ಮುಂದೊಂದು ದಿನ ಸೂರ್ಯನಿಂದಲೇ ನಾಶವಾಗಲಿದೆಯಾ ನಮ್ಮ ಭೂಮಿ? ವಿಜ್ಞಾನ ಹೇಳಿದ ಶಾಕಿಂಗ್​ ಸತ್ಯ ಏನು? Earth

ನಮ್ಮ ಸೂರ್ಯ ಸೂಪರ್​ ನೋವಾ ಸ್ಫೋಟದ ಮೂಲಕ ಅಂತ್ಯಗೊಳ್ಳುವುದಿಲ್ಲ. ಬದಲಾಗಿ, ತನ್ನ ಜೀವನದ ಕೊನೆಯ ಹಂತಗಳಲ್ಲಿ ಅದು ನಿಧಾನವಾಗಿ ಬೃಹತ್ ಗಾತ್ರಕ್ಕೆ ವಿಸ್ತರಿಸಿ ಕೆಂಪು ದೈತ್ಯ (Red Giant) ಆಗಲಿದೆ
Earth
ಸಾಂದರ್ಭಿಕ ಚಿತ್ರ
Published on: 

Earth : ಪ್ರತಿದಿನ ನಮಗೆ ಬೆಳಕು ಮತ್ತು ಶಾಖ ನೀಡುವ ಸೂರ್ಯನೇ ಒಂದು ದಿನ ಭೂಮಿಯ ಅಂತ್ಯಕ್ಕೆ ಕಾರಣವಾಗಬಹುದೇ? ಸೂರ್ಯ ಏಕಾಏಕಿ ಸ್ಫೋಟಿಸಿದರೆ ಏನಾಗಬಹುದು ಎಂಬ ಪ್ರಶ್ನೆ ಅನೇಕರಲ್ಲಿದೆ. ಆದರೆ, ವಿಜ್ಞಾನ ನೀಡುವ ಉತ್ತರ ಸ್ವಲ್ಪ ವಿಭಿನ್ನವಾಗಿದೆ. ನಮ್ಮ ಸೂರ್ಯ ಸೂಪರ್​ ನೋವಾ ಸ್ಫೋಟದ ಮೂಲಕ ಅಂತ್ಯಗೊಳ್ಳುವುದಿಲ್ಲ. ಬದಲಾಗಿ, ತನ್ನ ಜೀವನದ ಕೊನೆಯ ಹಂತಗಳಲ್ಲಿ ಅದು ನಿಧಾನವಾಗಿ ಬೃಹತ್ ಗಾತ್ರಕ್ಕೆ ವಿಸ್ತರಿಸಿ ಕೆಂಪು ದೈತ್ಯ (Red Giant) ಆಗಲಿದೆ.

ನಾಸಾ ಪ್ರಕಾರ, ಸೂರ್ಯ ಸುಮಾರು 4.6 ಬಿಲಿಯನ್ ವರ್ಷಗಳಷ್ಟು ಹಳೆಯದು ಮತ್ತು ಪ್ರಸ್ತುತ ತನ್ನ ಜೀವನದ ಮಧ್ಯಭಾಗದಲ್ಲಿದೆ. ಇನ್ನೂ ಸುಮಾರು 5 ಬಿಲಿಯನ್ ವರ್ಷಗಳವರೆಗೆ ಅದು ತನ್ನ ಈಗಿನ ರೀತಿಯ ನಕ್ಷತ್ರವಾಗಿ ಮುಂದುವರಿಯಲಿದೆ. ನಂತರ ಅದರೊಳಗಿನ ಹೈಡ್ರೋಜನ್ ಇಂಧನ ಕಡಿಮೆಯಾಗುತ್ತಿದ್ದಂತೆ ಅದರ ರಚನೆ ಮತ್ತು ಗಾತ್ರದಲ್ಲಿ ದೊಡ್ಡ ಬದಲಾವಣೆ ಆರಂಭವಾಗಲಿದೆ.

Also Read
ಆಕ್ಟೋಪಸ್ ಎಂಬ ಅಚ್ಚರಿ ಜೀವಿ 3 ಹೃದಯಗಳನ್ನು ಹೊಂದಿರುವುದೇಕೆ? ಒಂದೇ ಒಂದು ಮೂಳೆ ಇಲ್ಲದಿದ್ದರೂ ಅಷ್ಟು ಬಲಿಷ್ಠ ಹೇಗೆ? Octopus
Earth

ಸೂರ್ಯ ಏಕೆ ಸ್ಫೋಟಿಸುವುದಿಲ್ಲ

ಬಹಳ ದೊಡ್ಡ ಗಾತ್ರದ ಕೆಲವು ನಕ್ಷತ್ರಗಳು ತಮ್ಮ ಜೀವನದ ಅಂತ್ಯದಲ್ಲಿ ಸೂಪರ್​ನೋವಾ ಎಂಬ ಭಾರೀ ಸ್ಫೋಟಕ್ಕೆ ಒಳಗಾಗಬಹುದು. ಆದರೆ, ಸೂರ್ಯ ಅಂತಹ ನಕ್ಷತ್ರವಲ್ಲ. ಅದರ ದ್ರವ್ಯರಾಶಿ ಇದಕ್ಕೆ ಸಾಕಾಗುವುದಿಲ್ಲ. NASA ಸ್ಪಷ್ಟವಾಗಿ ಹೇಳುವಂತೆ, ಸೂರ್ಯ ಸೂಪರ್​ ನೋವಾ ಆಗುವುದಿಲ್ಲ ಮತ್ತು ಅದು ಬ್ಲ್ಯಾಕ್​ ಹೋಲ್​ ಆಗಿಯೂ ಬದಲಾಗುವುದಿಲ್ಲ.

ಹಾಗಾದರೆ ಸೂರ್ಯನ ಅಂತ್ಯ ಹೇಗಿರುತ್ತದೆ? ಸೂರ್ಯ ಕೆಂಪು ದೈತ್ಯನಾದಾಗ ಏನಾಗುತ್ತದೆ?

ಸುಮಾರು 5 ಬಿಲಿಯನ್ ವರ್ಷಗಳ ನಂತರ ಸೂರ್ಯ ಕೆಂಪು ದೈತ್ಯ ಚಂಡಿನಾಕಾರದ ಹಂತಕ್ಕೆ ಪ್ರವೇಶಿಸಲಿದೆ. ಈ ಹಂತದಲ್ಲಿ ಅದರ ಹೊರಗಿನ ಪದರಗಳು ಭಾರೀ ಪ್ರಮಾಣದಲ್ಲಿ ವಿಸ್ತರಿಸುತ್ತವೆ. ನಾಸಾ ಪ್ರಕಾರ, ಈ ವಿಸ್ತರಣೆ ಒಳಗಿನ ಗ್ರಹಗಳ ಕಕ್ಷೆಗಳವರೆಗೂ ತಲುಪಬಹುದು. ಬುಧ ಮತ್ತು ಶುಕ್ರ ಗ್ರಹಗಳನ್ನು ಸೂರ್ಯ ನುಂಗಲ್ಪಡುವ ಸಾಧ್ಯತೆ ಇದೆ ಭೂಮಿಯ ಭವಿಷ್ಯವೂ ಸುರಕ್ಷಿತವಾಗಿರುವುದಿಲ್ಲ. ಆದರೆ, ಭೂಮಿಗೆ ಅಪಾಯ ಆರಂಭವಾಗಲು ಸೂರ್ಯ ನಿಜವಾಗಿಯೂ ಕೆಂಪು ದೈತ್ಯ ಆಗುವವರೆಗು ಕಾಯಬೇಕಾಗಿಲ್ಲ.

ಸೂರ್ಯ ವಯಸ್ಸಾಗುತ್ತಿದ್ದಂತೆ ಅದರ ಶಕ್ತಿಯ ಹೊರಸೂಸುವಿಕೆ ನಿಧಾನವಾಗಿ ಹೆಚ್ಚಾಗುತ್ತದೆ. ಮುಂದಿನ ಕೆಲವು ಬಿಲಿಯನ್ ವರ್ಷಗಳಲ್ಲಿ ಭೂಮಿಗೆ ತಲುಪುವ ಶಾಖ ಹೆಚ್ಚುತ್ತಾ ಹೋಗಬಹುದು. ನಾಸಾದ ವೈಜ್ಞಾನಿಕ ವಿವರಣೆಗಳ ಪ್ರಕಾರ, ಇದರಿಂದ ಭೂಮಿಯ ಮೇಲಿನ ನೀರು ಕ್ರಮೇಣ ಆವಿಯಾಗುವ ಪರಿಸ್ಥಿತಿ ಉಂಟಾಗಬಹುದು. ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋದಂತೆ ಭೂಮಿಯ ಮೇಲಿನ ಜೀವಿಗಳಿಗೆ ಅಗತ್ಯವಾದ ಪರಿಸರ ಉಳಿಯುವುದು ಕಷ್ಟವಾಗುತ್ತದೆ. ಅಂದರೆ, ಸೂರ್ಯ ಸ್ಫೋಟಿಸಿ ಒಂದೇ ಕ್ಷಣದಲ್ಲಿ ಭೂಮಿಯನ್ನು ನಾಶ ಮಾಡುತ್ತದೆ ಎಂಬುದು ಸರಿಯಲ್ಲ. ಬದಲಾಗಿ, ಸೂರ್ಯನ ವಯಸ್ಸಾಗುವಿಕೆಯೊಂದಿಗೆ ಭೂಮಿಯ ಪರಿಸರ ನಿಧಾನವಾಗಿ ಬದಲಾಗುವ ಸಾಧ್ಯತೆಯೇ ವಿಜ್ಞಾನದಲ್ಲಿ ವಿವರಿಸಲ್ಪಟ್ಟಿರುವ ಚಿತ್ರವಾಗಿದೆ.

Also Read
ಮನುಷ್ಯರೇ ಇಲ್ಲದಿದ್ದರೆ ಭೂಮಿ ಹೇಗಿರುತ್ತೆ? ಕೆಲವೇ ವರ್ಷಗಳಲ್ಲಿ ನಗರಗಳು ಕಾಡಾಗುವ ರೋಚಕ Timeline | Earth without humans
Earth

ಕೊನೆಗೆ ಸೂರ್ಯನಿಗೆ ಏನಾಗುತ್ತದೆ

ಕೆಂಪು ದೈತ್ಯ (Red Giant) ಹಂತದ ನಂತರ ಸೂರ್ಯ ತನ್ನ ಹೊರಗಿನ ಪದರಗಳನ್ನು ಕಳೆದುಕೊಂಡು, ಉಳಿದಿರುವ ಅತ್ಯಂತ ದಟ್ಟವಾದ ಕೇಂದ್ರ ಭಾಗ ಶ್ವೇತ ಕುಬ್ಜ (White Dwarf) ಆಗಿ ಉಳಿಯುತ್ತದೆ. ಇದು ಈಗಿನ ಸೂರ್ಯನಿಗಿಂತ ಬಹಳ ಚಿಕ್ಕದಾಗಿದ್ದರೂ ಅತ್ಯಂತ ದಟ್ಟವಾಗಿರುತ್ತದೆ. ನಂತರ ಅದು ಕೋಟ್ಯಂತರ ವರ್ಷಗಳ ಅವಧಿಯಲ್ಲಿ ನಿಧಾನವಾಗಿ ತಣ್ಣಗಾಗುತ್ತಾ ಹೋಗುತ್ತದೆ. ಹೀಗಾಗಿ ಸೂರ್ಯನ ಕಥೆಯ ಅಂತ್ಯವು ಒಂದು ಭಾರೀ ಆಗುವ ಸ್ಫೋಟವಲ್ಲ. ಅದು ನಿಧಾನವಾಗಿ ಬದಲಾಗುವ ನಕ್ಷತ್ರದ ಜೀವನಚಕ್ರ. ಆದರೆ ಆ ಬದಲಾವಣೆ ಸಂಭವಿಸುವ ವೇಳೆಗೆ ಭೂಮಿ ಇಂದಿನಂತೆಯೇ ಜೀವಿಗಳಿಗೆ ಅನುಕೂಲಕರವಾಗಿರುತ್ತದೆ ಎಂದು ವಿಜ್ಞಾನ ನಿರೀಕ್ಷಿಸುವುದಿಲ್ಲ.

ಒಂದು ಕುತೂಹಲಕಾರಿ ಸಂಗತಿ ಏನೆಂದರೆ, ಈ ಬದಲಾವಣೆಗಳು ಸಂಭವಿಸಲು ಬಿಲಿಯನ್‌ಗಟ್ಟಲೆ ವರ್ಷಗಳು ಬೇಕಾಗುತ್ತವೆ. ಆದ್ದರಿಂದ ಇದು ಮಾನವ ಜೀವನ ಅಥವಾ ಮುಂದಿನ ಕೆಲವು ಪೀಳಿಗೆಗಳಿಗೆ ಎದುರಾಗುವ ತಕ್ಷಣದ ಅಪಾಯವಲ್ಲ. ನಾಸಾದ ಪ್ರಕಾರ ಸೂರ್ಯ ಇನ್ನೂ ಸುಮಾರು 5 ಬಿಲಿಯನ್ ವರ್ಷಗಳ ಕಾಲ ತನ್ನ ಪ್ರಸ್ತುತ ಜೀವನ ಹಂತದಲ್ಲಿ ಇರಲಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net