ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಯುವಕನಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಬೆಂಬಲ ಹಾಗೂ ಪ್ರಶಂಸೆಗಳು ಹರಿದುಬರುತ್ತಿವೆ. ವಿಡಿಯೋದ ಕಾಮೆಂಟ್ ಸೆಕ್ಷನ್ನಲ್ಲಿ ಬಹುತೇಕ ನೆಟ್ಟಿಗರು, "ಸಾಮಾನ್ಯ ಬೀದಿ ಬದಿಯ ವ್ಯಾಪಾರಿಯಾದ ಈತನಿಗೆ ಇರುವ ಪ್ರಬುದ್ಧತೆ ಮತ್ತು ಸೂಕ್ಷ್ಮ ಆಲೋಚನಾ ಶಕ್ತಿ, ದೊಡ್ಡ ದೊಡ್ಡ ಪದವಿಗಳನ್ನು ಪಡೆದ ಉನ್ನತ ಶಿಕ್ಷಣಾವಂತರಿಗೂ ಇಲ್ಲ" ಎಂದು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಸಮಾಜದ ನೈಜ ಚಿತ್ರಣವನ್ನು ಇಷ್ಟು ಸರಳವಾಗಿ ಬಿಚ್ಚಿಟ್ಟ ಯುವಕನ ಪ್ರಖರ ಜ್ಞಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).