ಬಳಿಕ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಡಿ. 14ರ ಬೆಳಗ್ಗೆ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಅವರು ದಾನಕ್ಕಾಗಿ ಹಣವನ್ನು ಸಂಗ್ರಹಿಸಲು ಫ್ಯಾಷನ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚುವರಿ ಹಣವನ್ನು ಸಂಗ್ರಹಿಸಲು ಅವರು 2022ರ ವಿಶ್ವಕಪ್‌ನ ಆಯ್ದ ಸ್ಮರಣಿಕೆಗಳನ್ನು ಹರಾಜು ಹಾಕಲಿದ್ದಾರೆ. ಮುಂಬೈ ಲೆಗ್‌ನಲ್ಲಿ ಲೂಯಿಸ್ ಸುವಾರೆಜ್ ಒಳಗೊಂಡ ಸ್ಪ್ಯಾನಿಷ್ ಸಂಗೀತ ಕಾರ್ಯಕ್ರಮವೂ ಸೇರಿದೆ. ಧೋನಿ, ಕರೀಷ್ಮಾ ಕಪೂರ್ ಸೇರಿ ಅನೇಕ ಸೆಲೆಬ್ರಿಟಿಗಳು ಭೇಟಿಯಾಗುವ ನಿರೀಕ್ಷೆ ಇದೆ.