ಆಸ್ಪತ್ರೆಯಲ್ಲಿ ರೌಂಡ್ಸ್​ ಸಮಯದಲ್ಲಿ ಹಾರ್ಟ್​ ಸರ್ಜನ್​ಗೆ ಹೃದಯಾಘಾತ; ಸಾವು| Heart Attack

FotoJet (18) (1)
Published on

Heart Attack: ಹದಿ ಹರೆಯದ ವಯಸ್ಸಿನವರಿಗೆ ಹೃದಯಾಘಾತದಿಂದ ಘಟನೆಗಳು ಹೆಚ್ಚುತ್ತಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಹಾರ್ಟ್​ ಸರ್ಜನ್​ವೊಬ್ಬರು ಆಸ್ಪತ್ರೆಯಲ್ಲಿ ರೋಗಿಗಳ ವಾರ್ಡ್​ ರೌಂಡ್ಸ್ ಸಮಯದಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಶನಿವಾರ(ಆಗಸ್ಟ್​ 30) ವರದಿಯಾಗಿದೆ.

ಡಾ. ಗ್ರಾಡ್ಲಿನ್ ರಾಯ್(39) ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರಚಿಕಿತ್ಸಕ ಆಗಸ್ಟ್ 27ರಂದು ರೌಂಡ್ಸ್​ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟವರು. ಪತ್ನಿ ಮತ್ತು ಓರ್ವ ಚಕ್ಕಮಗುವನ್ನು ಹಗಲಿದ್ದಾರೆ.  ಅವರ ಅಕಾಲಿಕ ಮರಣವು ವೈದ್ಯಕೀಯ ಸಮುದಾಯಕ್ಕೆ ಆಘಾತವನ್ನುಂಟುಮಾಡಿದೆ.

ರೌಂಡ್ಸ್ ಸಮಯದಲ್ಲಿ ವಾರ್ಡ್​ನಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಯೆ ಇತರೆ ಸಿಬ್ಬಂದಿ ಸಿಪಿಆರ್, ತುರ್ತು ಆಂಜಿಯೋಪ್ಲಾಸ್ಟಿಯೊಂದಿಗೆ ಸ್ಟೆಂಟಿಂಗ್, ಇಂಟ್ರಾ-ಏಯಾರ್ಟಿಕ್ ಬಲೂನ್ ಪಂಪ್ ಮತ್ತು ಇಸಿಎಂಒ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಹೈದರಾಬಾದ್​ನ ನ್ಯೂರಲಾಜಿಸ್ಟ್ ಡಾ.ಸುಧೀರ್ ಕುಮಾರ್ ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ನೀಡಿದ್ದು, ವೈದ್ಯರು ಎದುರಿಸುವ ತೀವ್ರ ಒತ್ತಡ ಮತ್ತು ದೀರ್ಘ ಕೆಲಸದ ಸಮಯವು ಇಂತಹ ಘಟನೆಗಳಿಗೆ ಕಾರಣವಾಗಬಹುದು. ಈ ಘಟನೆಯು ಭಾರತದ ಯುವ ವೈದ್ಯಕೀಯ ವೃತ್ತಿಪರರ ಆರೋಗ್ಯ ಮತ್ತು ಕೆಲಸ-ಜೀವನ ಸಮತೋಲನದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ತಜ್ಞರು ವೈದ್ಯರು ಇಂತಹ ದುರಂತಗಳನ್ನು ತಡೆಗಟ್ಟಲು ಸ್ವಯಂ ಆರೈಕೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net