ವರರ ಕುತ್ತಿಗೆಗೆ 2 ಕೋಟಿಯ ನೋಟಿನ ಹಾರ: 100 ಅಡಿ ಉದ್ದದ ಗಿಫ್ಟ್ ನೋಡಿ ದಂಗಾದ ಜನ; ವಿಡಿಯೋ ವೈರಲ್! Currency Garland

At a wedding in Mathura, a 100-foot-long garland made of currency notes worth 2 crore rupees was presented to the groom; it has gone viral.
ಮಥುರಾ ಮದುವೆಯಲ್ಲಿ ವರರಿಗೆ 2 ಕೋಟಿ ರೂಪಾಯಿ ನೋಟಿನ ಹಾರ 100 ಅಡಿ ಉದ್ದದ ಹಾರ ವೈರಲ್
Published on: 

ಮಥುರಾ: ಸಾಮಾನ್ಯವಾಗಿ ಮದುವೆಗಳಲ್ಲಿ ವರನಿಗೆ ಗುಲಾಬಿ ಅಥವಾ ಮಲ್ಲಿಗೆ ಹೂವಿನ ಹಾರ ಹಾಕುವುದನ್ನು ನೋಡಿರುತ್ತೇವೆ. ಸ್ವಲ್ಪ ಶ್ರೀಮಂತರ ಮದುವೆಯಾದರೆ ಸಾವಿರಾರು ರೂಪಾಯಿಗಳ ನೋಟಿನ ಹಾರ ಹಾಕುವುದು ಕೂಡ ಇತ್ತೀಚೆಗೆ ಟ್ರೆಂಡ್ ಆಗಿದೆ.

ಆದರೆ, ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದ ಮದುವೆಯೊಂದರಲ್ಲಿ ಇಬ್ಬರು ವರರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ನೋಟಿನ ಹಾರಗಳನ್ನು ಹಾಕಲಾಗಿದ್ದು, ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.

100 ಅಡಿ ಉದ್ದದ ನೋಟಿನ ಹಾರ!

ಮಥುರಾ ಜಿಲ್ಲೆಯ ನಾಗ್ಲಾ ಫೋಂಡಾ ಗ್ರಾಮದಲ್ಲಿ ಈ ಅದ್ದೂರಿ ಘಟನೆ ನಡೆದಿದೆ. ಪ್ರಶಾಂತ್ ಮತ್ತು ಕನ್ಹಾ ರಾಘವ್ ಎಂಬ ಇಬ್ಬರು ಯುವಕರ ಮದುವೆ ಸಂಭ್ರಮದ ಭಾಗವಾಗಿ ವರನ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ 500 ರೂಪಾಯಿ ಮುಖಬೆಲೆಯ ನೋಟುಗಳಿಂದ ತಯಾರಿಸಲಾದ ಬೃಹತ್ ಹಾರಗಳನ್ನು ತಂದು ವರರಿಗೆ ತೊಡಿಸಲಾಗಿದೆ.

ಹಾರಗಳು ಎಷ್ಟು ದೊಡ್ಡದಾಗಿದ್ದವು ಅಂದರೆ, ಅವುಗಳನ್ನು ಒಬ್ಬರು ಅಥವಾ ಇಬ್ಬರು ಎತ್ತಿಕೊಂಡು ಹೋಗಲು ಸಾಧ್ಯವೇ ಇರಲಿಲ್ಲ. ಹತ್ತಾರು ಮಂದಿ ಸೇರಿ ಈ ಬೃಹತ್ ನೋಟಿನ ಹಾರಗಳನ್ನು ಹಿಡಿದುಕೊಂಡು ಬಂದು ವರರ ಕೊರಳಿಗೆ ಹಾಕಿದ್ದಾರೆ.

ಮದುವೆಗೆ ಬಂದಿದ್ದ ನೆಂಟರಿಷ್ಟರು ಹಾಗೂ ಗ್ರಾಮಸ್ಥರು ಈ ದೃಶ್ಯವನ್ನು ಕಂಡು ಒಂದು ಕ್ಷಣ ದಂಗಾಗಿದ್ದು, ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

Also Read
ಕೇವಲ 1 ಗಂಟೆ 10 ನಿಮಿಷದಲ್ಲಿ ಜೀವಂತ ಹೃದಯ ಸಾಗಿಸಿ ಜೀವ ಉಳಿಸಿದ 'ನಮ್ಮ ಮೆಟ್ರೋ'! Namma Metro
At a wedding in Mathura, a 100-foot-long garland made of currency notes worth 2 crore rupees was presented to the groom; it has gone viral.

ಯಾರು ಈ ವರರು?

ಈ ದುಬಾರಿ ಹಾರಗಳನ್ನು ಹಾಕಿಸಿಕೊಂಡ ವರರಾದ ಪ್ರಶಾಂತ್ ಮತ್ತು ಕನ್ಹಾ ರಾಘವ್ ಅವರು ಯೋಗೇಂದ್ರ ಸಿಂಗ್ ಹಾಗೂ ಕುಶಾಲಪಾಲ್ ಸಿಂಗ್ ಅವರ ಪುತ್ರರು. ಇವರು ಮಾರ್ಬಲ್ ಮತ್ತು ಕಲ್ಲಿನ ಶೋರೂಮ್ ಉದ್ಯಮ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಇವರು ರೈತ ನಾಯಕ ಮಹಾವೀರ್ ಸ್ವಾಮಿ ಅವರ ಸೋದರಳಿಯಂದಿರು ಕೂಡ ಹೌದು. ಗೋವರ್ಧನದಲ್ಲಿರುವ ಮದುವೆ ಮಂಟಪವೊಂದರಲ್ಲಿ ಮುದ್ಸೆರಾಸ್ ಗ್ರಾಮದ ಯುವತಿಯರೊಂದಿಗೆ ಇವರ ವಿವಾಹ ನಿಶ್ಚಯವಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

ಮದುವೆ ಮನೆಯಲ್ಲಿ ಹರಿದಾಡಿದ ಈ ನೋಟುಗಳ ವೈಭವ ಕಂಡು ನೆಟ್ಟಿಗರು ಬಗೆಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಂದೆಡೆ ಈ ಅದ್ದೂರಿತನಕ್ಕೆ ಜನ ಬೆರಗಾಗಿದ್ದರೆ, ಮತ್ತೊಂದೆಡೆ ಇಷ್ಟೊಂದು ದೊಡ್ಡ ಮೊತ್ತದ ನಗದು ಪ್ರದರ್ಶನದ ಬಗ್ಗೆ ಚರ್ಚೆಗಳೂ ಶುರುವಾಗಿವೆ. ಅಂದಹಾಗೆ, ಈ ಎರಡೂ ಹಾರಗಳ ಒಟ್ಟು ಮೌಲ್ಯ 2 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದ್ದರೂ, ಅವುಗಳ ನಿಜವಾದ ಮೌಲ್ಯವನ್ನು ಅಧಿಕೃತವಾಗಿ ಯಾರೂ ದೃಢಪಡಿಸಿಲ್ಲ. ಆದರೂ, ಮಥುರಾದ ಈ ಮದುವೆ ಮೆರವಣಿಗೆ ಮಾತ್ರ ಸದ್ಯ ದೇಶಾದ್ಯಂತ ವೈರಲ್ ಆಗುತ್ತಿರುವುದು ಸುಳ್ಳಲ್ಲ, (ಏಜೆನ್ಸೀಸ್​).