ಮದುವೆಯಾಗಿ, ಮಕ್ಕಳನ್ನು ಹುಟ್ಟಿಸಿ, ಚರ್ಚ್‌ಗೆ ಕಳುಹಿಸಿ: 2035 ರ ಜನಸಂಖ್ಯೆ ವರದಿ ಬೆನ್ನಲ್ಲೇ 'ಕ್ಯಾರೋಲಿನ್ ಲೆವಿಟ್' ಟ್ವೀಟ್ ವೈರಲ್! Karoline Leavitt

Karoline Leavitt viral tweet on 2035 Pew Research religious population report
2035ರ ಧಾರ್ಮಿಕ ಜನಸಂಖ್ಯೆಯ ಕುರಿತಾದ 'ಪ್ಯೂ ರಿಸರ್ಚ್' ವರದಿಯ ಬಗ್ಗೆ ಕ್ಯಾರೋಲಿನ್ ಲೆವಿಟ್ ಮಾಡಿದ ವೈರಲ್ ಟ್ವೀಟ್
Published on: 

ವಾಷಿಂಗ್ಟನ್​​: 2035 ರಲ್ಲಿ ವಿಶ್ವದ ಧರ್ಮಾಧಾರಿತ ಜನಸಂಖ್ಯೆಯಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ವರದಿಯೊಂದು ಹರಿದಾಡುತ್ತಿದ್ದು, ಇದರಂತೆ 2035 ರಲ್ಲಿ ಕ್ರಿಶ್ಚಿಯನ್​ರನ್ನು ಮೀರಿಸಿ ಇಸ್ಲಾಂ ಧರ್ಮದವರ ಜನಸಂಖ್ಯೆ ಅಗ್ರಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಈಗ, ಈ ವರದಿ ಪ್ರಕಟವಾಗುತ್ತಿದ್ದಂತೆ ಕ್ರಿಶ್ಚಿಯನ್​ ಸಮೂದಾಯ ಅದರಲ್ಲೂ ಯುರೋಪ್​ನಲ್ಲಿರುವ ಕ್ರಿಶ್ಚಿಯನ್ನರು ಒಂದರ್ಥದಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ವೈಟ್​ಹೌಸ್​ನ ಮಾಜಿ ಮಾಧ್ಯಮ ವಕ್ತಾರೆ ಕ್ಯಾರೋಲಿನ್ ಲೆವಿಟ್ (Karoline Leavitt) ಮಾಡಿರುವ ಟ್ವೀಟ್​ವೊಂದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ.

ಮಕ್ಕಳನ್ನು ಹುಟ್ಟಿಸಿ, ಚರ್ಚ್​ಗೆ ಸೇರಿಸಿ!

ಪ್ರಖ್ಯಾತ ಸಂಶೋಧನಾ ಸಂಸ್ಥೆ ‘ಪ್ಯೂ ರಿಸರ್ಚ್ ಸೆಂಟರ್’ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಜಗತ್ತಿನ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ. ಈಗ, ಈ ವರದಿ ಕುರಿತು ವಾಷಿಂಗ್ಟನ್​ ಪೋಸ್ಟ್​​ನಲ್ಲಿ ಪ್ರಕಟವಾಗಿದ್ದ ಸುದ್ದಿಗೆ ಟ್ವೀಟ್​ ಮಾಡಿರುವ ಕ್ಯಾರೋಲಿನ್ ಲೆವಿಟ್, ಮೊದಲು ಮದುವೆಯಾಗಿ, ಮಕ್ಕಳನ್ನು ಹುಟ್ಟಿಸಿ ಅವರನ್ನು ಚರ್ಚ ವಾತಾವರಣದಲ್ಲಿ ಬೆಳೆಸಿ ಹಾಗೂ ಅವರಲ್ಲಿ ಅಮೆರಿಕ ಬಗ್ಗೆ ಪ್ರೀತಿಯನ್ನು ಬೆಳೆಸಿ ಎಂದು ಬರೆದುಕೊಂಡಿದ್ದಾರೆ.

ಕೆಲವರಿಂದ ಮೆಚ್ಚುಗೆ; ಕೆಲವರ ಆಕ್ಷೇಪ!

ಇನ್ನೂ ಈ ವರದಿ ಬಗ್ಗೆ ಕ್ಯಾರೋಲಿನ್ ಲೆವಿಟ್ ಮಾಡಿರುವ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ಲಭಿಸುತ್ತಿದೆ. ಕೆಲವರು ಹೌದು, ಇದು ಕ್ರೈಸ್ತ ಸಮೂದಾಯಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ನಾನು ನಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಇನ್ನು ಕೆಲವರು, ಸಾರ್ವಜನಿಕ ಜೀವನದಲ್ಲಿರುವವರು ಹೀಗೆ ಒಂದು ಧರ್ಮವನ್ನು ಮಾತ್ರ ಪಾಲಿಸಿ ಎಂದು ಹೇಳುವುದು ಹಾಗೂ ಮಕ್ಕಳನ್ನು ಮಾಡಿಕೊಳ್ಳಿ ಎಂದು ವೈಯಕ್ತಿಕ ವಿಚಾರವನ್ನು ಮಾತನಾಡುವುದು ಸರಿಯಲ್ಲ ಎಂದು ಲೆವಿಟ್ ವಿರುದ್ಧ ಕಿಡಿಕಾರಿದ್ದಾರೆ.

Also Read
2035 ಕ್ಕೆ ಕ್ರೈಸ್ತರನ್ನು ಹಿಂದಿಕ್ಕಿ ಜಗತ್ತಿನ ನಂಬರ್ 1 ಧರ್ಮವಾಗಲಿದೆ ಇಸ್ಲಾಂ! ಹಿಂದೂಗಳ ಸ್ಥಿತಿ ಏನಾಗಲಿದೆ ಗೊತ್ತಾ? ‘ಪ್ಯೂ ರಿಸರ್ಚ್’ ಸ್ಫೋಟಕ ವರದಿ|Pew Research
Karoline Leavitt viral tweet on 2035 Pew Research religious population report

ವರದಿಯಲ್ಲೇನಿದೆ?

ಇನ್ನು ‘ಪ್ಯೂ ರಿಸರ್ಚ್ ಸೆಂಟರ್’ ಬಿಡುಗಡೆ ಮಾಡಿರುವ ವರದಿಯಲ್ಲಿ, 2020ರಲ್ಲಿ ಜಗತ್ತಿನಲ್ಲಿ 227 ಕೋಟಿ ಕ್ರೈಸ್ತರು ಮತ್ತು 202 ಕೋಟಿ ಮುಸ್ಲಿಮರಿದ್ದರು. ಆದರೆ 2035 ರ ವೇಳೆಗೆ ಮುಸ್ಲಿಮರ ಸಂಖ್ಯೆ 2.57 ಶತಕೋಟಿಗೆ ಏರಲಿದ್ದು, ಕ್ರೈಸ್ತರ ಸಂಖ್ಯೆ 2.52 ಶತಕೋಟಿಯಷ್ಟಿರಲಿದೆ. ಇನ್ನು 2070 ರ ವೇಳೆಗೆ ಮುಸ್ಲಿಮರ ಜನಸಂಖ್ಯೆ ಬರೋಬ್ಬರಿ 3.6 ಶತಕೋಟಿ ದಾಟಲಿದ್ದು, ಕ್ರೈಸ್ತರ ಸಂಖ್ಯೆ 3 ಶತಕೋಟಿಗಿಂತ ಸ್ವಲ್ಪ ಕಡಿಮೆ ಇರಲಿದೆ ಎಂದು ವರದಿ ಅಂದಾಜಿಸಿದೆ.

ಜಗತ್ತಿನಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮುಸ್ಲಿಮರ ಜನಸಂಖ್ಯೆ ಉಳಿದೆಲ್ಲಾ ಧರ್ಮಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಮತಾಂತರದ, ಬದಲಾಗಿ ಮುಸ್ಲಿಂ ಸಮುದಾಯದಲ್ಲಿರುವ ಹೆಚ್ಚಿನ ಜನನ ದರವೇ ಮುಖ್ಯ ಕಾರಣ ಎಂದು ಪ್ಯೂ ಸಂಸ್ಥೆಯ ತಜ್ಞ ಕಾನ್ರಾಡ್ ಹ್ಯಾಕೆಟ್ ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).