ಸಾಕ್ಷ್ಯ ಸಂಗ್ರಹಿಸಲು ತನ್ನ ಪಾಲಕರನ್ನು ಕೊಂದ ಸ್ಥಳ ಅಂದರೆ ಮನೆಗೆ ಕರೆತಂದಾಗ ಆರೋಪಿ ದಿಢೀರ್ ಉಲ್ಟಾ ಹೊಡೆದಿದ್ದು, ನನ್ನ ತಾಯಿ ಎಲ್ಲಿ ಎಂದು ಪೊಲೀಸರನ್ನೇ ಕೇಳಿದ್ದಾನೆ. ಇದೆಲ್ಲಾ ಸುಳ್ಳು, ಮನೆ ಹೀಗಿರಲಿಲ್ಲ ಎಂದು ಕೊಲೆಯ ಬಳಿಕ ಅಜೀಶ್ ವಿಚಿತ್ರವಾಗಿ ವರ್ತಿಸಿರುವುದನ್ನು ಖಾಕಿ ಪಡೆ ನೋಟ್ ಮಾಡಿಕೊಂಡಿದೆ. ಇದಲ್ಲದೇ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದಾಗ, ಅಜೀಶ್ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರೇ, ಇತ್ತ ಈತ ಮಾತ್ರ ಮನೆಯಲ್ಲಿ ಬೈಬಲ್ ಓದುತ್ತಾ, ಕೈಯಲ್ಲಿ ಮಣಿಗಳನ್ನು ಹಿಡಿದುಕೊಂಡಿದ್ದನ್ನು ಗಮನಿಸಿದ್ದಾರೆ.