ಇದೆಂಥಾ ತಲೆಬಿಸಿ! ಎಮರ್ಜೆನ್ಸಿ ಕೋಡ್​ ಸಿಕ್ಕಿದ್ದೇ ತಡ ಲಂಡನ್​ಗೆ ವಾಪಾಸ್​ ಹೊರಟ ಬ್ರಿಟಿಷ್ ಏರ್‌ವೇಸ್‌ ವಿಮಾನ | British Airways

ತಕ್ಷಣವೇ 28 ಸಾವಿರ ಎತ್ತರದಿಂದ ಕೆಲವೇ ನಿಮಿಷಗಳಲ್ಲಿ ಕೆಳಗಿಳಿದ ವಿಮಾನ, ವಾಪಾಸ್​ ಲಂಡನ್​ ಕಡೆ ಮುಖ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
British Airways
ಇದೆಂಥಾ ತಲೆಬಿಸಿ! ಎಮರ್ಜೆನ್ಸಿ ಕೋಡ್​ ಸಿಕ್ಕಿದ್ದೇ ತಡ 28,000 ಅಡಿಯಿಂದ ತಕ್ಷಣಕ್ಕೆ ಕೆಳಗಿಳಿದ ಬ್ರಿಟಿಷ್ ಏರ್‌ವೇಸ್‌ | British Airways
Published on: 

British Airways: ಕಳೆದ ವಾರ ಫ್ಲೈ ದುಬೈ ವಿಮಾನವೊಂದು ಹೈಜಾಕ್​ ಆಗಿ, ಭಾರತೀಯ ಪೈಲಟ್​ ಸ್ಮಿತ್​ ಮಚ್ಚಾರ್ ಸಾವಿನಿಂದ ಬದುಕುಳಿದ ಘಟನೆ ಮರೆಯುವ ಮುನ್ನವೇ ಇದೀಗ ಲಂಡನ್​ನಿಂದ ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್‌ ವಿಮಾನವೊಂದು ದಿಢೀರ್ ಯು-ಟರ್ನ್​ ಹೊಡೆದಿದೆ.

ಬ್ರಿಟಿಷ್ ಏರ್‌ವೇಸ್ BA295 ಎಂಬ ವಿಮಾನ, ಲಂಡನ್‌ನಿಂದ ಚಿಕಾಗೋ ಮಾರ್ಗದಲ್ಲಿ ಸಾಗುತ್ತಿತ್ತು. ಈ ವೇಳೆ ಐರ್ಲೆಂಡ್​ ತಲುಪುತ್ತಿದ್ದಂತೆ ಐರಿಶ್ ವಾಯುಪ್ರದೇಶದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ತಕ್ಷಣವೇ 28 ಸಾವಿರ ಎತ್ತರದಿಂದ ಕೆಲವೇ ನಿಮಿಷಗಳಲ್ಲಿ ಕೆಳಗಿಳಿದ ವಿಮಾನ, ವಾಪಾಸ್​ ಲಂಡನ್​ ಕಡೆ ಮುಖ ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಪ್ರಕಾರ, ವಿಮಾನದ ಟ್ರಾನ್ಸ್‌ಪಾಂಡರ್ ಸ್ಕ್ವಾಕ್ ಕೋಡ್ '7700' ಅನ್ನು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಕಳುಹಿಸಲಾಯಿತು. ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸಲು ಈ ಕೋಡ್​ನ ವಾಯುಯಾನದಲ್ಲಿ ಬಳಕೆ ಮಾಡಲಾಗುತ್ತದೆ. ಐರ್ಲೆಂಡ್ ಮೇಲೆ ಹಾರುತ್ತಿದ್ದಾಗ ವಿಮಾನವು ಸುಮಾರು 9,000 ಅಡಿ ಎತ್ತರಕ್ಕೆ ಇಳಿದಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತೋರಿಸಿದೆ. ಕೋಡ್​ ಬೆನ್ನಲ್ಲೇ ಪೈಲಟ್​ ವಿಮಾನವನ್ನು ಲಂಡನ್​ಗೆ ವಾಪಾಸ್ ತಿರುಗಿಸಿದ್ದಾರೆ.

Also Read
ಶಿವಣ್ಣ, ವಿದ್ಯಾ ಬಾಲನ್​, ಮೋಹನ್​ ಲಾಲ್​... 'ಜೈಲರ್​ 2' ಟ್ರೇಲರ್​ನಲ್ಲಿ ನೀವಿದನ್ನು ಗಮನಿಸಿದ್ರಾ? | Jailer 2 Trailer
British Airways

ಅಷ್ಟಕ್ಕೂ ಸಮಸ್ಯೆ ಏನು?

ವಿಮಾನದಲ್ಲಿ ಯಾವ ರೀತಿಯ ತುರ್ತು ಪರಿಸ್ಥಿತಿ ಸಂಭವಿಸಿದೆ ಎಂಬುದನ್ನು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದು ತಾಂತ್ರಿಕ ಸಮಸ್ಯೆಯೇ, ವೈದ್ಯಕೀಯ ತುರ್ತು ಸ್ಥಿತಿಯೇ ಅಥವಾ ಇನ್ನೇನಾದರೂ ಸಂಭವಿಸಿದೆಯಾ ಎಂಬುದು ಸದ್ಯದ ಮಟ್ಟಿಗೆ ಅಸ್ಪಷ್ಟವಾಗಿದೆ. ವಿಮಾನಯಾನ ಸಂಸ್ಥೆ ಅಥವಾ ಸಂಬಂಧಿತ ಅಧಿಕಾರಿಗಳು ಅಧಿಕೃತವಾಗಿ ವಿವರಗಳನ್ನು ಬಿಡುಗಡೆ ಮಾಡಿದ ನಂತರವೇ ತುರ್ತು ಪರಿಸ್ಥಿತಿಯ ಅಸಲಿ ಕಾರಣ ಹೊರಬೀಳಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net