ಸಿಇಸಿ ವಿರುದ್ಧ ಸಿಜೆಪಿ ಪ್ರತಿಭಟನೆ; ರಾತ್ರಿಯೇ ದೆಹಲಿಯಲ್ಲಿ ಕನಿಷ್ಠ 1,000 ಮಂದಿಯನ್ನು ಬಂಧಿಸಿದ ಪೊಲೀಸರು| CJP protests

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ(ಅ. 10) ಕಾಕ್ರೋಚ್ ಜನತಾ ಪಕ್ಷ ಕರೆ ನೀಡಿದ್ದ ಪ್ರತಿಭಟನೆಗೆ ಮುಂಚಿತವಾಗಿ ದೆಹಲಿಯಲ್ಲಿ ರಾತ್ರಿಯಿಡಿ ಕನಿಷ್ಠ 1,000 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಿಇಸಿ ವಿರುದ್ಧ ಸಿಜೆಪಿ ಪ್ರತಿಭಟನೆ; ರಾತ್ರಿಯೇ ದೆಹಲಿಯಲ್ಲಿ ಕನಿಷ್ಠ 1,000 ಮಂದಿಯನ್ನು ಬಂಧಿಸಿದ ಪೊಲೀಸರು| CJP protests
Published on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ(ಅ. 10) ಕಾಕ್ರೋಚ್ ಜನತಾ ಪಕ್ಷ ಕರೆ ನೀಡಿದ್ದ ಪ್ರತಿಭಟನೆಗೆ ಮುಂಚಿತವಾಗಿ ದೆಹಲಿಯಲ್ಲಿ ರಾತ್ರಿಯಿಡಿ ಕನಿಷ್ಠ 1,000 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಶನಿವಾರ ಮಧ್ಯರಾತ್ರಿ 12:30ರ ಹೊತ್ತಿಗೆ ದೆಹಲಿಯ ಆಗ್ನೇಯ ಜಿಲ್ಲೆಗೆ ಸೇರಿದ 250 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಿಶೇಷವಾಗಿ ಇವರು 2020ರ ಸಿಎಎ ವಿರೋಧಿ ಪ್ರತಿಭಟನೆಗಳ ಕೇಂದ್ರವಾಗಿದ್ದ ಶಾಹೀನ್ ಬಾಗ್ ಪ್ರದೇಶದವರಾಗಿದ್ದಾರೆ. ಮತ್ತು ಅದೇ ರೀತಿ ಉತ್ತರ ಪ್ರದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಶಾಹ್ದಾರಾ ಮತ್ತು ಪೂರ್ವ ದೆಹಲಿ ಜಿಲ್ಲೆಗಳಿಂದ 100ಕ್ಕೂ ಮಂದಿಯನ್ನು ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಈ ಬಂಧನ ಪ್ರಕ್ರಿಯೆ ಮುನ್ನೆಚ್ಚರಿಕಾ ಕ್ರಮಗಳಾಗಿವೆ.ಪ್ರತಿಭಟನಾಕಾರರನ್ನು ಸಂಘಟಿಸುವ ಹಾಗೂ 'ಕಾನೂನುಬಾಹಿರ' ಪರಿಸ್ಥಿತಿಯನ್ನು ಸೃಷ್ಟಿಸುವ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಬಂಧಿತರನ್ನು ಪ್ರತಿ ಜಿಲ್ಲೆಯಲ್ಲಿ ನಿಗದಿಪಡಿಸಿರುವ 13 ಪ್ರಮುಖ ಬಂಧನ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

Also Read
ಸ್ಟಾರ್​ಲಿಂಕ್ ವಿವಾದ; ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ವಸಾಹತುವಲ್ಲ: ಎಲಾನ್ ಮಸ್ಕ್​ಗೆ ಕಮಲ್ ಹಾಸನ್ ತಿರುಗೇಟು | Kamal Haasan
ಸಿಇಸಿ ವಿರುದ್ಧ ಸಿಜೆಪಿ ಪ್ರತಿಭಟನೆ; ರಾತ್ರಿಯೇ ದೆಹಲಿಯಲ್ಲಿ ಕನಿಷ್ಠ 1,000 ಮಂದಿಯನ್ನು ಬಂಧಿಸಿದ ಪೊಲೀಸರು| CJP protests

ಇನ್ನೂ ಸಿಜೆಪಿ ಪ್ರತಿಭಟನೆ ಅನುಮತಿ ನೀಡಲಾಗಿಲ್ಲ. ಆದಾಗ್ಯೂ ನಾಯಕರು ಪ್ರತಿಭಟನೆ ನಡೆಸುವ ಬಗ್ಗೆ ಹೇಳಿರುವ ಹಿನ್ನೆಲೆ ದೆಹಲಿ ಪೊಲೀಸರನ್ನು ನಗರದಾದ್ಯಂತ ಭಾರೀ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಜನಪಥ್-ಕರ್ತವ್ಯ ಪಾತ್ ಕ್ರಾಸಿಂಗ್‌ನಿಂದ 4 ಕಿ.ಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಶುಕ್ರವಾರ ರಾತ್ರಿ 10 ಗಂಟೆಯಿಂದಲೇ 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಅಲ್ಲದೇ ಸೂಕ್ಷ್ಮ ಸ್ಥಳಗಳಲ್ಲಿ ಅನಿಯಂತ್ರಿತ ಜನಸಂದಣಿ ಸೇರದಂತೆ ದೆಹಲಿಯ 57 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಇದಲ್ಲದೆ, ಬೇರೆ ರಾಜ್ಯಗಳಿಂದ ದೆಹಲಿಗೆ ತೆರಳುವ ಎಲ್ಲಾ ರೈಲುಗಳನ್ನು ಬಂದ್ ರದ್ದುಗೊಳಿಸಲಾಗಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net