'ಜೈಲರ್ 2' ಸ್ಕ್ರೀನಿಂಗ್ ವೇಳೆ ಭಾರಿ ಎಡವಟ್ಟು: ಥಿಯೇಟರ್‌ನಲ್ಲಿ ರಾಷ್ಟ್ರಗೀತೆಗೆ ಅವಮಾನ? | National flag insult

ತಮಿಳುನಾಡಿನ ಕರೂರಿನ ಥಿಯೇಟರ್ ಒಂದರಲ್ಲಿ ರಾಷ್ಟ್ರಗೀತೆಗೆ ಅಪಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರದೆ ಮೇಲೆ ರಾಷ್ಟ್ರಧ್ವಜವಿದ್ದರೂ 'ಜನ ಗಣ ಮನ' ಬದಲು ಕಮರ್ಷಿಯಲ್ ಹಾಡು ಪ್ರಸಾರವಾಗಿದ್ದು, ನೆಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
 National flag insult
ಕರೂರಿನ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ವಿವಾದ
Published on: 

Karuru Cinema Hall Controversy: ತಮಿಳುನಾಡಿನ ಕರೂರು ಚಿತ್ರಮಂದಿರವೊಂದರಲ್ಲಿ ರಾಷ್ಟ್ರಧ್ವಜ ಪ್ರದರ್ಶನದ ವೇಳೆ ಗಂಭೀರ ಪ್ರಮಾದವೊಂದು ಜರುಗಿದೆ. ರಾಷ್ಟ್ರಗೀತೆ ಮೊಳಗಬೇಕಿದ್ದ ಜಾಗದಲ್ಲಿ ಸಿನಿಮಾದ ಹಾಡು ಪ್ಲೇ ಆಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕರೂರಿನ ಕೊಯಮತ್ತೂರು ರಸ್ತೆಯಲ್ಲಿರುವ 'ಅಜಂತ ಎಲ್ಲೋರಾ ಸಿನಿಮಾಸ್' ಚಿತ್ರಮಂದಿರದಲ್ಲಿ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಇಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಎಂದಿನಂತೆ ಸಿನಿಮಾ ಆರಂಭವಾಗುವುದಕ್ಕೂ ಮುಂಚೆ ಪರದೆಯ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಯಿತು.

ರಾಷ್ಟ್ರಗೀತೆ ಜಗದಲ್ಲಿ ಸಿನಿಮಾ ಹಾಡು

ಇನ್ನು, ಎಂದಿನಂತೆ 'ಜನ ಗಣ ಮನ' ರಾಷ್ಟ್ರಗೀತೆ ಮೊಳಗಬೇಕಿದ್ದ ಆ ಕ್ಷಣದಲ್ಲಿ, ಇದ್ದಕ್ಕಿದ್ದಂತೆ ಕಮರ್ಷಿಯಲ್ ಸಿನಿಮಾದ ಹಾಡು ಕೇಳಿಬಂದಿದೆ. ಈ ಅನಿರೀಕ್ಷಿತ ಎಡವಟ್ಟಿನಿಂದ ಥಿಯೇಟರ್‌ನಲ್ಲಿದ್ದ ಪ್ರೇಕ್ಷಕರು ಶಾಕ್ ಆಗಿದ್ದು, ಕೆಲವರು ಈ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ."

ಸೋಷಿಯಲ್ ಮೀಡಿಯಾದಲ್ಲಿ ವಿರೋಧ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದು ಎಂತಹ ತಪ್ಪು" ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ‘ರಾಷ್ಟ್ರಧ್ವಜಕ್ಕೆ ಹಾಗೂ ರಾಷ್ಟ್ರಗೀತೆಗೆ ಮಾಡಿದ ಅವಮಾನ’ ಎಂದು ಕಿಡಿಕಾರಿದ್ದಾರೆ. ಘಟನೆಯ ಕುರಿತು ಚಿತ್ರಮಂದಿರದ ಆಡಳಿತ ಮಂಡಳಿಯಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಇದನ್ನೂ ಓದಿ: Friendship psychology: ಬೆಸ್ಟ್ ಫ್ರೆಂಡ್ ಬೇರೆಯವರ ಜತೆ ಕ್ಲೋಸ್ ಆದಾಗ ಜಲಸ್ ಆಗುತ್ತಾ? ಯಾಕೀಗೆ ಆಗುತ್ತೆ, ಹ್ಯಾಂಡಲ್ ಮಾಡೋದು ಹೇಗೆ?

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್ 2' ಸಿನಿಮಾವು ಅಕ್ಟೋಬರ್ 15ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ರಜನಿಕಾಂತ್ ಜತೆ ದೊಡ್ಡ ತಾರಾಗಣವೇ ನಟಿಸಿದೆ. ಇದರ ನಡುವೆ ಕರೂರಿನ ಥಿಯೇಟರ್‌ನಲ್ಲಿ ನಡೆದ ಈ ಪ್ರಮಾದವು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net