ಶಿವಣ್ಣ, ವಿದ್ಯಾ ಬಾಲನ್​, ಮೋಹನ್​ ಲಾಲ್​... 'ಜೈಲರ್​ 2' ಟ್ರೇಲರ್​ನಲ್ಲಿ ನೀವಿದನ್ನು ಗಮನಿಸಿದ್ರಾ? | Jailer 2 Trailer

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿರುವ ಈ ಟ್ರೇಲರ್​ ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, 'ಟೈಗರ್ ಮುತ್ತುವೇಲ್ ಪಾಂಡಿಯನ್' ಆಗಿ ರಜಿನಿಕಾಂತ್​ ಅವರ ಸ್ಟೈಲಿಶ್​ ಸ್ವ್ಯಾಗ್​ ಮತ್ತು ಡೈಲಾಗ್​ಗಳು​ ಗಮನ ಸೆಳೆದಿವೆ.
Jailer 2 Trailer
ಶಿವಣ್ಣ, ವಿದ್ಯಾ ಬಾಲನ್​, ಮೋಹನ್​ ಲಾಲ್​... 'ಜೈಲರ್​ 2' ಟ್ರೇಲರ್​ನಲ್ಲಿ ನೀವಿದನ್ನು ಗಮನಿಸಿದ್ರಾ? | Jailer 2 Trailer
Published on: 

Jailer 2 Trailer: ತಮಿಳಿನ ಸೂಪರ್​ಸ್ಟಾರ್​, ಅಭಿಮಾನಿಗಳ ನೆಚ್ಚಿನ 'ತಲೈವಾ' ರಜಿನಿಕಾಂತ್​ ಅಭಿನಯದ ಹಾಗೂ ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ಟ್ರೇಲರ್​ ಇದೀಗ ಅಧಿಕೃತವಾಗಿ ಹೊರಬಿದ್ದಿದೆ.

ರಜಿನಿ ಸ್ವ್ಯಾಗ್​, ಡೈಲಾಗ್​

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ 'ಜೈಲರ್' ಚಿತ್ರದ ಸೀಕ್ವೆಲ್​ 'ಜೈಲರ್ 2' ಟ್ರೇಲರ್​ ಬಿಡುಗಡೆಗೊಂಡಿದ್ದು, ರಜಿನಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿರುವ ಈ ಟ್ರೇಲರ್​ ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, 'ಟೈಗರ್ ಮುತ್ತುವೇಲ್ ಪಾಂಡಿಯನ್' ಆಗಿ ರಜಿನಿಕಾಂತ್​ ಅವರ ಸ್ಟೈಲಿಶ್​ ಸ್ವ್ಯಾಗ್​ ಮತ್ತು ಡೈಲಾಗ್​ಗಳು​ ಗಮನ ಸೆಳೆದಿವೆ.

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್

ಡಾರ್ಕ್ ಹ್ಯೂಮರ್ ಅಂಶಗಳು ಕೆಲವೆಡೆ ಮೋಡಿ ಮಾಡಿದರೆ, ಎಲ್ಲ ಶತ್ರುಗಳನ್ನು ಒಂದೇ ಕಡೆಗೆ ಕರೆಸಿ, ಬಾಂಬ್ ಇಟ್ಟು ಮುಗಿಸುವುದೇ ಈಗಿನ ಟ್ರೆಂಡ್ ಎಂಬ ರಜಿನಿ ಡೈಲಾಗ್​ ಕ್ಯಾಚಿ ಆಗಿದೆ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​, ಮಲಯಾಳಂ ನಟ ಮೋಹನ್​ ಲಾಲ್​ ಮತ್ತು ಹಿಂದಿ ನಟಿ ವಿದ್ಯಾ ಬಾಲನ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರೇ ಮ್ಯೂಸಿಕ್​ ನೀಡಿರುವುದು, ಕೆಲವು ದೃಶ್ಯಗಳಿಗೆ ಹೊಸ ಮೆರುಗು ನೀಡಿದಂತಿದೆ.

ಜೈಲರ್​ 2 ಟ್ರೇಲರ್ ಗಮನ ಸೆಳೆದಿದ್ದೇ ಆದರೂ ಮೊದಲ ಭಾಗದಷ್ಟು ವಾವ್​ ಎನ್ನುವಂತಿಲ್ಲ. ಜೈಲರ್​ ಮೊದಲ ಭಾಗದ ಟ್ರೇಲರ್​ನಲ್ಲಿ ಆ್ಯಕ್ಷನ್​ ಸೀನ್​ಗಳು ನೋಡುಗರಿಗೆ ರೋಮಾಂಚಕ ಅನುಭವ ನೀಡಿತ್ತು. ಆದರೆ, ಅದೇ, ಎರಡನೇ ಭಾಗದ ಸೀಕ್ವೆಲ್​ನ ಟ್ರೇಲರ್​ ಸ್ವಲ್ಪ ಸ್ಲೋ ಎಂಬ ಭಾವನೆ ನೀಡಿರುವುದು ಕೊಂಚ ಶಾಕಿಂಗ್​. ಕಾರಣ, ಇದು ಸಕ್ಸಸ್​ಫುಲ್​ ಚಿತ್ರದ ಎರಡನೇ ಭಾಗ ಅನ್ನೋದು. ಒಟ್ಟಾರೆ, ಸಿನಿಮಾ ಇನ್ನೂ ಬಾಕಿ ಇದ್ದು, ಇದೇ ಅ.15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್​ ಆಗಲಿದೆ.

Also Read
2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದ್ರೆ ಯಾರಾಗ್ತಾರೆ ಸಿಎಂ? ಮಾಜಿ ಸಿಎಂ ಬಿಎಸ್​ವೈ ಕೊಟ್ಟ ಉತ್ತರವಿದು | BS Yediyurappa
Jailer 2 Trailer

ಚಿತ್ರಕ್ಕೆ ಎಂದಿನಂತೆ ಸೂಪರ್​ಹಿಟ್​ ಮ್ಯೂಸಿಕಲ್​ ಕಂಪೋಸರ್​ ಅನಿರುದ್ಧ್​ ರವಿಚಂದ್ರನ್ ಅವರೇ ಸಂಗೀತ ನೀಡಿದ್ದಾರೆ. ರಜಿನಿಕಾಂತ್​, ಮಿರ್ನಾ ಮೆನನ್​, ಮೋಹನ್​ ಲಾಲ್​, ಹ್ಯಾಟ್ರಿಕ್​ ಹೀರೋ ಶಿವಕಾಜ್​ಕುಮಾರ್​, ಹೃತಿಕ್​ ರೋಷನ್​, ಮೋಹನ್​ ಲಾಲ್​​ ಸೇರಿದಂತೆ ದಿಗ್ಗಜ ಕಲಾವಿದರೇ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್). ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net