ಟಿವಿಕೆ ಪಕ್ಷದ ಧ್ವಜ ವಿವಾದ; ದಳಪತಿ ವಿಜಯ್‌ಗೆ ಹೈಕೋರ್ಟ್ ನೋಟಿಸ್| tvk party

Elephant TVK Vijay
Published on

ಚೆನ್ನೈ; ಟಿವಿಕೆ ತನ್ನ ಪಕ್ಷದ ಧ್ವಜವನ್ನು ಬಳಸದಂತೆ ನಿರ್ಬಂಧಿಸಲು ನಿರಾಕರಿಸಿದ ಏಕ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ, ಚೆನ್ನೈ ಮೂಲದ ಟ್ರಸ್ಟ್ ಸಲ್ಲಿಸಿದ ಮೇಲ್ಮನವಿ ಮೇರೆಗೆ ಮದ್ರಾಸ್ ಹೈಕೋರ್ಟ್ ಇಂದು (ಸೆ.26) ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಆಗಿ ಹೊರಹೊಮ್ಮಿರುವ ವಿಜಯ್ ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ತಮಿಳು ವೆಟ್ರಿ ಕಳಗಂ ಎಂಬ ಪಕ್ಷವನ್ನು ಸ್ಥಾಪಿಸಿದರು. ಪಕ್ಷದ ಕಾರ್ಯಕ್ರಮಗಳು ಇದೀಗಷ್ಟೇ ಆರಂಭವಾಗಿವೆ. ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ರಾಜಕೀಯ ಪ್ರವಾಸದ ಸಂದರ್ಭದಲ್ಲಿ ವಿಜಯ್, ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವಿದೇಶ ಪ್ರವಾಸಗಳು, ಮೀನುಗಾರರು ಮತ್ತು ರೈತರ ಸಮಸ್ಯೆಗಳು ಮತ್ತು "ಕುಟುಂಬ ಪ್ರಾಬಲ್ಯ" ಎಂದು ಆರೋಪಿಸುವ ಮೂಲಕ ಅವರನ್ನು ಗುರಿಯಾಗಿಸಿಕೊಂಡಿದ್ದರು.

ಟಿವಿಕೆ ಪಕ್ಷದ ಧ್ವಜವು ನಮ್ಮ ಹಕ್ಕುಸ್ವಾಮ್ಯ ಉಲ್ಲಂಘಿಸಿದೆ ಎಂದು ಆರೋಪಿಸಿ ಚೆನ್ನೈನ ತೊಂಡೈ ಮಂಡಲ ಸಾಂದ್ರೋರ್ ಧರ್ಮ ಪರಿಬಲನ ಸಬೈ ಎನ್ನುವ ಟ್ರಸ್ಟ್‌, ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಎಂ. ಸುಧೀರ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆಯನ್ನು ಆರು ವಾರಗಳ ಮುಂದೂಡಿದೆ.

(ಏಜೆನ್ಸೀಸ್)

ಇನ್ನೂ ವಿಜಯ್ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ, ತಮಿಳುನಾಡು ರಾಜಕೀಯ ವಲಯದಲ್ಲಿ ಪ್ರಾಥಮಿಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಎಂದಿದ್ದಾರೆ. ನಮ್ಮ ಪಕ್ಷದ ಸೈದ್ಧಾಂತಿಕ ತತ್ವಗಳಿಗೆ ಯಾವುದೇ ಧಕ್ಕೆಯಾಗದಂತೆ, 1967 ಮತ್ತು 1977 ರ ನಮ್ಮ ರಾಜ್ಯದ ಚುನಾವಣೆಗಳಂತೆ ಮುಂಬರುವ 2026 ರ ತಮಿಳುನಾಡಿನ ವಿಧಾನಸಭಾ ಚುನಾವಣೆಗಳಲ್ಲಿ ಇತಿಹಾಸವನ್ನು ಸೃಷ್ಟಿಸುವ ದೃಢಯನ್ನು ಹೊಂದಿದೆ ಎಂದು ವಿಜಯ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net