ಮಾಜಿ ಪತ್ನಿಯ ಮನೆಗೆ ನುಗ್ಗಿದ ನಟ: ಮಗಳಿಂದ ಬೆದರಿಕೆ ಆರೋಪ

vijaykumar
Published on

ಕೊಚ್ಚಿ: ಮಲಯಾಳಂ ನಟ ವಿಜಯಕುಮಾರ್ ವಿರುದ್ಧ ಆತನ ಪುತ್ರಿಯೇ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

ಈ ಕುರಿತು ವಿಜಯ್​ಕುಮಾರ್​ ಮಗಳಾದ ನಟಿ ಅರ್ಥನಾ ಬಿನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ತನ್ನ ತಂದೆ ಮನೆಗೆ ಅತಿಕ್ರಮ ಪ್ರವೇಶ ಮಾಡುವುದರ ಜತೆಗೆ ಆತ ಆಯ್ಕೆ ಮಾಡದ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದರೆ ತನ್ನ ವೃತ್ತಿಜೀವನವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿರಾಮ ತನಕ ಆದಿ ಪುರುಷ್ ನೋಡಿ ಪರಾರಿಯಾದ ನವವಿವಾಹಿತೆ: ಕೊನೆಗೆ ಪೊಲೀಸರ ಮುಂದೆ ಶಾಕಿಂಗ್ ಟ್ವಿಸ್ಟ್..

ಗೋಕುಲ್ ಸುರೇಶ್ ಅಭಿನಯದ 'ಮುದುಗೌವ್' ಚಿತ್ರದಲ್ಲಿ ಅರ್ಥನಾ ನಟಿಸುವ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆಯನ್ನು ಮಾಡಿದ್ದರು. ತನ್ನ ಮಲತಂದೆ ವಿಜಯಕುಮಾರ್ ಹಾಗೂ ತಾಯಿ ವಿಚ್ಛೇದನ ಕುರಿತು ನ್ಯಾಯಲಯ ಈಗಾಗಲೇ ಆದೇಶ ನೀಡಿದ್ದು, ನಟಿ, ತಾಯಿ ಮತ್ತು ಅಜ್ಜಿಯೊಂದಗೆ ವಾಸವಾಗಿದ್ದಾರೆ.
ವಿಚ್ಛೇದನದ ಸಂದರ್ಭದಲ್ಲಿ ನ್ಯಾಯಲಯವು ಸುಮಾರು 10 ವರ್ಷಗಳ ಹಿಂದೆಯೇ ರಕ್ಷಣಾ ಆದೇಶವನ್ನು ಹೊರಡಿಸಿದೆ. 

ಆತ ಹಲವು ವರ್ಷಗಳಿಂದ ಅತಿಕ್ರಮ ಪ್ರವೇಶ ಮಾಡುತ್ತಿದ್ದು, ಆತನ ವಿರುದ್ಧ ಹಲವು ಪೊಲೀಸ್ ಕೇಸ್‌ಗಳಿವೆ. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನಟಿ ಹೇಳಿದ್ದಾರೆ. ಅಲ್ಲದೇ, ನಟ ವಿಜಯ್​ ತನ್ನ ಬಗ್ಗೆ ಅಪಪ್ರಚಾರದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ನಟಿ ಅರ್ಥನಾ ಆರೋಪಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net