ನೀತಿ ಆಯೋಗದ ಸಭೆಯಲ್ಲಿ ಸಿಎಂ ವಿಜಯ್ ಡಿಎಂಕೆ ಸಾಧನೆಗಳ ಕ್ರೆಡಿಟ್ ಪಡೆದುಕೊಂಡಿದ್ದಾರೆ: ಉದಯನಿಧಿ ಸ್ಟಾಲಿನ್ ಕಿಡಿ | Udhayanidhi Stalin

ಸಿಎಂ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್
ಸಿಎಂ ವಿಜಯ್ ಮತ್ತು ಉದಯನಿಧಿ ಸ್ಟಾಲಿನ್
Published on
ಚೆನ್ನೈ: ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ, ಸಿಎಂ ಸಿ ಜೋಸೆಫ್ ವಿಜಯ್ ಅವರು ಡಿಎಂಕೆ ಸರ್ಕಾರದ ಸಾಧನೆಗಳ ಕ್ರೆಡಿಟ್ ಪಡೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಯುವ ವಿಭಾಗದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್(Udhayanidhi Stalin) ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣಾ ಪ್ರಚಾರದ ಸಮಯದಲ್ಲಿ ತಮಿಳುನಾಡು ಸಾಲದಲ್ಲಿ ಮುಳುಗುತ್ತಿದೆ ಎಂದು ಸುಳ್ಳು ನಿರೂಪಣೆ ಮಾಡಿದ್ದ ವಿಜಯ್, ಈಗ ನೀತಿ ಆಯೋಗದ ಸಭೆಯಲ್ಲಿ ರಾಜ್ಯದ ಸಾಧನೆಗಳ ದೀರ್ಘ ಪಟ್ಟಿಯನ್ನು ಓದಿದ್ದಾರೆ.
ಆ ಸಾಧನೆಗಳ ಪಟ್ಟಿಯಲ್ಲಿ ತಮಿಳುನಾಡು ದೇಶದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮತ್ತು ಮಹಿಳಾ ಸಬಲೀಕರಣದ ಭಾಗವಾಗಿ ಭಾರತದಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಶೇ. 42 ರಷ್ಟು ಮಹಿಳೆಯವರು ತಮಿಳುನಾಡಿನವರು ಎಂದು ಹೇಳಿದ್ದಾರೆ.
ಮಹಿಳಾ ಶಿಕ್ಷಣ, ಸುರಕ್ಷತೆ, ಆರೋಗ್ಯ ರಕ್ಷಣೆ ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳ ಬೆಳವಣಿಗೆಯಲ್ಲಿನ ಪ್ರಗತಿಯನ್ನು ಎತ್ತಿ ತೋರಿಸಿದ್ದಾರೆ. ಇವೆಲ್ಲವನ್ನೂ ತಮ್ಮ ಒಂದು ತಿಂಗಳ ಸೋಫಾ ಮಾದರಿ ಆಡಳಿತದಲ್ಲಿ ಸಾಧಿಸಲಾಗಿದೆಯೇ ಅಥವಾ 5 ವರ್ಷಗಳ ಡಿಎಂಕೆಯ ದ್ರಾವಿಡ ಮಾದರಿ ಆಡಳಿತದಲ್ಲಿ ಸಾಧಿಸಲಾಗಿದೆಯೇ ಎಂದು ಸಿಎಂ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಮುಂದುವರೆದು, ಮೇಕೆದಾಟು ವಿಷಯದ ಬಗ್ಗೆ ಸಿಎಂ ಮೌನವಾಗಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಅಥವಾ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಅವರ ಹೊಸ ಮಿತ್ರಪಕ್ಷದೊಂದಿಗೆ ಅದನ್ನು ಪ್ರಸ್ತಾಪಿಸಲಿಲ್ಲ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net