ಅಮೆರಿಕದ ರಾಬರ್ಟ್ ಇ. ಹಾಲ್, ಮೈಕೆಲ್ ವುಡ್‌ಫೋರ್ಡ್‌ಗೆ 2026ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ | Nobel Prize in Economics

ಈ ಇಬ್ಬರು ಅರ್ಥಶಾಸ್ತ್ರಜ್ಞರ ದೀರ್ಘಕಾಲದ ಸಂಶೋಧನೆಗಳು ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳು ಮತ್ತು ಸರ್ಕಾರಗಳು ಎದುರಿಸುವ ಹಠಾತ್ ಆರ್ಥಿಕ ಬಿಕ್ಕಟ್ಟು ಹಾಗೂ ಆಘಾತಗಳನ್ನು ನಿರ್ವಹಿಸಲು ಬಲವಾದ ತತ್ವ ಸಿದ್ಧಾಂತದ ಅಡಿಪಾಯವನ್ನು ಒದಗಿಸಿವೆ.
Nobel Prize in Economics
ಅಮೆರಿಕದ ರಾಬರ್ಟ್ ಇ. ಹಾಲ್, ಮೈಕೆಲ್ ವುಡ್‌ಫೋರ್ಡ್‌ಗೆ 2026ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ | Nobel Prize in Economics
Published on: 

ಸ್ಟಾಕ್‌ಹೋಮ್: ಮ್ಯಾಕ್ರೋಎಕನಾಮಿಕ್ಸ್ ಸ್ಥಿರತೆ ಹಾಗೂ ಆರ್ಥಿಕ ಬಿಕ್ಕಟ್ಟುಗಳನ್ನು ನಿಯಂತ್ರಿಸುವ ಮೈಕ್ರೋಎಕನಾಮಿಕ್ಸ್ ತತ್ವಗಳ ಕುರಿತು ನಡೆಸಿದ ಸಂಶೋಧನೆಗೆ ಅಮೆರಿಕದ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ (Robert E. Hall) ಮತ್ತು ಮೈಕೆಲ್ ವುಡ್‌ಫೋರ್ಡ್ (Michael Woodford) ಅವರಿಗೆ 2026ನೇ ಸಾಲಿನ ಅರ್ಥಶಾಸ್ತ್ರದ ಅತ್ಯುನ್ನತ ನೊಬೆಲ್ ಪ್ರಶಸ್ತಿಯನ್ನು (Nobel Prize in Economics ) ಘೋಷಿಸಲಾಗಿದೆ.

ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಸೋಮವಾರ ಸ್ಟಾಕ್‌ಹೋಮ್‌ನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಇಬ್ಬರು ಅರ್ಥಶಾಸ್ತ್ರಜ್ಞರ ದೀರ್ಘಕಾಲದ ಸಂಶೋಧನೆಗಳು ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳು ಮತ್ತು ಸರ್ಕಾರಗಳು ಎದುರಿಸುವ ಹಠಾತ್ ಆರ್ಥಿಕ ಬಿಕ್ಕಟ್ಟು ಹಾಗೂ ಆಘಾತಗಳನ್ನು ನಿರ್ವಹಿಸಲು ಬಲವಾದ ತತ್ವ ಸಿದ್ಧಾಂತದ ಅಡಿಪಾಯವನ್ನು ಒದಗಿಸಿವೆ.

Also Read
ಇಲ್ಲಿಯವರೆಗೆ ಎಷ್ಟು ಭಾರತೀಯರಿಗೆ ಈ ನೊಬೆಲ್​ ಪ್ರಶಸ್ತಿ ಲಭಿಸಿದೆ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​ | Nobel Prize
Nobel Prize in Economics

ಆರ್ಥಿಕ ಸ್ಥಿರತೆಗೆ ಹೊಸ ಮಾದರಿ

ಇಂಧನ ಬಿಕ್ಕಟ್ಟುಗಳು ಅಥವಾ ಗೃಹಬಳಕೆಯ ವೆಚ್ಚದಲ್ಲಿ ಸಂಭವಿಸುವ ದಿಢೀರ್​ ಬದಲಾವಣೆಗಳಂತಹ ನಿರೀಕ್ಷಿತ ಹಾಗೂ ಅನಿರೀಕ್ಷಿತ ಸವಾಲುಗಳನ್ನು ಜಾಗತಿಕ ದೇಶಗಳು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಧೋಧಕರ ಈ ಮಾದರಿಗಳು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿವೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡಿದೆ.

Also Read
ತನ್ನನ್ನು ತಿಂದು ಹಾಕಲು ವೈರಿ ಎದುರಿಗೆ ಬಂದರೆ ಸಾಕು ಕಣ್ಣಿನಿಂದ ರಕ್ತವನ್ನೇ ಹರಿಸುತ್ತೆ ಈ ವಿಚಿತ್ರ ಜೀವಿ | Horned lizards
Nobel Prize in Economics

ಯಾರ ಹೆಸರಿನಲ್ಲಿ ಈ ಪ್ರಶಸ್ತಿ?

1901ರಿಂದ, ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯಗಳಿಗೆ ಅನುಗುಣವಾಗಿ ಮಾನವಕುಲಕ್ಕೆ ಮಹತ್ತರವಾದ ಪ್ರಗತಿ, ಕೊಡುಗೆಗಳನ್ನು ನೀಡಿದ ಪುರುಷರು, ಮಹಿಳೆಯರು ಮತ್ತು ಸಂಸ್ಥೆಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಂತೆಯೇ, 2026ರ ಪ್ರಶಸ್ತಿ ಪ್ರಕಟಣೆ ಕೂಡ ನಡೆಯುತ್ತಿದೆ. ಪ್ರತಿಯೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಅಂದರೆ ಸುಮಾರು 1.2 ಮಿಲಿಯನ್ ಡಾಲರ್​) ದೊರೆಯಲಿದೆ. ಅದೇ ಭಾರತೀಯ ಕರೆನ್ಸಿಯಲ್ಲಿ 11.5 ಕೋಟಿ ರೂ. ಸಿಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net