ಜಂತರ್ ಮಂತರ್​​ನಲ್ಲಿ ಮತ್ತೆ ಪ್ರತಿಭಟನೆಗೆ ಅನುಮತಿ ಕೇಳಲು ಮುಂದಾದ ಸಿಜೆಪಿ: ಬೆಳಗ್ಗೆ 10 ಗಂಟೆಗೆ ದೆಹಲಿ ಪೊಲೀಸರ ಭೇಟಿ | CJP

ಎಸ್​ಐಆರ್ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್​​ನಲ್ಲಿ ಅ. 10ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡದೇ ಮತ್ತು ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪ್ರತಿಭಟನೆಯನ್ನು ಹತ್ತಿಕ್ಕಿದ ಬಳಿಕ, ಇಂದು(ಅ. 12) ಮತ್ತೆ ಶಾಂತಿಯುತ ಪ್ರತಿಭಟನೆ ನಡೆಸಲು ದಿನಾಂಕವನ್ನು ನಿಗದಿಪಡಿಸುವಂತೆ ಕೋರಿ ದೆಹಲಿ ಪೊಲೀಸರನ್ನು ಸಂಪರ್ಕಿಸಲಿದೆ ಎಂದು ವರದಿಯಾಗಿದೆ.
ಜಂತರ್ ಮಂತರ್​​ನಲ್ಲಿ ಮತ್ತೆ ಪ್ರತಿಭಟನೆಗೆ ಅನುಮತಿ ಕೇಳಲು ಮುಂದಾದ ಸಿಜೆಪಿ: ಬೆಳಗ್ಗೆ 10 ಗಂಟೆಗೆ ದೆಹಲಿ ಪೊಲೀಸರ ಭೇಟಿ | CJP
Published on: 

ನವದೆಹಲಿ: ಎಸ್​ಐಆರ್ ವಿವಾದ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್​​ನಲ್ಲಿ ಅ. 10ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡದೇ ಮತ್ತು ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪ್ರತಿಭಟನೆಯನ್ನು ಹತ್ತಿಕ್ಕಿದ ಬಳಿಕ, ಇಂದು(ಅ. 12) ಮತ್ತೆ ಶಾಂತಿಯುತ ಪ್ರತಿಭಟನೆ ನಡೆಸಲು ದಿನಾಂಕವನ್ನು ನಿಗದಿಪಡಿಸುವಂತೆ ಕೋರಿ ದೆಹಲಿ ಪೊಲೀಸರನ್ನು ಸಂಪರ್ಕಿಸಲಿದೆ ಎಂದು ವರದಿಯಾಗಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಸಿಜೆಪಿ ಸಂಚಾಲಕ ಅಶುತೋಷ್ ರಂಕಾ, ಪ್ರತಿಭಟನೆಗೆ ಅನುಮತಿ ಕೋರಿ ನಾನು ಮತ್ತು ಸಿಜೆಪಿಯ ಸಹ-ಸಂಚಾಲಕ ಸೌರವ್ ದಾಸ್, ಕಾನೂನು ಮುಖ್ಯಸ್ಥೆ ರತ್ನಾ ಸಿಂಗ್ ಮತ್ತು ಇತರ ನಾಯಕರು ಬೆಳಿಗ್ಗೆ 10 ಗಂಟೆಗೆ ಸಂಸತ್ತಿನ ಬೀದಿ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರು 24 ಗಂಟೆಯೊಳಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಮಗೆ ದಿನಾಂಕವನ್ನು ನಿಗದಿಪಡಿಸಬೇಕು. ಇಲ್ಲದಿದ್ದರೆ, ಸಿಜೆಪಿ ಮತ್ತೊಂದು ಪ್ರತಿಭಟನೆಗೆ ಕರೆ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Also Read
ಎಸ್​ಐಆರ್ ಅಕ್ರಮ: ದೆಹಲಿಯಲ್ಲಿಂದು ಮತ್ತೆ ಇಂಡಿಯಾ ಬ್ಲಾಕ್​ ಬೃಹತ್ ಪ್ರತಿಭಟನೆ; ಸುಪ್ರೀಂಕೋರ್ಟ್​ಗೆ ಮೆರವಣಿಗೆ, ಭೇಟಿಗೆ ನಿರಾಕರಿಸಿದ ಸಿಜೆಐ| INDIA Bloc
ಜಂತರ್ ಮಂತರ್​​ನಲ್ಲಿ ಮತ್ತೆ ಪ್ರತಿಭಟನೆಗೆ ಅನುಮತಿ ಕೇಳಲು ಮುಂದಾದ ಸಿಜೆಪಿ: ಬೆಳಗ್ಗೆ 10 ಗಂಟೆಗೆ ದೆಹಲಿ ಪೊಲೀಸರ ಭೇಟಿ | CJP

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಅ. 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಆದಾಗ್ಯೂ, ಶನಿವಾರ ಮುಂಬೈನಿಂದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ದೆಹಲಿ ಪೊಲೀಸರು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ರಾಂಕಾ ಮತ್ತು ದಾಸ್ ಅವರನ್ನು ಬಂಧಿಸಿದರು.ತಮ್ಮನ್ನು ವಿಮಾನದಿಂದ ಬಲವಂತವಾಗಿ ಹೊರಗೆಳೆದು, ಕಸ್ಟಡಿಗೆ ಲಿಖಿತ ಕಾರಣಗಳನ್ನು ತೋರಿಸದೆ ಬಂಧಿಸಲಾಗಿದೆ ಎಂದ ಮೂವರು ಆರೋಪಿಸಿದ್ದಾರೆ.

ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಭಾನುವಾರ ಮೂವರನ್ನು ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮೂವರು, ಪೊಲೀಸರು ತಮ್ಮ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಬಂಧನದ ಸಮಯದಲ್ಲಿ ತಮ್ಮ ಕಾನೂನು ಸಲಹೆಗಾರರನ್ನು ಸಂಪರ್ಕಿಸಲು ನಿರಾಕರಿಸಲಾಯಿತು ಎಂದು ಆರೋಪಿಸಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net