Deepu Chandra Das | ನಾನು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬರಲು ಬಯಸುತ್ತೇವೆ; ಬಾಂಗ್ಲಾದಲ್ಲಿ ಹತ್ಯೆಯಾದ ದೀಪು ಚಂದ್ರ ದಾಸ್ ಸಹೋದರ ಅಪೂರ್ವ ಹೇಳಿಕೆ

Deepu Chandra Das
Deepu Chandra Das
Published on
ಢಾಕಾ: ನಾನು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬರಲು ಬಯಸುತ್ತೇನೆ ಎಂದು ಬಾಂಗ್ಲಾದೇಶದಲ್ಲಿ ಗುಂಪು ಹಿಂಸಾಚಾರಕ್ಕೆ ಬಲಿಯಾದ ಹಿಂದೂ ಯುವಕ ದೀಪು ಚಂದ್ರ ದಾಸ್​ರ(Deepu Chandra Das) ಸಹೋದರ ಅಪೂರ್ವ ಹೃದಯವಿದ್ರಾವಕ ಕ್ಷಣಗಳನ್ನು ನೆನಪಿಕೊಂಡು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಾಸ್​ ಸಹೋದರ ಅಪೂರ್ವ, ಅಪು ದಾಸ್ ಆ ಕರಾಳ ರಾತ್ರಿಯ ಭಯೋತ್ಪಾದನೆ ಮತ್ತು ಪೊಲೀಸರ ಅಸಹಾಯಕತೆಯನ್ನು ವಿವರಿಸಿದ್ದಾರೆ. ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಅಪೂರ್ವ, ತಮ್ಮ ಕುಟುಂಬವು ಇನ್ನು ಮುಂದೆ ಬಾಂಗ್ಲಾದೇಶದಲ್ಲಿ ಸುರಕ್ಷಿತವಾಗಿಲ್ಲ. ಅಲ್ಲದೆ, ಬಾಂಗ್ಲಾ ಪೊಲೀಸರು ಯಾವುದೇ ಸಹಾಯವನ್ನು ಮಾಡಿಲ್ಲ. ನಾವು ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬರಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅಪೂರ್ವ, ನಾನು ಮನೆಯಿಂದ ಹೊರಗೆ ಇದ್ದಾಗ ಇದ್ದಕ್ಕಿದ್ದಂತೆ ದೀಪು ಮೇಲೆ ಹಲ್ಲೆ ನಡೆಸಿ ಸುಟ್ಟು ಹಾಕಲಾಗಿದೆ ಎಂದು ಕೇಳಿದೆ. ಅಲ್ಲದೆ, ದಾಸ್​ಗೆ ಯಾವುದೇ ಶತ್ರುಗಳು ಇರಲಿಲ್ಲ. ನಾವೆಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೆವು. ದಾಳಿಯ ಸಮಯದಲ್ಲಿ ಅವನು ಯಾರನ್ನೂ ಅವಮಾನಿಸಿಲ್ಲ, ಯಾರಿಗೂ ಕೆಟ್ಟದಾಗಿ ಹೇಳಿಲ್ಲ ಎಂದು ಹೇಳುತ್ತಲೇ ಇದ್ದನು. ಆದರೆ ಅಲ್ಲಿ ಯಾರೂ ಅವನ ಮಾತನ್ನು ಕೇಳಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಮಗೆ ಅಲ್ಲಿ ಯಾರೂ ಇಲ್ಲ. ಅಲ್ಲದೆ, ಪೊಲೀಸರು ಕೊಲೆಗಾರರನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದಾರೆ. ದೀಪು ಒಂದು ಪುಟ್ಟ ಮಗುವನ್ನು ಬಿಟ್ಟು ಹೋಗಿದ್ದಾನೆ. ನಮಗೆ ಆರ್ಥಿಕ ಸಾಮರ್ಥ್ಯವಿದ್ದರೆ, ನಾವು ಈಗಲೇ ಬಾಂಗ್ಲಾದೇಶವನ್ನು ಬಿಡಲು ಇಷ್ಟಪಡುತ್ತಿದ್ದೆವು. ನಮಗೆ ಎಲ್ಲಿಂದಲಾದರೂ ಸಹಾಯ ಸಿಗುತ್ತಿದ್ದರೆ, ನಾವು ಭಾರತಕ್ಕೆ ಹೋಗಲು ಇಷ್ಟಪಡುತ್ತಿದ್ದೆವು ಎಂದು ದೀಪು ಸಹೋದರ ಹೇಳಿದ್ದಾರೆ.

ದೀಪುವಿಗೆ ಏನಾಯಿತು?

ದೀಪು ಚಂದ್ರ ದಾಸ್ ಹತ್ಯೆ ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿಸಿದೆ. ಇದ್ದಕ್ಕಿದ್ದಂತೆ ಉಗ್ರರ ಗುಂಪೊಂದು ಅವರನ್ನು ಸುತ್ತುವರೆದಿತು. ದಾಸ್​ ತಮ್ಮ ಜೀವಕ್ಕಾಗಿ ಬೇಡಿಕೊಂಡರು, ಅವರು ಯಾರನ್ನೂ ಅವಮಾನಿಸಿಲ್ಲ ಮತ್ತು ಅವರು ನಿರಪರಾಧಿ ಎಂದು ಬೇಡಿಕೊಂಡಿದ್ದಾನೆ. ಆದರೆ ದ್ವೇಷ ಕುರುಡಾದ ಗುಂಪು ಅವರನ್ನು ನಿರ್ಲಕ್ಷಿಸಿತು. ಗಲಭೆಕೋರರು ಅವರನ್ನು ಪ್ರಾಣಿಯಂತೆ ಎಳೆದೊಯ್ದರು. ದಾಸ್​ನ ಅರ್ಧ ಸತ್ತ ತನಕ ಅವರನ್ನು ಕೋಲುಗಳು ಮತ್ತು ರಾಡ್‌ಗಳಿಂದ ಹೊಡೆದರು. ನಂತರ, ಕ್ರೂರಿಗಳು ಅವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.

ದೀಪುವಿನ ಹಂತಕರಿಗೆ ಏನಾಯಿತು?

ಢಾಕಾ ಟ್ರಿಬ್ಯೂನ್ ಮತ್ತು ದಿ ಡೈಲಿ ಸ್ಟಾರ್ ವರದಿಗಳ ಪ್ರಕಾರ, ದೀಪು ಚಂದ್ರ ದಾಸ್ ಕ್ರೂರ ಹತ್ಯೆಯ ಬಗ್ಗೆ ಪೊಲೀಸರಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಸ್ಥಳೀಯ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಮುಖ ಆರೋಪಿಗಳಲ್ಲಿ ಯಾರ ಬಂಧನವೂ ಇನ್ನೂ ದೃಢಪಟ್ಟಿಲ್ಲ. ತನಿಖೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಕೊಲೆಗಾರರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ ಪೊಲೀಸರು ಈ ವಿಷಯದಿಂದ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ದೀಪು ಅವರ ಕುಟುಂಬ ಸ್ಪಷ್ಟವಾಗಿ ಆರೋಪಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net