ಒಬ್ಬರಲ್ಲ, ಇಬ್ಬರಲ್ಲ ಈ ಭಿಕ್ಷುಕನಿಗೆ 21 ಪತ್ನಿಯರು! ತಾಳಿ ಕಟ್ಟಿದ ಮಡದಿಯರ ಹೆಸರೇ ಸರಿಯಾಗಿ ಗೊತ್ತಿಲ್ವಂತೆ ಈತನಿಗೆ | Viral Beggar

ಈ ವ್ಯಕ್ತಿ 21 ಮಹಿಳೆಯರಿಗೆ ತಾಳಿ ಕಟ್ಟಿದಲ್ಲದೇ, ಅವರೊಂದಿಗೆ ಸುಖ ಸಂಸಾರ ಸಾಗಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ. ಅಷ್ಟಕ್ಕೂ ಇದು ಹೇಗೆ ಸಾಧ್ಯವಾಯಿತು? ಈತನ ಅಸಲಿ ಕಥೆಯೇನು? ಎಂಬುದರ ವಿವರ ಹೀಗಿದೆ ನೋಡಿ.
Viral Beggar
ಒಬ್ಬರಲ್ಲ, ಇಬ್ಬರಲ್ಲ ಈ ಭಿಕ್ಷುಕನಿಗೆ 21 ಪತ್ನಿಯರು! ತಾಳಿ ಕಟ್ಟಿದ ಮಡದಿಯರ ಹೆಸರೇ ಸರಿಯಾಗಿ ಗೊತ್ತಿಲ್ವಂತೆ ಈತನಿಗೆ | Viral Beggar
Published on: 
  • ಈ ಭಿಕ್ಷುಕನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​

  • ಬರೋಬ್ಬರಿ 21 ಮಹಿಳೆಯರನ್ನು ಮದುವೆ ಆಗಿರುವ ಬಾಂಗ್ಲಾದೇಶದ ಭಿಕ್ಷುಕ ಈತ

Viral Beggar: ಇಂದಿನ ಕಾಲಘಟ್ಟದಲ್ಲಿ ನಮ್ಮ ಹುಡುಗನಿಗೆ ಒಂದೊಳ್ಳೆ ಹುಡುಗಿ ಇರಲಿ, ಯಾರಾದರೂ ಹೆಣ್ಣು ಕೊಟ್ಟರೆ ಸಾಕಪ್ಪ ತಕ್ಷಣವೇ ಒಂದು ಮದುವೆ ಮಾಡೋಣ ಎಂದು ಪೋಷಕರು ಹಗಲಿರುಳು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಅದರಲ್ಲೂ, ಈ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ಗಳಲ್ಲಿಯಂತು ಲಕ್ಷಗಟ್ಟಲೇ ಅವಿವಾಹಿತರು, ವಧು ಬೇಕಾಗಿದೆ ಎಂದು ಅರ್ಹತೆ, ಆರ್ಥಿಕತೆ ಎಲ್ಲದರ ಬಗ್ಗೆ ಇಂಚಿಂಚೂ ಮಾಹಿತಿ ಹಾಕಿದರೂ ಒಬ್ಬರೂ ತಿರುಗಿ ನೋಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ, ಇಲ್ಲೊಬ್ಬ ಭಿಕ್ಷುಕ ಬರೋಬ್ಬರಿ 21 ಮಹಿಳೆಯರ ಜತೆ ದಾಂಪತ್ಯ ಜೀವನ ಸಾಗಿಸುತ್ತಿರುವುದು ಸದ್ಯ ಹಲವರನ್ನು ಬೆಕ್ಕಸ ಬೆರಗಾಗಿಸಿದೆ.

ಹೆಣ್ಣು ಸಿಗುತ್ತಿಲ್ಲ...

ಇತ್ತೀಚೆಗಷ್ಟೇ ಕರ್ನಾಟಕದ ರೈತನೊಬ್ಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಹೋಗಿ ನನಗೆ ಮದುವೆಯಾಗಿಲ್ಲ. ಯಾರೂ ಸಹ ಹೆಣ್ಣು ಕೊಡುತ್ತಿಲ್ಲ ಎಂದು ತಮ್ಮ ಗೋಳಾಟ ತೋಡಿಕೊಂಡಿದ್ದರು. ಇದನ್ನೆಲ್ಲ ನೋಡಿದಾಗ, ಈ ವ್ಯಕ್ತಿ 21 ಮಹಿಳೆಯರಿಗೆ ತಾಳಿ ಕಟ್ಟಿದಲ್ಲದೇ, ಅವರೊಂದಿಗೆ ಸುಖ ಸಂಸಾರ ಸಾಗಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ. ಅಷ್ಟಕ್ಕೂ ಇದು ಹೇಗೆ ಸಾಧ್ಯವಾಯಿತು? ಈತನ ಅಸಲಿ ಕಥೆಯೇನು? ಎಂಬುದರ ವಿವರ ಹೀಗಿದೆ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈತ ಬಾಂಗ್ಲಾದೇಶದ ಮೋರು ಮಿಯಾ (35). ಗುಡಿಸಿಲಿನಲ್ಲಿ ವಾಸಿಸುತ್ತಾ ದಿನ ಬೆಳಗಾದರೆ ಭಿಕ್ಷೆ ಬೇಡುವ ಮೋರು, 21 ಮಹಿಳೆಯರನ್ನು ಮದುವೆಯಾಗಿದ್ದಾನೆ. ಇನ್ನೂ ವಿಚಿತ್ರ ಸಂಗತಿ ಏನೆಂದರೆ, ತಾನು ತಾಳಿ ಕಟ್ಟಿರುವ ಪತ್ನಿಯರ ಹೆಸರನ್ನೂ ಸರಿಯಾಗಿ ಹೇಳಲಾಗದ ಭಿಕ್ಷುಕನನ್ನು ಇಷ್ಟು ಮಂದಿ ಹೇಗೆ ಮದುವೆಯಾಗಿದ್ದಾರೆ ಎಂಬುದೇ ಇದೀಗ ನೆಟಿಗರಲ್ಲಿ ಬೆಂಬಿಡದೆ ಕಾಡುತ್ತಿರುವ ಕುತೂಹಲಕಾರಿ ಪ್ರಶ್ನೆ.

ಮಹಿಳೆಯರೇ ನನ್ನನ್ನು ಹುಡುಕಿ...

ಬಾಂಗ್ಲಾದೇಶದ ಮಾಧ್ಯಮಗಳ ಜತೆ ಮಾತನಾಡಿರುವ ಮೊರು ಮಿಯಾ, "ನಾನು ಯಾರನ್ನೂ ಮದುವೆಯಾಗಲು ಬಯಸಿರಲಿಲ್ಲ. ಮದುವೆಯಾಗುವಂತೆ ಕೇಳಿಕೊಂಡು ಮಹಿಳೆಯರೇ ನನ್ನನ್ನು ಹುಡುಕಿ ಬರುತ್ತಿದ್ದರು. ತನಗಿಂತ ವಯಸ್ಸಾದ ಗಂಡಸರೂ ದಾಂಪತ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ನನ್ನನ್ನು ಕಂಡರೆ ಹೆಂಗಸರು ಯಾಕೆ ಅಷ್ಟೊಂದು ಇಷ್ಟಪಡುತ್ತಾರೋ ಗೊತ್ತಿಲ್ಲ ಎಂದೆಲ್ಲ ವ್ಯಂಗ್ಯವಾಡುತ್ತಾರೆ" ಎಂದರು.

"ಅಂತಹ ವ್ಯಕ್ತಿಗಳು ನನ್ನಲ್ಲಿ ಏನನ್ನು ನೋಡುತ್ತಾರೆಂದು ನನಗೆ ತಿಳಿದಿಲ್ಲ. ಅದಕ್ಕೆ ಅವರೇ ಉತ್ತರಿಸಬೇಕು. ಮಹಿಳೆಯರು ನನ್ನ ಬಳಿಗೆ ಬಂದು ನನ್ನನ್ನು ಮದುವೆಯಾಗುವಂತೆ ಕೇಳುತ್ತಾರೆ. ತನ್ನನ್ನು ಮದುವೆಯಾಗು ಎಂದು ಕೇಳುವವರನ್ನು ತಿರಸ್ಕರಿಸಲು ನಾನ್ಯಾವತ್ತೂ ಇಷ್ಟಪಡುವುದಿಲ್ಲ. ಮಹಿಳೆಯ ವಿವಾಹ ಪ್ರಸ್ತಾಪವನ್ನು ನಿರಾಕರಿಸುವುದು ಅಗೌರವ. ಇದೇ ಕಾರಣಕ್ಕೆ, ನಾನು ಎಲ್ಲರಿಗೂ ಆಯ್ತು ಎಂದು ಒಪ್ಪಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.

Also Read
ಜೂ.​ ಆರ್ಟಿಸ್ಟ್​ ಆಗಿ ಎಂಟ್ರಿಕೊಟ್ಟ ಮಮಿತಾ ಇಂದು ಬ್ಲಾಕ್​ಬಸ್ಟರ್​ ಚಿತ್ರಗಳ ಸ್ಟಾರ್​ ಹೀರೋಯಿನ್​! ಜೋರಾಯ್ತು ಯುವ ನಟಿಯ ಕ್ರೇಜ್​ | Mamitha Baiju
Viral Beggar

21 ಪತ್ನಿಯರಿದ್ದರೂ ಅತ್ಯಂತ ಸರಳ ಜೀವನ ನಡೆಸುತ್ತಿದ್ದು, ಕೇವಲ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದೇವೆ. ಭಿಕ್ಷಾಟನೆಯೇ ಆದಾಯದ ಮೂಲವಾಗಿದೆ. ಭಿಕ್ಷೆ ಬೇಡಲು ಹೊರಡುವಾಗ ಪ್ರತಿ ದಿನವೂ ಒಬ್ಬೊಬ್ಬರಂತೆ ಪತ್ನಿಯರೂ ಜೊತೆಗೆ ಬರುತ್ತಾರೆ ಎಂದಿದ್ದಾರೆ. ಈ ವೇಳೆ, ನಿಮ್ಮ 21 ಪತ್ನಿಯರ ಹೆಸರನ್ನು ಕೇಳಿದಾಗ ಗೊಂದಲಕ್ಕೊಳಗಾದ ಅವರು, ನನಗೆ ಎಲ್ಲರ ಹೆಸರು ಸರಿಯಾಗಿ ನೆನಪಿಲ್ಲ ಎಂದರು. ಕೆಲವು ಹೆಸರುಗಳನ್ನು ಮಾತ್ರ ನೆನಪಿಸಿಕೊಂಡ ಮಿಯಾ, ಶೀಲಾ, ನರ್ಗೀಸ್, ಸೆಲಿನಾ, ಆಲಿಯಾ, ತಾರಾ, ಜ್ಯೋತ್ಸ್ನಾ, ರಬಿಯಾ ಮತ್ತು ಪಾರುಲ್ ಎಂದು ಕೆಲವೇ ಕೆಲವು ಪತ್ನಿಯರ ಹೆಸರನ್ನು ಹೇಳಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net