ಶ್ರೇಯಸ್ ಸ್ಫೋಟಕ ಶತಕಕ್ಕೆ ಬೆದರಿದ ವಿಂಡೀಸ್!​ ಮೊದಲ ಟಿ20 ಪಂದ್ಯ ಸುಲಭವಾಗಿ ಗೆದ್ದ ಟೀಮ್ ಇಂಡಿಯಾ​ |IND vs WI T20 ​ ​

IND vs WI T20: ಇಂದು ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.
IND vs WI T20 ​  ​
ಶ್ರೇಯಸ್ ಸ್ಫೋಟಕ ಶತಕಕ್ಕೆ ಬೆದರಿದ ವಿಂಡೀಸ್!​ ಮೊದಲ ಟಿ20 ಪಂದ್ಯ ಸುಲಭವಾಗಿ ಗೆದ್ದ ಟೀಮ್ ಇಂಡಿಯಾ​ |IND vs WI T20 ​ ​
Published on: 

IND vs WI T20: ಇಂದು ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶ್ರೇಯಸ್​ ಅಯ್ಯರ್​, ವಿಂಡೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿದರು. ಅಂತೆಯೇ, ಕಣಕ್ಕಿಳಿದ ಆರಂಭಿಕರಾದ ಕಮಿಲ್​ ಪೂರನ್ ಕೇವಲ 12 ರನ್​ಗೆ ಪೆವಿಲಿಯನ್​ ಸೇರಿದರೆ, ಶಾಯ್​ ಹೋಪ್​ (52, 37 ಎಸೆತ​) ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ಯಾಪ್ಟನ್​ ಇನ್ನಿಂಗ್ಸ್​ ತೋರಿದರು.

ಹೋಪ್​, ರುದರ್​ಫೋರ್ಡ್​ ಅರ್ಧಶತಕ

ನಂತರದಲ್ಲಿ ಕ್ರೀಸ್​ಗಿಳಿದ ಶಿಮ್ರಾನ್​ ​ಹೆಟ್ಮಾಯರ್ (5), ಪೋವಲ್​ (0), ಚೇಸ್​ (5), ರೋಮಾರಿಯೋ ಶೆಫಾರ್ಡ್​ (7), ಮ್ಯಾಥ್ಯೂವ್​ ಫೋರ್ಡೆ (2), ಶಾಮರ್​ ಸ್ಪ್ರಿಂಗರ್​ (9) ಕೇವಲ ಒಂದಂಕಿ ರನ್​ ಗಳಿಸಿ ಔಟಾದರು. ಇದು ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣವಾಯಿತು. ಇನ್ನು, ಏಕಾಂಗಿ ಹೋರಾಟ ನಡೆಸಿದ ಶರ್ಫೇನ್ ರುದರ್‌ಫೋರ್ಡ್ ಅವರ ಇನ್ನಿಂಗ್ಸ್ ತಂಡದ ಒಟ್ಟು ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು. 20 ಓವರ್​ ಮುಗಿಯುವುದರೊಳಗೆ ಆಲ್​ಔಟ್​ ಆದ ವಿಂಡೀಸ್​ ಪಡೆ 171 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.

Also Read
ನಾಯಕತ್ವಕ್ಕೆ ಹರ್ಮನ್​ ಗುಡ್​ಬೈ ಬೆನ್ನಲ್ಲೇ ಭಾರತ ಮಹಿಳಾ ತಂಡದ ನೂತನ ಕ್ಯಾಪನ್​ ಆಗಿ ಸ್ಮೃತಿ ಮಂಧಾನ ನೇಮಕ | Smriti Mandhana
IND vs WI T20 ​  ​

ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಾದ ಅಭಿಷೇಕ್ ಶರ್ಮಾ (21 ರನ್​) ಮತ್ತು ಸಂಜು ಸ್ಯಾಮ್ಸನ್ (11) ಉತ್ತಮ ಓಪನಿಂಗ್ ಕೊಡುವಲ್ಲಿ ವಿಫಲರಾಗಿದ್ದೇ ಆದರೂ ನಂತರದಲ್ಲಿ ಕ್ರೀಸ್​ಗೆ ಬಂದ ಇಶಾನ್ ಕಿಶನ್ (ಅಜೇಯ 37 ರನ್)​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ (ಅಜೇಯ 102 ರನ್​, 43 ಎಸೆತ, 6 ಸಿಕ್ಸರ್​, 10 ಬೌಂಡರಿ) ಅವರ ಸ್ಫೋಟಕ ಶತಕದ ಇನ್ನಿಂಗ್ಸ್​ ತಂಡವನ್ನು ಸುಲಭವಾಗಿ ಗೆಲುವಿನೆಡೆಗೆ ಕೊಂಡೊಯ್ಯಿತು. ವಿಂಡೀಸ್​ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆದ್ದು ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net