಕಾರಗಳು ಒಗ್ಗಟ್ಟಿನಿಂದ ಸ್ವಚ್ಛತಾ ಕೆಲಸವನ್ನು ಮಾಡುತ್ತಿದೆ ಎಂದಿದ್ದಾರೆ.

ಇದು ಕೇವಲ ಪ್ರಾರಂಭಿಕ ಹಂತವಾಗಿದ್ದು, 2029 ರ ಒಳಗಾಗಿ ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಹರಿಯುವ ಸಂಪೂರ್ಣ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಇದನ್ನು ನಾವು ಖಂಡಿತ ಇಡೇರಿಸುತ್ತೆವೆಂದು ಅಮಿತ್​ ಶಾ ಆಶ್ವಾಸನೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net