ನ.24ರಿಂದ ರಾಜ್ಯದ ಹಲವೆಡೆ ಸಾಧಾರಣ ಮಳೆ : ಕೆಲ ಜಿಲ್ಲೆಗಳಲ್ಲಿ 7 ಡಿ.ಸೆ.ವರೆಗೆ ಉಷ್ಣಾಂಶ ಕುಸಿತ - Moderate rain

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ನ.24ರಂದು ಸಾಧಾರಣ ಮಳೆ ಸುರಿಯಲಿದೆ.
ಹವಾಮಾನ ಇಲಾಖೆ ಮಾಹಿತಿ
ರಾಜ್ಯದ ಹಲವೆಡೆ ಮಳೆ
Published on: 

ಬೆಂಗಳೂರು: (Moderate rain) ರಾಜ್ಯದ ಹಲವೆಡೆ ನ.24ರಿಂದ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ. ಆದರೆ, ‘ಅಕ್ವಾನ್ ಸೈಕ್ಲೋನ್‌ನಿಂದ ರಾಜ್ಯಕ್ಕೆ ಯಾವುದೇ ಪರಿಣಾಮ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ನ.24ರಂದು ಸಾಧಾರಣ ಮಳೆ ಸುರಿಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ನ.25 ಮತ್ತು 26ರಂದು ಮಳೆ ಇರಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎಂದಿನಂತೆ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

Also Read
ಜಗನ್ನಾಥ್ ಜಿ.ಶೇಗಜಿ ಪತ್ರ ವ್ಯವಹಾರಕ್ಕೆ ಮಾನ್ಯತೆ ನೀಡಬೇಡಿ : ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಮನವಿ
ಹವಾಮಾನ ಇಲಾಖೆ ಮಾಹಿತಿ

ಮುಂಗಾರು, ಹಿಂಗಾರು ಮೇಲೆ ನೇರವಾಗಿ ಪರಿಣಾಮ ಬೀರುವ ಮೂಲಕ ಮಳೆ ಕೊರತೆಗೆ ಕಾರಣವಾಗಿದ್ದ ಸೂಪರ್ ಎಲ್‌ನಿನೋವು ಚಳಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾತ್ರಿ ಮತ್ತು ಮುಂಜಾನೆ ಹಲವು ಜಿಲ್ಲೆಗಳಲ್ಲಿ ಕೊರೆಯುವ ಚಳಿ ಕಾಣಿಸಿಕೊಳ್ಳುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನ ದಾಖಲಾದರೆ, ಕನಿಷ್ಠ ತಾಪಮಾನದಲ್ಲಿ 4ರಿಂದ 7 ಡಿ.ಸೆ.ವರೆಗೆ ಉಷ್ಣಾಂಶ ಇಳಿಮುಖವಾಗಿದ್ದರಿಂದ ಚಳಿ ಜಾಸ್ತಿಯಾಗಿದೆ.

ರಾಜ್ಯದಲ್ಲಿ ಶುಭ್ರ ವಾತಾವರಣ ಇರುವುದರಿಂದ ಚಳಿ ಹೆಚ್ಚಾಗಲು ಕಾರಣವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 7 ಡಿ.ಸೆ.ವರೆಗೆ ಉಷ್ಣಾಂಶ ಕುಸಿದಿದೆ. ಸೈಕ್ಲೋನ್‌ನಿಂದ ಕರಾವಳಿ ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ. ಆದರೆ, ನಮ್ಮ ರಾಜ್ಯದಲ್ಲಿ ಇದರ ಪ್ರಭಾವ ಇರುವುದಿಲ್ಲ.

ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.