ಪಶ್ಚಿಮ ಏಷ್ಯಾ ಸಂಘರ್ಷದ ನಂತರವೂ ಭಾರತದಲ್ಲಿ ಇಂಧನ ಬಳಕೆ ವಾಸ್ತವವಾಗಿ ಹೆಚ್ಚಾಗಿದೆ ಆದರೂ, ಯಾವುದೇ ಕೊರತೆಯಿಲ್ಲದಂತೆ ಪರಿಸ್ಥಿತಿಯನ್ನು ನಿಭಾಯಿಸಲು ನಮಗೆ ಸಾಧ್ಯವಾಗುತ್ತಿದೆ ಎಂದು ದುಬೆ ತಿಳಿಸಿದ್ದಾರೆ. ಇದೇ ವೇಳೆ, ಈ ಬಿಕ್ಕಟ್ಟು ಭಾರತವು ಹಸಿರು ಇಂಧನದತ್ತ (Green Energy) ಮುಖ ಮಾಡುವುದನ್ನು ಮತ್ತಷ್ಟು ವೇಗಗೊಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ದೇಶದಲ್ಲಿ 200 ಗಿಗಾವ್ಯಾಟ್‌ಗಿಂತಲೂ ಅಧಿಕ ಸೌರಶಕ್ತಿಯನ್ನು ಅಳವಡಿಸಲಾಗಿದ್ದು, ಇಂಧನ ಆಮದು ಬಿಲ್‌ನಿಂದ ಉಂಟಾಗುವ ವಿದೇಶಿ ವಿನಿಮಯದ ಸಮಸ್ಯೆಗಳ ಕಾರಣದಿಂದಾಗಿ, ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ಹಸಿರು ಇಂಧನ ಆಯ್ಕೆಗಳ ಕಡೆಗೆ ದೇಶದ ಹೆಜ್ಜೆಗಳು ಇನ್ನಷ್ಟು ವೇಗವಾಗಿ ಸಾಗಲಿವೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.