ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸಕ್ಕೆ ಭಾರತವೇ ಸೂಕ್ತ: ಚೀನಾ ಬದಲು ದೆಹಲಿಯತ್ತ ಮುಖಮಾಡಿದ ನೇಪಾಳ ಪ್ರಧಾನಿ ಬಾಲೇನ್ ಶಾ! | Balen Shah India VIsit

Balen Shah India VIsit: ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸುಮಾರು ಎಂಟು ತಿಂಗಳ ಬಳಿಕ, ಬಾಲೇನ್​ ಶಾ ಅವರು ನವೆಂಬರ್‌ನಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಮುಂದಿನ ತಿಂಗಳು ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರವಾಸವು ಅವರ ಮೊದಲ ಅಧಿಕೃತ ದ್ವಿಪಕ್ಷೀಯ ವಿದೇಶಿ ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸಕ್ಕೆ ಭಾರತವೇ ಸೂಕ್ತ: ಚೀನಾ ಬದಲು ದೆಹಲಿಯತ್ತ ಮುಖಮಾಡಿದ ನೇಪಾಳ ಪ್ರಧಾನಿ ಬಾಲೇನ್ ಶಾ! | Balen Shah India VIsit
Published on: 

Balen Shah India VIsit: ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸುಮಾರು ಎಂಟು ತಿಂಗಳ ಬಳಿಕ, ಬಾಲೇನ್​ ಶಾ ಅವರು ನವೆಂಬರ್‌ನಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಮುಂದಿನ ತಿಂಗಳು ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರವಾಸವು ಅವರ ಮೊದಲ ಅಧಿಕೃತ ದ್ವಿಪಕ್ಷೀಯ ವಿದೇಶಿ ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ನೇಪಾಳದ ನೂತನ ಪ್ರಧಾನಿಯಾದವರು ತಮ್ಮ ಮೊದಲ ವಿದೇಶಿ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿಕೊಳ್ಳುವುದು ವಾಡಿಕೆ. ಆದರೆ ಇತ್ತೀಚಿನ ಕೆಲವು ನಾಯಕರು ಈ ಸಂಪ್ರದಾಯವನ್ನು ಪಕ್ಕಕ್ಕಿಟ್ಟು ಇತರ ದೇಶಗಳಿಗೆ ತೆರಳಿದ್ದರು. ಇದೀಗ ಬಾಲೇನ್ ಶಾ ಅವರು ಭಾರತ ಪ್ರವಾಸವನ್ನು ನಿಗದಿಪಡಿಸಿರುವುದು ಉಭಯ ದೇಶಗಳ ನಿಕಟ ರಾಜತಾಂತ್ರಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ:ರಾಹುಲ್ ಗಾಂಧಿ ಅರಾಜಕತೆಯ ಪ್ರತೀಕ, ಸಂವಿಧಾನದ ಅರಿವಿಲ್ಲದ ಅಪಕ್ಷ ರಾಜಕಾರಣಿ!...ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ಬಿಜೆಪಿ ಕಿಡಿ | BJP

ಅಜೆಂಡಾದಲ್ಲೇನಿದೆ..?

ಈ ಮೂರು ದಿನಗಳ ಪ್ರವಾಸದ ವೇಳೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಬಾಲೇನ್ ಶಾ ಅವರು ಉನ್ನತ ಮಟ್ಟದ ನಿಯೋಗ ಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ. ಈ ಭೇಟಿಯ ಅಜೆಂಡಾದಲ್ಲಿ ಗಡಿ ಭಾಗದ ಮೂಲಭೂತ ಸೌಕರ್ಯಗಳ ವೃದ್ಧಿ, ಜಲವಿದ್ಯುತ್ ಯೋಜನೆಗಳು ಮತ್ತು ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಸೇರಿವೆ. ಭಾರತದ ಆರ್ಥಿಕ ಸಹಾಯದಿಂದ ನಿರ್ಮಾಣಗೊಂಡಿರುವ ಪನೌತಿಯಲ್ಲಿನ ನೇಪಾಳ ಪೊಲೀಸ್ ಅಕಾಡೆಮಿ, ಉತ್ತರ ಪ್ರದೇಶದ ಸುನೌಲಿ ಗಡಿಗೆ ಹತ್ತಿರವಿರುವ ಭೈರಹಾವಾ ಸಮಗ್ರ ಚೆಕ್ ಪೋಸ್ಟ್ ಹಾಗೂ ಮಹಾಕಾಳಿ ನದಿಯ ಮೇಲಿನ ಸೇತುವೆಗಳು ಈ ಸಂದರ್ಭದಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಇದರ ಜೊತೆಗೆ ದೋಧಾರಾ ಚಂದಾನಿ ಚೆಕ್ ಪೋಸ್ಟ್, ಲೋವರ್ ಅರುಣ್ ಜಲವಿದ್ಯುತ್ ಯೋಜನೆ ಹಾಗೂ ಸಿಲಿಗುರಿ-ಝಾಪಾ ಪೆಟ್ರೋಲಿಯಂ ಪೈಪ್‌ಲೈನ್ ನಿರ್ಮಾಣ ಕಾಮಗಾರಿಗಳಿಗೆ ಇಬ್ಬರೂ ನಾಯಕರು ಚಾಲನೆ ನೀಡುವ ನಿರೀಕ್ಷೆಯಿದೆ.

ಆರ್ಥಿಕ ಮತ್ತು ಇಂಧನ ವಲಯದಲ್ಲಿ ಜಲವಿದ್ಯುತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಾರತದ ಸರ್ಕಾರಿ ಸ್ವಾಮ್ಯದ ಎನ್‌ಎಚ್‌ಪಿಸಿ (NHPC) ಸಂಸ್ಥೆ ಸಹಯೋಗ ಹೊಂದಿರುವ 750 ಮೆಗಾವ್ಯಾಟ್‌ನ ವೆಸ್ಟ್ ಸೆಟಿ, 480 ಮೆಗಾವ್ಯಾಟ್‌ನ ಫುಕೋಟ್ ಕರ್ನಾಲಿ ಹಾಗೂ 450 ಮೆಗಾವ್ಯಾಟ್‌ನ ಸೆಟಿ ನದಿ-6 ಯೋಜನೆಗಳು ಮಾತುಕತೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿವೆ. ಇದರೊಂದಿಗೆ ಕೋಶಿ ನದಿ ಯೋಜನೆ, ಪ್ರಸ್ತಾವಿತ ಅಯೋಧ್ಯೆ-ಜನಕಪುರ ರೈಲು ಮಾರ್ಗ ಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತದಿಂದ ತಾಂತ್ರಿಕ ನೆರವು ಪಡೆಯುವ ಕುರಿತೂ ಚರ್ಚೆಗಳು ನಡೆಯಲಿವೆ.

ಅಭಿವೃದ್ಧಿ ಯೋಜನೆಗಳಷ್ಟೇ ಅಲ್ಲದೆ ದೀರ್ಘಕಾಲದಿಂದ ಬಗೆಹರಿಯದೆ ಉಳಿದಿರುವ ಸೂಕ್ಷ್ಮ ವಿಷಯಗಳೂ ಈ ಭೇಟಿಯಲ್ಲಿ ಚರ್ಚೆಗೆ ಬರಲಿವೆ ಎನ್ನಲಾಗಿದ್ದು, ಮುಖ್ಯವಾಗಿ ಕಾಲಾಪಾನಿ-ಲಿಪುಲೇಖ್ ಗಡಿ ವಿವಾದ, ನೇಪಾಳದ ವಿಮಾನಗಳಿಗೆ ಭಾರತದ ಮೂಲಕ ಹೆಚ್ಚಿನ ವೈಮಾನಿಕ ಮಾರ್ಗಗಳ ಲಭ್ಯತೆ, ವ್ಯಾಪಾರ ಸಮತೋಲನದಲ್ಲಿನ ವ್ಯತ್ಯಾಸ ಹಾಗೂ ಸರಕು ಸಾಗಣೆ ಒಪ್ಪಂದಗಳು ಮಾತುಕತೆಯ ಮುಖ್ಯ ವಿಷಯಗಳಾಗಲಿವೆ.

Also Read
ವಿದೇಶಿ ರಕ್ಷಣಾ ಪಡೆಗಳಿಗೆ ನೇಪಾಳ ನೋ ಎಂದಿದ್ದೇಕೆ: ಭಾರತ, ಅಮೆರಿಕ ಆಫರ್ ತಿರಸ್ಕರಿಸಲು 2015 ರ ಆ ಕಹಿ ಅನುಭವವೇ ಕಾರಣನಾ...? | Nepal Floods
ಮೊದಲ ದ್ವಿಪಕ್ಷೀಯ ವಿದೇಶಿ ಪ್ರವಾಸಕ್ಕೆ ಭಾರತವೇ ಸೂಕ್ತ: ಚೀನಾ ಬದಲು ದೆಹಲಿಯತ್ತ ಮುಖಮಾಡಿದ ನೇಪಾಳ ಪ್ರಧಾನಿ ಬಾಲೇನ್ ಶಾ! | Balen Shah India VIsit

ಸಾಲದ ನೆರವಿಗೆ ಮನವಿ...?

ಇದಲ್ಲದೆ ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂಕಷ್ಟಕ್ಕೆ ಸ್ಪಂದಿಸಿದ್ದ ಭಾರತವು, 130 ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ತಜ್ಞರ ತಂಡವನ್ನು ಕಳುಹಿಸಿ ನೆರವಾಗಿತ್ತು. ಈ ಮಾನವೀಯ ನೆರವಿಗೆ ನೇಪಾಳ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಯೋಜನಾ ಮೂಲಸೌಕರ್ಯಗಳ ಮರುನಿರ್ಮಾಣಕ್ಕಾಗಿ ನೇಪಾಳವು ಭಾರತದಿಂದ ಆರ್ಥಿಕ ಅನುದಾನ ಹಾಗೂ ಸಾಲದ ನೆರವಿಗೆ ಮನವಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಆರಂಭದಲ್ಲಿ ವಿದೇಶಿ ರಾಜತಾಂತ್ರಿಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಬಾಲೇನ್​ ಶಾ, ಇದೀಗ ನೇರ ಚರ್ಚೆಗಳಿಗೆ ಮುಂದಾಗಿರುವುದು ಅವರ ಪ್ರಬುದ್ಧ ವಿದೇಶಾಂಗ ನೀತಿಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರವಾಸವು ನೇಪಾಳ ಹಾಗೂ ಭಾರತದ ನಡುವಿನ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಜೊತೆಗೆ, ಗಡಿ ಮತ್ತು ಆರ್ಥಿಕ ವಲಯದ ದೀರ್ಘಕಾಲದ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ.(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net