ಬೆನಿನ್​​ ವಿರುದ್ಧದ ತಮ್ಮ ಕೊನೆಯ ಪಂದ್ಯ ಗೆಲ್ಲಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಿದ ಲಿಯೋನೆಲ್​ ಮೆಸ್ಸಿ | Lionel Messi

ವಿಶ್ವ ಫುಟ್​​ಬಾಲ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟಿಯಾ ಆಟಗಾರ ಲಿಯೋನಲ್ ಮೆಸ್ಸಿ, ಮಂಗಳವಾರ(ಅ. 06) ರಾತ್ರಿ ನಡೆದ ಬೆನಿನ್ ವಿರುದ್ಧದ ತಮ್ಮ ಕೊನೆಯ ಅಂತಾರಾಷ್ಟ್ರೀಯ ಫುಟ್​ಬಾಲ್ ಪಂದ್ಯದಲ್ಲಿ 3-0 ಗೋಲುಗಳಿಂದ ತಂಡವನ್ನು ಗೆಲ್ಲಿಸುವ ಮೂಲಕ ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದರು.
ಬೆನಿನ್​​ ವಿರುದ್ಧದ ತಮ್ಮ ಕೊನೆಯ ಪಂದ್ಯ ಗೆಲ್ಲಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಿದ ಲಿಯೋನೆಲ್​ ಮೆಸ್ಸಿ | Lionel Messi
Published on: 

Lionel Messi: ವಿಶ್ವ ಫುಟ್​​ಬಾಲ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟಿಯಾ ಆಟಗಾರ ಲಿಯೋನಲ್ ಮೆಸ್ಸಿ, ಮಂಗಳವಾರ(ಅ. 06) ರಾತ್ರಿ ನಡೆದ ಬೆನಿನ್ ವಿರುದ್ಧದ ತಮ್ಮ ಕೊನೆಯ ಅಂತಾರಾಷ್ಟ್ರೀಯ ಫುಟ್​ಬಾಲ್ ಪಂದ್ಯದಲ್ಲಿ 3-0 ಗೋಲುಗಳಿಂದ ತಂಡವನ್ನು ಗೆಲ್ಲಿಸುವ ಮೂಲಕ ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದರು.

ಸುಮಾರು ಎರಡು ದಶಕಗಳ ಕಾಲ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ್ದ ಮೆಸ್ಸಿ, ರಾಷ್ಟ್ರೀಯ ತಂಡಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದು, ಪಂದ್ಯದಲ್ಲಿ ಎರಡು ಅದ್ಭುತ ಅಸಿಸ್ಟ್‌ಗಳನ್ನು ದಾಖಲಿಸಿದರು. ಮತ್ತು ಐತಿಹಾಸಿಕ ಆಟವನ್ನು ಗೋಲಿನೊಂದಿಗೆ ಮುಗಿಸಿದರು.

ಮೆಸ್ಸಿ ಕಿಕ್-ಆಫ್‌ಗೆ ಮೊದಲು ತನ್ನ ಪುತ್ರರೊಂದಿಗೆ ಮೈದಾನಕ್ಕೆ ಕಾಲಿಟ್ಟಾಗ ವಿದಾಯ ರಾತ್ರಿ ಭಾವನಾತ್ಮಕ ಕ್ಷಣಗಳಿಂದ ತುಂಬಿತ್ತು. ಮಾನ್ಯುಮೆಂಟಲ್‌ನೊಳಗಿನ ಅಭಿಮಾನಿಗಳು ಕಿಕ್ಕಿರಿದು ತುಂಬಿ, ತಮ್ಮ ಶ್ರೇಷ್ಠ ಆಟಗಾರನ ಕೊನೆಯ ಆಟವನ್ನು ಕಣ್ಣು ತುಂಬಿಕೊಂಡರು.

Also Read
ಶ್ರೇಯಸ್ ಸ್ಫೋಟಕ ಶತಕಕ್ಕೆ ಬೆದರಿದ ವಿಂಡೀಸ್!​ ಮೊದಲ ಟಿ20 ಪಂದ್ಯ ಸುಲಭವಾಗಿ ಗೆದ್ದ ಟೀಮ್ ಇಂಡಿಯಾ​ |IND vs WI T20 ​ ​
ಬೆನಿನ್​​ ವಿರುದ್ಧದ ತಮ್ಮ ಕೊನೆಯ ಪಂದ್ಯ ಗೆಲ್ಲಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಿದ ಲಿಯೋನೆಲ್​ ಮೆಸ್ಸಿ | Lionel Messi

ಅರ್ಜೆಂಟೀನಾದ ಸೂಪರ್​ಸ್ಟಾರ್​ ಸೆ. 01ರಂದೇ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದರು. ಈ ವರ್ಷ ಸತತ 2ನೇ ಫಿಫಾ ವಿಶ್ವಕಪ್​ ಜಯಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದ 39 ವರ್ಷದ ಮೆಸ್ಸಿ ಇನ್ನು ಕ್ಲಬ್​ ಫುಟ್​ಬಾಲ್​ನಲ್ಲಿ ಮಾತ್ರ ಆಡಲಿದ್ದಾರೆ.

ಮೆಸ್ಸಿ 2006ರಿಂದ 2026ರವರೆಗೆ ಒಟ್ಟಾರೆ 6 ವಿಶ್ವಕಪ್​ಗಳಲ್ಲಿ ಆಡಿದ ದಾಖಲೆ ಹೊಂದಿದ್ದು, ಕಳೆದ ತಿಂಗಳು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ವಿದಾಯದ ನಿರ್ಧಾರ ಪ್ರಕಟಿಸಿದ್ದ ಮೆಸ್ಸಿ, ರಾಷ್ಟ್ರೀಯ ತಂಡದಿಂದ ನಾನು ನಿವೃತ್ತಿಯಾಗುತ್ತಿರುವ ಬಗ್ಗೆ ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಈ ನಿರ್ಧಾರ ತೀವ್ರ ನೋವುಂಟು ಮಾಡಿತು ಮತ್ತು ಇನ್ನೂ ಆಳವಾಗಿ ನೋವುಂಟು ಮಾಡುತ್ತಿದೆ. ಆದರೆ ನನ್ನ ನಿವೃತ್ತಿಯ ಸಮಯ ಬಂದಿದೆ ಎಂದು ನನಗೆ ಅರ್ಥವಾಗಿದೆ ಎಂದು ಹೇಳಿದ್ದರು.

ಅರ್ಜೆಂಟೀನಾ ತಂಡದ ಭಾಗವಾಗಿರುವುದನ್ನು ನಾನು ಯಾವಾಗಲೂ ಆನಂದಿಸಿದ್ದೇನೆ ಮತ್ತು ಎಲ್ಲವನ್ನೂ ನೀಡಿದ್ದೇನೆ. ಇನ್ನು ನೀಡಲು ನನ್ನ ಬಳಿ ಏನೂ ಇಲ್ಲ. ಯುವ ಆಟಗಾರರಿಗೆ ಇನ್ನು ಅರ್ಹವಾದ ಸ್ಥಾನ ಸಿಗಬೇಕು ಎಂದು ತಿಳಿಸಿದ್ದರು.

2005ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪಾದರ್ಪಣೆ

ಮೆಸ್ಸಿ 2005ರ ಆಗಸ್ಟ್​ 17ರಂದು ಹಂಗೆರಿ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಪದಾರ್ಪಣೆ ಮಾಡಿದ್ದರು. ಆಗ 18 ವರ್ಷದ ಮೆಸ್ಸಿ 63ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದರೂ, ಎದುರಾಳಿ ಆಟಗಾರನಿಗೆ ಮೊಣಕೈಯಿಂದ ಗುದ್ದಿದ್ದ ಕಾರಣಕ್ಕೆ 47 ಸೆಕೆಂಡ್​ನಲ್ಲೇ ಮೈದಾನದಿಂದ ಹೊರಬಿದ್ದಿದ್ದರು. ಕ್ರೊವೇಷಿಯಾ ವಿರುದ್ಧ 2006ರ ಮಾರ್ಚ್​ 1ರಂದು ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪರ ತಮ್ಮ ಮೊಟ್ಟಮೊದಲ ಗೋಲು ಬಾರಿಸಿದ್ದರು.

Also Read
ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ! ದೆಹಲಿ-ಎನ್​ಸಿಆರ್​ನಲ್ಲಿ 4.9 ತೀವ್ರತೆ ದಾಖಲು | Earthquake
ಬೆನಿನ್​​ ವಿರುದ್ಧದ ತಮ್ಮ ಕೊನೆಯ ಪಂದ್ಯ ಗೆಲ್ಲಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಿದ ಲಿಯೋನೆಲ್​ ಮೆಸ್ಸಿ | Lionel Messi

ಅರ್ಜೆಂಟೀನಾ ಪರ ಒಟ್ಟು 207 ಪಂದ್ಯ ಆಡಿರುವ ಅವರು 125 ಗೋಲು ಸಿಡಿಸಿದ್ದಾರೆ. ಜತೆಗೆ 65 ಗೋಲುಗಳಿಗೆ ನೆರವಾಗಿದ್ದಾರೆ. ವೃತ್ತಿಪರ ಫುಟ್​ಬಾಲ್​ನಲ್ಲಿ ಇದುವರೆಗೆ ಒಟ್ಟಾರೆ 920 ಗೋಲು ಬಾರಿಸಿದ ಸಾಧನೆ ಅವರದಾಗಿದೆ.

ಕ್ಲಬ್ ಫುಟ್​ಬಾಲ್​ನಲ್ಲಿ ಬಾರ್ಸಿಲೋನಾ, ಪ್ಯಾರಿಸ್​ ಸೇಂಟ್​-ಜಮೈರ್ನ್​ ಪರ ಆಡಿರುವ ಮೆಸ್ಸಿ, ಪ್ರಸಕ್ತ ಅಮೆರಿಕದ ಇಂಟರ್​ ಮಿಯಾಮಿ ಎ್​ಸಿ ತಂಡದ ಭಾಗವಾಗಿದ್ದಾರೆ.

ಮೆಸ್ಸಿ ಸಾಧನೆಯ ಹಾದಿ

  • 2022ರಲ್ಲಿ ಅರ್ಜೆಂಟೀನಾ ತಂಡದ ನಾಯಕರಾಗಿ ಫಿಫಾ ವಿಶ್ವಕಪ್​ ಗೆಲುವು.

  • ದಾಖಲೆಯ 8 ಬಾರಿ ಪ್ರತಿಷ್ಠಿತ ಬ್ಯಾಲನ್​ ಡಿಓರ್​ ಪ್ರಶಸ್ತಿ ಗೆಲುವು

  • ಎಂಟು ಬಾರಿ ಫಿಫಾದ ವರ್ಷದ ಆಟಗಾರ ಪ್ರಶಸ್ತಿ ಪುರಸ್ಕಾರ.

  • ವೃತ್ತಿಪರ ಫುಟ್​ಬಾಲ್​ನಲ್ಲಿ ಇದುವರೆಗೆ ಒಟ್ಟು 46 ಪ್ರಶಸ್ತಿ ಗೆಲುವು.

  • ಕ್ಯಾಲೆಂಡರ್​ ವರ್ಷವೊಂದರಲ್ಲಿ 91 ಗೋಲು ಸಿಡಿಸಿದ ದಾಖಲೆ.

  • ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 2ನೇ ಗರಿಷ್ಠ 125 ಗೋಲು.

  • 2021, 2024ರಲ್ಲಿ ಸತತ 2 ಬಾರಿ ಕೋಪಾ ಅಮೆರಿಕ ಪ್ರಶಸ್ತಿ ಜಯ.

  • 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲುವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net