ಪೆರುವಿನಲ್ಲಿ ಸೇನಾ ಹೆಲಿಕಾಪ್ಟನ್ ಪತನ: ಎಂಟು ಮಂದಿ ದುರ್ಮರಣ, ಪೈಲಟ್​ಗೆ ಗಂಭೀರ ಗಾಯ | Helicopter crashes

ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪೆರುವಿಯನ್ ವಾಯುಪಡೆಯ ಹೆಲಿಕಾಪ್ಟರ್ ದೇಶದ ಆಗ್ನೇಯದಲ್ಲಿ ಕೋಕಾ ಬೆಳೆಯುವ ನದಿ ಜಲಾನಯನ ಪ್ರದೇಶದಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಎಂಟು ಮಂದಿ ಮೃತಪಟ್ಪಿದ್ದಾರೆ. ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಶನಿವಾರ(ನ. 28) ವರದಿಯಾಗಿದೆ.
ಪೆರುವಿನಲ್ಲಿ ಸೇನಾ ಹೆಲಿಕಾಪ್ಟನ್ ಪತನ: ಎಂಟು ಮಂದಿ ದುರ್ಮರಣ, ಪೈಲಟ್​ಗೆ ಗಂಭೀರ ಗಾಯ | Helicopter crashes
Published on: 

ಲಿಮಾ: ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಪೆರುವಿಯನ್ ವಾಯುಪಡೆಯ ಹೆಲಿಕಾಪ್ಟರ್ ದೇಶದ ಆಗ್ನೇಯದಲ್ಲಿ ಕೋಕಾ ಬೆಳೆಯುವ ನದಿ ಜಲಾನಯನ ಪ್ರದೇಶದಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಎಂಟು ಮಂದಿ ಮೃತಪಟ್ಪಿದ್ದಾರೆ. ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಶನಿವಾರ(ನ. 28) ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೆರು ರಕ್ಷಣಾ ಸಚಿವಾಲಯ, ಅಪುರಿಮ್ಯಾಕ್, ಎನೆ ಮತ್ತು ಮಂಟಾರೊ ನದಿಗಳಿಂದ ರೂಪುಗೊಂಡ ಕಣಿವೆಯ ಪ್ರದೇಶವೊಂದರಲ್ಲಿ ಗಸ್ತು ತಂಡವೊಂದನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿಸಿದೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ವಿಮಾನವನ್ನು ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಮಿಲಿಟರಿ ಸಿಬ್ಬಂದಿಯನ್ನು ಪತ್ತೆಹಚ್ಚಿವೆ. ವಿಮಾನದ ಪೈಲಟ್ ಮತ್ತು ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ ಎಂಜೊ ಎಸ್ಪಿನೋಜಾ ರೋಕ್ ಅವರನ್ನು ವಿಶೇಷ ವೈದ್ಯಕೀಯ ಚಿಕಿತ್ಸೆಗಾಗಿ ಲಿಮಾಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

Also Read
ಕೇಂದ್ರ ಸರ್ಕಾರಕ್ಕೆ ಆನೆಬಲ; ತೀವ್ರವಾಗಿ ವಿರೋಧಿಸಿದ್ದ ಡಿಲಿಮಿಟೇಷನ್ ಪ್ರಕ್ರಿಯೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ವಿಪಕ್ಷ ಡಿಎಂಕೆ | DMK
ಪೆರುವಿನಲ್ಲಿ ಸೇನಾ ಹೆಲಿಕಾಪ್ಟನ್ ಪತನ: ಎಂಟು ಮಂದಿ ದುರ್ಮರಣ, ಪೈಲಟ್​ಗೆ ಗಂಭೀರ ಗಾಯ | Helicopter crashes

ವಿಆರ್‌ಎಇಎಂ ಪೆರುವಿನ ಅತಿ ದೊಡ್ಡ ಕೋಕಾ ಬೆಳೆಯುವ ಕಣಿವೆಯಾಗಿದೆ. ಮಾದಕವಸ್ತು ಕಳ್ಳಸಾಗಣೆ ಮತ್ತು 'ಶೈನಿಂಗ್ ಪಾತ್' ಎಂಬ ಗೆರಿಲ್ಲಾ ಗುಂಪಿನ ಅವಶೇಷಗಳ ಉಪಸ್ಥಿತಿಯಿಂದಾಗಿ, ಈ ಪ್ರದೇಶವು ದಶಕಗಳಿಂದ ಮಿಲಿಟರಿ ನಿಯಂತ್ರಣದಲ್ಲಿದೆ.

ಅಯಾಕುಚೊ ಪ್ರದೇಶದ ಸನಾಬಂಬಾ ಎಂಬ ದೂರದ ಸಮುದಾಯವೊಂದರಲ್ಲಿ ಮೂವರು ಸೇನಾ ಸಿಬ್ಬಂದಿಯನ್ನು ರಕ್ಷಿಸಿದ ನಂತರ, ಗುರುವಾರ ರಾತ್ರಿ ಈ ವಿಮಾನವು ನಾಪತ್ತೆಯಾದ ಬಗ್ಗೆ ವರದಿಯಾಗಿತ್ತು. ಅವರಿಗೆ ಏಕೆ ರಕ್ಷಣೆಯ ಅಗತ್ಯವಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ, ಆದರೆ ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಇವರೂ ಸೇರಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).