ರಸ್ತೆ ಮಧ್ಯೆ ನಮಾಜ್, ಹಿಂದಿನಿಂದ ಬಂತು ಕಾರು: ಕ್ಷಮೆ ಕೇಳಿ ಜೈಲು ಶಿಕ್ಷೆಯಿಂದ ಪಾರಾದ ಆಸ್ಟ್ರೇಲಿಯಾ ಯುವಕ! Australia Car Accident

ಆಸ್ಟ್ರೇಲಿಯಾದಲ್ಲಿ ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕಿಸ್ತಾನಿ ಯುವತಿಗೆ ಕಾರು ಡಿಕ್ಕಿ ಹೊಡೆದ ಪ್ರಕರಣ: ಕಾಂಗರೂ ಎಂದು ಭಾವಿಸಿದ್ದ ಚಾಲಕನ ಜೈಲು ಶಿಕ್ಷೆ ರದ್ದುಗೊಳಿಸಿದ ಕೋರ್ಟ್. ಸಂಪೂರ್ಣ ವಿವರ ಇಲ್ಲಿದೆ.
Jacob, the accused in the case where a car struck a young woman performing Namaz in Australia.
ಆಸ್ಟ್ರೇಲಿಯಾದಲ್ಲಿ ನಮಾಜ್ ಮಾಡುತ್ತಿದ್ದ ಯುವತಿಗೆ ಕಾರು ಡಿಕ್ಕಿ ಹೊಡೆದ ಪ್ರಕರಣದ ಆರೋಪಿ ಜಾಕೋಬ್
Published on: 

ಆಸ್ಟ್ರೇಲಿಯಾ: ರಸ್ತೆ ಮಧ್ಯದಲ್ಲಿ ನಮಾಜ್​ ಸಲ್ಲಿಸುತ್ತಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ಒಂದು ವರ್ಷದ ಹಿಂದೆ ವರದಿಯಾಗಿತ್ತು.

20 ವರ್ಷದ ಸಾಮಿಯಾ ಮಲ್ಲಿಕ್​ ಈ ಘಟನೆಯಲ್ಲಿ ಸಾವನ್ನಪ್ಪಿದ್ದ ಯುವತಿಯಾಗಿದ್ದು, ಕಾರಿನಿಂದ ಡಿಕ್ಕಿ ಹೊಡೆದಿದ್ದ, ಚಾಲಕ ಆಷ್ಟನ್ ಜಾಕೋಬ್ ಫ್ರೆಂಡ್​ ಎಂಬಾತನಿಗೆ ನ್ಯಾಯಾಲಯ ವಿಧಿಸಿದ್ದ ಕಾರಾಗೃಹ ವಾಸದ ಶಿಕ್ಷೆಯನ್ನು ಬದಲಿಸಿ 10 ವರ್ಷ ಚಾಲನಾ ಪರವಾನಗಿಯನ್ನು ರದ್ದು ಪಡಿಸಿರುವುದು ಚರ್ಚೆಗೆ ಕಾರಣವಾಗಿದೆ.

ಕಾಂಗರೂ ಎಂದು ತಿಳಿದಿದ್ದೆ!

ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿರುವ ಆರೋಪಿ ಜಾಕೋಬ್, ನಾನೇ ಕಾರನ್ನು ಚಾಲನೆ ಮಾಡುತ್ತಿದ್ದೆ. ನಾನು ಹಿಂಬದಿ ಕನ್ನಡಿಯನ್ನು ನೋಡುತ್ತಿದೆ ಅಷ್ಟರಲ್ಲಿ, ಈ ಅಪಘಾತ ಸಂಭವಿಸಿದೆ. ನಾನು ಯಾವುಯೋ ಕಾಂಗರೂಗೆ ಡಿಕ್ಕಿ ಹೊಡೆದಿದ್ದೆ ಎಂದು ಭಾವಿಸಿದೆ. ಕಾರನ್ನು ಇಳಿದಾಗ, ಕಾಂಗರೂ ಅಲ್ಲ, ನಾನು ಯುವತಿಗೆ ಡಿಕ್ಕಿ ಹೊಡೆದಿದ್ದು ಗಮನಕ್ಕೆ ಬಂದಿದೆ ಎಂದು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಪೊಲೀಸ್​ ವಿಚಾರಣೆಯಲ್ಲಿ ಕೂಡ, ಈ ಆರೋಪಿ ಆಷ್ಟನ್ ಜಾಕೋಬ್ , ಕಾರಿನ್ನು ವೇಗದ ಮಿತಿಯಲ್ಲಿಯೇ ಚಲಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ನಶೆಯ ಮತ್ತಿನಲ್ಲಿ ಈ ಕೆಲಸ ಮಾಡಿಲ್ಲ ಎಂದು ತಿಳಿದು ಬಂದಿದೆ.

Also Read
ಅಪ್ರಾಪ್ತ ಬಾಲಕಿಗೆ ರೋಬಾಟ್‌ನಿಂದ ಲೈಂಗಿಕ ಕಿರುಕುಳ? ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ! Robot Sexually Assault
Jacob, the accused in the case where a car struck a young woman performing Namaz in Australia.

ಜೈಲು ಶಿಕ್ಷೆ ರದ್ದು ಪಡಿಸಿದ ನ್ಯಾಯಾಲಯ!

ಒಂದು ವರ್ಷದ ಹಿಂದೆ ನಡೆದಿದ್ದ, ಈ ಪ್ರಕರಣದ ವಿಚಾರಣೆಯಲ್ಲಿ ಆರೋಪಿ, ಜಾಕೋಬ್​ನಿಗೆ ಜೈಲುವಾಸದ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಜಾಕೋಬ್​ ತನ್ನ ತಪ್ಪನ್ನು ಒಪ್ಪಿಕೊಂಡು, ಮೃತಳ ಮನೆಯವರಲ್ಲಿ ಕ್ಷಮೆ ಕೇಳಿ ಜೈಲು ಶಿಕ್ಷೆಯಿಂದ ಪಾರಾಗಿದ್ದಾನೆ.

ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ಜಾಕೋಬ್​ನ ವರ್ತನೆ ಉತ್ತಮವಾಗಿದ್ದು, ಈ ಅಪಘಾತ ಆಕಸ್ಮಿಕವಾಗಿತ್ತು ಹಾಗೆಯೇ, ಜಾಕೋಬ್​ ಇನ್ನು ಸಣ್ಣ ವಯಸ್ಸಿನವನಾಗಿದ್ದು, ಮುಂದೆ ಉತ್ತಮ ನಾಗರಿಕನಾಗುವ ಸಂಭವವಿರುವ ಕಾರಣ ಆತನ ಜೈಲು ಶಿಕ್ಷೆಗೆ ನ್ಯಾಯಾಲಯ ಸಮಾಪ್ತಿ ಹೇರಿದೆ. ಆದರೆ 10 ವರ್ಷಗಳ ಅವಧಿಗೆ ವಾಹನ ಚಾಲನಾ ಪರವಾನಗಿಯನ್ನು ರದ್ದುಪಡಿಸಿ ಆದೇಶಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net