ಕರೆ ಮಾಡಿ ನೆರೆಮನೆಯವರನ್ನು ಕರೆದ ಯುವಕ: ಬಂದು ನೋಡಿದವರಿಗೆ ಕಾದಿತ್ತೊಂದು ಶಾಕ್!

Man Kills Mother
Published on

ಚಂಗನಾಸ್ಸೆರಿ: ಯುವಕನೊಬ್ಬ ಗಂಟಲು ಸೀಳಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಕೊಡಿಥನಂನಲ್ಲಿ ಶನಿವಾರ ರಾತ್ರಿ ನಡೆದಿದ್ದು, ಮೃತರನ್ನು ಕುಂಜನಮ್ಮ (55) ಎಂದು ಗುರುತಿಸಲಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ ಶನಿವಾರ ರಾತ್ರಿ 10:30ರ ಸುಮಾರಿಗೆ ಘಟನೆ ನಡೆದಿದ್ದು, ಮೃತ ಕುಂಜನಮ್ಮ ಮಗ ಜಿತಿನ್​ ಬಾಬು (27) ಎಂಬಾತನನ್ನು ತ್ರಿಕೋಡಿಥನಂ ಪೊಲೀಸರು ಬಂಧಿಸಿ, ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ತಾಯಿ ಮತ್ತ ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿ ತಾಯಿಯ ಗಂಟಲು ಸೀಳಿ ಆರೋಪಿ ಮಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ತನ್ನ ನೆರೆಯವರಿಗೆ ದೂರವಾಣಿ ಕರೆ ಮಾಡಿ ತನ್ನ ಸತ್ತ ತಾಯಿಯ ಮೃತದೇಹ ನೋಡುವಂತೆ ಕರೆದಿದ್ದಾನೆ. ಅದಕ್ಕೂ ಮುನ್ನ ನೀವು ಇಲ್ಲಿಗೆ ಬಂದರೆ ಏನೋ ಒಂದನ್ನು ನೋಡುತ್ತೀರಾ ಎಂದು ಹೇಳಿದ್ದಾನೆ. ಬಂದು ನೋಡಿದವರು ಮೃತದೇಹ ಕಂಡು ಕಂಗಾಲಾಗಿ, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಬೆಡ್​ ರೂಮ್​ನಲ್ಲಿ ಗಂಟಲು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಕುಂಜನಮ್ಮ ಬಿದ್ದಿದ್ದನ್ನು ನೋಡುತ್ತಾರೆ. ಬಳಿಕ ಆಕೆಯ ಶವವನ್ನು ವಶಕ್ಕೆ ಪಡೆದುಕೊಂಡು, ಆರೋಪಿ ಮಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಮತ್ತಷ್ಟು ಖಚಿತ ಪಡಿಸಿಕೊಳ್ಳಲು ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳ ಪರಿಶೀಲನೆ ನಡೆಸಿದೆ. ಶವವನ್ನು ಪರೀಕ್ಷೆಗಾಗಿ ಕೊಟ್ಟಯಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net