ಲಂಚ ಆರೋಪ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್​​ಗೆ ಆದೇಶಿಸಿದ ಹೈಕೋರ್ಟ್ | Pinarayi Vijayan

ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಲಂಚ ಪ್ರಕರಣದಲ್ಲಿ ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ ಹಾಗೂ ಅಳಿಯ ಸಿಪಿಎಂ ಶಾಸಕ ಪಿ.ಎ. ಮೊಹಮ್ಮದ್ ರಯಾನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಹೈಕೋರ್ಟ್ ಶುಕ್ರವಾರ(ಅ. 09) ವಿಜಿಲೆನ್ಸ್ ಇಲಾಖೆಗೆ ನಿರ್ದೇಶನ ನೀಡಿದೆ.
ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್
ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್
Published on: 

ತಿರುವನಂತಪುರಂ: ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (CMRL) ಲಂಚ ಪ್ರಕರಣದಲ್ಲಿ ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ ಹಾಗೂ ಅಳಿಯ ಸಿಪಿಎಂ ಶಾಸಕ ಪಿ.ಎ. ಮೊಹಮ್ಮದ್ ರಯಾನ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಹೈಕೋರ್ಟ್ ಶುಕ್ರವಾರ(ಅ. 09) ವಿಜಿಲೆನ್ಸ್ ಇಲಾಖೆಗೆ ನಿರ್ದೇಶನ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುವ ಬದಲಾಗಿ ತಕ್ಷಣವೇ ರಾಜ್ಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿ ವಕೀಲರಾದ ಕೆ.ಎಂ.ಶೆಹಜಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

Also Read
ಸ್ಟಾರ್‌ಲಿಂಕ್ ಲೈಸೆನ್ಸ್ ಕಾಳಗ: ಡಿಯರ್ ಪ್ರಧಾನಿ ಅಂಬಾನಿ ಕ್ಷಮಿಸಿ! ನೀವೇ ಭಾರತದ ನಿಜವಾದ ಬಾಸ್ ಎಂದು ಗೊತ್ತಿರಲಿಲ್ಲ: ವಾಗ್ದಾಳಿ ಮುಂದುವರೆಸಿದ ಎಲಾನ್ ಮಸ್ಕ್ |Elon Musk
ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್

ಐಟಿ ಸಲಹಾ ಸೇವೆಗಳ ಸೋಗಿನಲ್ಲಿ CMRL ವೀಣಾ ವಿಜಯನ್ ಅವರ ಎಕ್ಸಲಾಜಿಕ್ ಸೊಲ್ಯೂಷನ್ಸ್‌ಗೆ 2.78 ಕೋಟಿ ರೂಪಾಯಿಗಳ ಅಕ್ರಮ ಪಾವತಿಗಳನ್ನು ಮಾಡಿದೆ ಎಂದು ಆರೋಪಿಸಿರುವ ED ವರದಿಯಲ್ಲಿ ಹೆಚ್ಚಿನ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.

ಇತ್ತೀಚೆ ಮಾಜಿ ಸಿಎಂ ವಿಜಯನ್, ವೀಣಾ ಮತ್ತು ರಿಯಾಸ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಇಡಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದ ನಂತರ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಪೊಲೀಸ್ ತನಿಖೆಗೆ ಆದೇಶಿಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net