ಅಪ್ರಾಪ್ತ ಬಾಲಕಿಗೆ ರೋಬಾಟ್‌ನಿಂದ ಲೈಂಗಿಕ ಕಿರುಕುಳ? ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ! Robot Sexually Assault

ಜರ್ಮನಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಗೆ ರೋಬಾಟ್‌ ಅಸಭ್ಯವಾಗಿ ವರ್ತಿಸಿದ ಆರೋಪದ ವಿಡಿಯೋ ವೈರಲ್ ಆಗಿದ್ದು, ಘಟನೆ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ತನಿಖೆಯ ಮಾಹಿತಿ ಇಲ್ಲಿದೆ.
Robot facing allegations of behaving inappropriately with a girl in Germany.
ಜರ್ಮನಿಯಲ್ಲಿ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ರೊಬೊಟ್
Published on: 

ಜರ್ಮನಿ: ತಂತ್ರಜ್ಞಾನ ಎನ್ನುವುದು ಮನುಷ್ಯನ ಜೀವನವನ್ನು ಸುಧಾರಿಸುವ, ಸುಲಭಗೊಳಿಸುವ ಸಂಪನ್ಮೂಲಗಳಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅದರಲ್ಲೂ ರೊಬೊಟಿಕ್​ ತಂತ್ರಜ್ಞಾನದ ದುರ್ಬಳಕೆಯ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಂತಾಗಿದೆ.

ಕೆಲ ದಿನಗಳ ಹಿಂದೆ, ಜರ್ಮನಿಯಲ್ಲಿ ರೋಬಾಟ್‌ವೊಂದನ್ನು ಬಳಸಿಕೊಂಡು 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಈಗ ವಿಶ್ವದೆಲ್ಲಡೆ ಭಾರೀ ಚರ್ಚೆಗೆ ಕಾರಣವಾಗಿದೆ.

ರೋಬಾಟ್‌ನಿಂದ ದೌರ್ಜನ್ಯ!

ಮಾಹಿತಿ ಪ್ರಕಾರ, ಜರ್ಮನಿಯ ಜನನಿಬಿಡ ಪ್ರದೇಶವಾದ ಹೊಹೆನ್‌ಜೊಲ್ಲೆರ್ನ್‌ರಿಂಗ್ (Hohenzollernring) ನ ಫುಡ್​ ಸ್ಟ್ರೀಟ್​​ನಲ್ಲಿ ಈ ಘಟನೆ ನಡೆದಿದೆ. ಆಹಾರ ಮಳಿಗೆ ಬಳಿ ಹುಡಿಯೊಬ್ಬಳು ತಿಂಡಿ ತಿನ್ನಲು ಬಂದಿದ್ದಾಳೆ. ಆಗ ಈ ವಿವಾದಿತ ರೋಬಾಟ್‌​, ಆಕೆಯ ಬಳಿ ಹೋಗಿ, ಅವಳನ್ನು ಅಸಂಬದ್ಧವಾಗಿ ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡುವಂತೆ ವರ್ತನೆ ತೋರಿದೆ. ಈ ಘಟನೆಯನ್ನು ವಿಡಿಯೋ ತೆಗೆದು ಆನ್​ಲೈನ್​ನಲ್ಲಿ ಹರಿಬಿಟ್ಟ ನಂತರ, ರೋಬಾಟ್‌​ಗಳ ವರ್ತನೆ ಬಗ್ಗೆ ಜನರಲ್ಲಿ ಆತಂಕ ಹಾಗೂ ಕೋಪ ಇಮ್ಮುಡಿಹಗೊಂಡಿದೆ.

ವಿಡಿಯೋ ವೈರಲ್​ ಆದ ತರುವಾಯ, ಜರ್ಮನಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆ ವಿವಾದಿತ ರೋಬಾಟ್‌​ಅನ್ನು ಮತ್ತು ಅದರ ಮಾಲೀಕನನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ. ಆದರೆ, ಈ ರೋಬಾಟ್‌ ಈ ಕೆಲಸವನ್ನು ತನ್ನ ಬುದ್ಧಿಮತ್ತೆ ಬಳಸಿ ಮಾಡಿತೇ? ಅಥವಾ ಅದರ ಮಾಲೀಕ ಈ ರೀತಿ ಪ್ರೊಗ್ರಾಮಿಂಗ್​ ಮಾಡಿದ್ದನೇ? ಎನ್ನುವುದು ಪೊಲೀಸ್​ ತನಿಖೆ ಮೂಲಕವೇ ಹೊರಬೀಳಬೇಕಿದೆ.

ಸದ್ಯ ಪೊಲೀಸರು ಹೇಳುವ ಪ್ರಕಾರ, ನಾವು ವಶಕ್ಕೆ ತೆಗೆದುಕೊಂಡಿರುವ ರೋಬಾಟ್‌​, ಹುಡುಗಿಯೊಬ್ಬಳನ್ನು ಅಸಭ್ಯವಾಗಿ ಸ್ಪರ್ಶಿಸಿದೆ ಮತ್ತು ಲೈಂಗಿಕವಾಗಿ ಅವಳತ್ತ ಕೆಲ ಚಲನೆಯನ್ನು ಮಾಡಿದೆ. ಈಗ ನಾವು ಆ ರೋಬೊ ಮತ್ತು ಅದರ ಮಾಲೀಕನನ್ನು ಬಂಧಿಸಿದ್ದೆವೆ. ತನಿಖೆ ನಂತರ ಹಿಚ್ಚಿನ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

Also Read
ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ! ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪಿಯೂಶ್ ಗೋಯಲ್ ಗಂಭೀರ ಆರೋಪ! Piyush Goyal
Robot facing allegations of behaving inappropriately with a girl in Germany.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿವಾದಿತ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರಿಂದ ಕಮೆಂಟ್​ಗಳ ಸುರಿಮಳೆ ಸುರಿದು ಬಂದಿದೆ. ಈಗ ಕೇವಲ ಸನ್ನೆ ಮಾಡಿದೆ, ನಾಳೆ ಅತ್ಯಾಚಾರವನ್ನೇ ಮಾಡುತ್ತೆ? ಈ ತಂತ್ರಜ್ಞಾನ ನಮಗೇ ಬೇಡವೇ ಬೇಡ ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.

ರೋಬಾಟ್‌​ಗಳಿಗೆ ಸ್ವಂತ ಬುದ್ಧಿ ಇರುವುದಿಲ್ಲ. ಎದೆಲ್ಲಾ ಆ ಅಂಗಡಿ ಮಾಲೀಕನದೇ ಕಿತಾಪತಿ. ಅವನಿಗೆ ಶಿಕ್ಷೆ ನೀಡಿ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮುಂದೊಂದು ದಿನ ಈ ರೋಬಾಟ್‌​ಗಳೇ ಜಗತ್ತನ್ನು ಆಳುತ್ತವೆ, ನಾವು ಮನುಷ್ಯರು ಇದರ ಮುಂದೆ ಸೋಲುತ್ತೇವೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net