ಹೆರಿಗೆ ಸಮಯದಲ್ಲಿ ಪತ್ನಿ ಜತೆಗಿರಲು ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ: ಸಿಎಂ ವಿಜಯ್ ಘೋಷಣೆ! Paternity Leave ​

ಹೆರಿಗೆಯ ಸಮಯದಲ್ಲಿ ಪತ್ನಿಗೆ ಅಗತ್ಯ ಬೆಂಬಲ ನೀಡಲು ಮತ್ತು ನವಜಾತ ಶಿಶುವಿನ ಆರೈಕೆಯಲ್ಲಿ ತಂದೆಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಜನಪರ ನಿರ್ಧಾರಕ್ಕೆ ಸರ್ಕಾರಿ ನೌಕರರ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Paternity Leave
ಹೆರಿಗೆ ಸಮಯದಲ್ಲಿ ಪತ್ನಿ ಜತೆಗಿರಲು ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ: ಸಿಎಂ ವಿಜಯ್ ಘೋಷಣೆ!
Published on: 

ಚೆನ್ನೈ: ತಮಿಳುನಾಡಿನ ಪುರುಷ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಾಹಿತ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆಯನ್ನು ( Paternity Leave ) ಮಂಜೂರು ಮಾಡಿ ಸಿಎಂ ವಿಜಯ್ ಮಹತ್ವದ ಆದೇಶ ಹೊರಡಿಸಿದ್ದಾರೆ.

ಹೆರಿಗೆಯ ಸಮಯದಲ್ಲಿ ಪತ್ನಿಗೆ ಅಗತ್ಯ ಬೆಂಬಲ ನೀಡಲು ಮತ್ತು ನವಜಾತ ಶಿಶುವಿನ ಆರೈಕೆಯಲ್ಲಿ ತಂದೆಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಈ ಜನಪರ ನಿರ್ಧಾರಕ್ಕೆ ಸರ್ಕಾರಿ ನೌಕರರ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಮಿಳುನಾಡಿನಲ್ಲಿ ಪುರುಷ ಸರ್ಕಾರಿ ನೌಕರರಿಗೆ ಇದೇ ಮೊದಲ ಬಾರಿಗೆ ಇಂತಹದೊಂದು ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಅಧಿಕೃತ ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿದೆ.

Also Read
ನನಗೆ ಮದುವೆಯಾಗುವ ಆಸೆಯಿದೆ ಆದರೆ... ವೈರಲ್​ ಆಯ್ತು ಸೌತ್​ ಬ್ಯೂಟಿ ನಿತ್ಯಾ ಮೆನನ್ ಹೇಳಿಕೆ...! Nithya Menen
Paternity Leave

ಈ ನೂತನ ನಿರ್ಧಾರದ ಉದ್ದೇಶವನ್ನು ಸ್ಪಷ್ಟಪಡಿಸಿರುವ ತಮಿಳುನಾಡು ಸರ್ಕಾರ, ಹೆರಿಗೆಯ ಸಮಯವು ತಾಯಿ ಮತ್ತು ನವಜಾತ ಶಿಶು ಇಬ್ಬರಿಗೂ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ಪತ್ನಿಗೆ ದೈಹಿಕ ಹಾಗೂ ಭಾವನಾತ್ಮಕ ಬೆಂಬಲವನ್ನು ನೀಡಲು ಮತ್ತು ಮಗುವಿನ ಆರೈಕೆಯಲ್ಲಿ ತಂದೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ 15 ದಿನಗಳ ಪಿತೃತ್ವ ರಜೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಅರ್ಹ ವಿವಾಹಿತ ಪುರುಷ ಸರ್ಕಾರಿ ನೌಕರರು ಈ 15 ದಿನಗಳ ಪಿತೃತ್ವ ರಜೆಯನ್ನು ಪಡೆದುಕೊಳ್ಳಲು ಸರ್ಕಾರವು ಸೂಕ್ತ ಕಾಲಾವಕಾಶವನ್ನು ನಿಗದಿಪಡಿಸಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಮಗುವಿನ ನಿರೀಕ್ಷಿತ ಜನನ ದಿನಾಂಕಕ್ಕೆ 15 ದಿನಗಳ ಮುಂಚಿತವಾಗಿ ಅಥವಾ ಮಗು ಜನಿಸಿದ ದಿನಾಂಕದಿಂದ ಆರು ತಿಂಗಳ ಒಳಗಾಗಿ ನೌಕರರು ಈ 15 ದಿನಗಳ ರಜೆಯನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದ ತಂದೆಯಂದಿರು ತಮ್ಮ ಕುಟುಂಬದ ಜತೆಗಿದ್ದು ಜವಾಬ್ದಾರಿ ಹಂಚಿಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ.

Also Read
ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ: 63ರ ವೃದ್ಧೆಯನ್ನು ವರಿಸಿದ 71ರ ಅಜ್ಜ, ವಿಶೇಷ ಮದುವೆಗೆ ಸಾಕ್ಷಿಯಾದ ಜಿಲ್ಲಾಧಿಕಾರಿ..! Old Age Home Love
Paternity Leave

ಪ್ರಸ್ತುತ ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 365 ದಿನಗಳ (12 ತಿಂಗಳು) ಪೂರ್ಣ ಪ್ರಮಾಣದ ಹೆರಿಗೆ ರಜೆಯನ್ನು (Maternity Leave) ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಪುರುಷ ನೌಕರರಿಗೂ ಮಗುವಿನ ಆರೈಕೆಗಾಗಿ ಪಿತೃತ್ವ ರಜೆಯನ್ನು ಮಂಜೂರು ಮಾಡಬೇಕೆಂಬ ಬಹುದಿನಗಳ ಬೇಡಿಕೆಯನ್ನು ಸರ್ಕಾರಿ ನೌಕರರ ಸಂಘಟನೆಗಳು ಸರ್ಕಾರದ ಮುಂದಿಟ್ಟಿದ್ದವು. ನೌಕರರ ಈ ನ್ಯಾಯಯುತ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ವಿಜಯ್ ಸರ್ಕಾರ, ಇದೀಗ 15 ದಿನಗಳ ಪಿತೃತ್ವ ರಜೆಯನ್ನು ಅಧಿಕೃತವಾಗಿ ಘೋಷಿಸಿದೆ, (ಏಜೆನ್ಸೀಸ್​).