"ನನ್ನಂತಹ ನೇರ ನುಡಿಯ ವ್ಯಕ್ತಿಗಳನ್ನು ಖಂಡಿತ ರಾಜಕೀಯದಲ್ಲಿ ಒಪ್ಪಿಕೊಳ್ಳುವುದಿಲ್ಲ. ಯಾಕಂದರೆ, ಅನೇಕ ಜನರು ನನ್ನನ್ನು ಕೊಬ್ಬು, ದುರಂಹಕಾರದ ವ್ಯಕ್ತಿ ಎನ್ನುತ್ತಾರೆ. ಆದರೆ, ಅಸಲಿಗೆ ನಾನಲ್ಲ ಅದು. ಅವರಿಗೆ ಬಹುಶಃ ಸೊಕ್ಕು ಅನಿಸಬಹುದು. ಆದ್ರೆ, ನನ್ನ ಪ್ರಕಾರ, ನೇರ ನುಡಿ ಅಷ್ಟೇ. ಇಲ್ಲಿ, ನೇರ ನುಡಿಗೂ ಮತ್ತು ಸೊಕ್ಕಿಗೂ ಇರುವುದು ಒಂದು ಕೂದಲೆಳೆ ಅಂತರ. ನಾನಿರುವುದೇ ಹೀಗೆ. ಇದರಲ್ಲಿ, ಯಾವುದೇ ಡ್ರಾಮಾ ಅಥವಾ ನಟಿಸುವ ಅವಶ್ಯಕತೆ ಇಲ್ಲ ಎಂದು ಓಪನ್ ಆಗಿ ಹೇಳಿದರು.