2024-25 ಸಾಲಿನ ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿ ಪ್ರಕಟಿಸಿದ ಲೋಕಾಯುಕ್ತ | Lokayukta

Karnataka Lokayukta
Published on

ಬೆಂಗಳೂರು: 1984ರ ಕರ್ನಾಟಕ ಲೋಕಾಯುಕ್ತ(Lokayukta) ಕಾಯಿದೆಯ ಅಧಿನಿಮಯದ ಪ್ರಕಾರ, ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಪ್ರತಿವರ್ಷ 30ನೇ ಜೂನ್‌ಗಿಂತ ಮುಂಚಿತವಾಗಿ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಣಾ ಪಟ್ಟಿಯನ್ನು ನಿಗದಿತ ಅಪ್ಲಿಕೇಷನ್​ ಮೂಲಕ ಲೋಕಾಯುಕ್ತಗೆ ಸಲ್ಲಿಸಬೇಕೆಂದು ಅದೇಶೀಸಿದೆ.

ಈ ವಿಷಯವಾಗಿ ಲೋಕಾಯುಕ್ತ ಅದೇಶ ಹೊರಡಿಸಿದ್ದು, ಸರ್ಕಾರಿ ನೌಕರನಲ್ಲದ ವ್ಯಕ್ತಿಯು ವಿವರಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ವೈಫಲ್ಯವಾದರೆ, ಈ ಅಧಿನಿಯಮದಲ್ಲಿ ಹೇಳಿರುವಂತೆ ಆಸ್ತಿಗಳ ವಿವರಣಾ ಪಟ್ಟಿಯ ಸಲ್ಲಿಸದಿರುವಿಕೆಯ ಬಗ್ಗೆ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಕಲಂ22(2)ರಲ್ಲಿ ಅದೇಶಿಲಾಗಿದೆ.

ಇದರಂತೆ ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಈ ವರದಿಯ ಪ್ರತಿಯನ್ನು ಕಳುಹಿಸುವುದೂ ಕೂಡಾ ಅವಶ್ಯಕವಾಗಿರುತ್ತದೆ. ಅಲ್ಲದೆ, ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಕಲಂ 22(1) ರಲ್ಲಿರುವಂತೆ ವರದಿಯನ್ನು ಕಳುಹಿಸಿದ್ದಾಗಿಯೂ ಇಂತಹ ವರದಿಯನ್ನು ಕಳುಹಿಸಿದ ಎರಡು ತಿಂಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ನೌಕರರು ಕಲಂ 22(2) ಅನ್ನು ಪಾಲಿಸುವಲ್ಲಿ ವಿಫಲವಾದರೆ, ಲೋಕಾಯುಕ್ತರು ತಪ್ಪಿತಸ್ಥ ಸಾರ್ವಜನಿಕ ನೌಕರರ ಹೆಸರುಗಳನ್ನು ರಾಜ್ಯದಲ್ಲಿ ಪ್ರಚಲಿತವಾಗಿರುವ ಮೂರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಬಹುದು ಅಥವಾ ಪ್ರಕಟಿಸುವಂತೆ ಮಾಡಬಹುದು ಎಂದು ಹೇಳಿದೆ.

ಅಲ್ಲದೆ, ಈ ಲೋಕಾಯುಕ್ತದ ಅದೇಶದ ಕಲಂ 22ರಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ನೌಕರ ಎಂಬ ವ್ಯಾಖ್ಯಾನದ ಅಡಿಯಲ್ಲಿ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಎಲ್ಲಾ ಸದಸ್ಯರೂ ಸೇರಿರುತ್ತಾರೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net