ಜೊತೆಗೆ ಜಬಲ್ಪುರದ ಡಿ.ಪಿ. ಮಿಶ್ರಾ ತಮ್ಮ ಪುಸ್ತಕದಲ್ಲಿ ನಾವು ಪಟೇಲ್ ಹೆಸರನ್ನು ಪ್ರಸ್ತಾಪಿಸಿದಾಗ, ನಮ್ಮ ಮನಸ್ಸಿನಲ್ಲಿ ಪ್ರಧಾನ ಮಂತ್ರಿ ಹುದ್ದೆ ಇರಲಿಲ್ಲ ಎಂದು ಬರೆದಿದ್ದಾರೆ ಎಂದು ತಿಳಿಸಿರುವ ರಾಜಮೋಹನ್ ಗಾಂಧಿ, ಪಟೇಲ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತೇವೆ ಎಂದು ಅನೇಕ ಜನರು ಭಾವಿಸಿದ್ದರು ಆದರೆ ಅವರನ್ನು ಪ್ರಧಾನಿ ಮಾಡುವ ಬಗ್ಗೆ ಯಾವುದೇ ಚಿಂತನೆ ಇರಲಿಲ್ಲ. ಪಟೇಲ್ ಪ್ರಧಾನಿಯಾಗಬೇಕೆಂದು ಕಾಂಗ್ರೆಸ್ ನಾಯಕರು ಬಯಸಿದ್ದರೆ, ಕನಿಷ್ಠ ಕೆಲವು ಪತ್ರಿಕೆಗಳಾದರೂ ನೆಹರೂ ಪ್ರಧಾನಿಯಾಗುವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆಂದು ವರದಿ ಮಾಡುತ್ತಿದ್ದವು. ಆದರೆ ಸರ್ದಾರ ಪಟೇಲ್ಗೆ ನೆಹರು ಪ್ರಧಾನಿಯಾಗಿದ್ದು ಖುಷಿ ತಂದಿತ್ತು. ಅವರನ್ನು ಬೆಂಬಲಿಸಿದ್ದರು ಎಂದು ಹೇಳಿದ್ದಾರೆ (ಏಜೆನ್ಸೀಸ್).