ಸೌತ್​ ಬ್ಯೂಟಿ ಜೊತೆಗೆ ಹೆಜ್ಜೆ ಹಾಕಬೇಕಿದ್ದು 'ಪುಷ್ಟ' ನಟ; ಆದ್ರೆ, ಆಗಿದ್ದೇ ಬೇರೆ! ಟ್ರೆಂಡಿಂಗ್​ನಲ್ಲಿ 'ಕೂಲಿ' ​ಮೋನಿಕಾ | Coolie

ವಿಜಯವಾಣಿ (17)
Published on

Coolie: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಕೂಲಿ' ಚಿತ್ರದ ಬಗ್ಗೆ ಸಿನಿಪ್ರಿಯರು ಹಾಗೂ ಚಿತ್ರಪ್ರೇಮಿಗಳಲ್ಲಿ ಕಾತರ ಹೆಚ್ಚಿದೆ. ಇದನ್ನು ದುಪ್ಪಟ್ಟಾಗಿಸಿದ್ದು, ಇತ್ತೀಚಿಗೆ ತೆರೆಕಂಡ ವೈರಲ್ ಮೋನಿಕಾ ಹಾಡು. ಈ ಹಾಡಿನಲ್ಲಿ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ಪೂರ ಸಾಂಗ್​ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಪ್ರಸ್ತುತ ಮೋನಿಕಾ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಈ ಮಧ್ಯೆ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಇತ್ತೀಚೆಗೆ ಯೂಟ್ಯೂಬ್​ನಲ್ಲಿ 'ಮೋನಿಕಾ' ಹಾಡು ಚಿತ್ರಕ್ಕೆ ಸಖತ್​ ಹೈಪ್ ತಂದುಕೊಟ್ಟಿದ್ದು, ಪೂಜಾ ಹೆಗ್ಡೆ ಮೇಲೆಯೇ ಎಲ್ಲರ ಕಣ್ಣು ಬಿದ್ದಿದೆ. ಕೆಂಪು ಬಣ್ಣದ ಉಡುಗೆಯಲ್ಲಿ ಮಿರ ಮಿರ ಮಿಂಚಿರುವ ಪೂಜಾ, ಮೈಚಳಿ ಬಿಟ್ಟು ಕುಣಿದಿರುವುದು ಹಾಡಿನ ವೀಕ್ಷಣೆಯನ್ನು ನಿರೀಕ್ಷೆಗಿಂತ ಹೆಚ್ಚಿಸಿದೆ. ಒಂದೆಡೆ, ಮೋನಿಕಾ ಸಾಂಗ್ ಜಾಲತಾಣಗಳಲ್ಲಿ ವೈರಲ್ ಆಗಿ ಟ್ರೆಂಡಿಂಗ್​ ಪಟ್ಟಿಗೆ ಸೇರಿದ್ದರೆ, ಮತ್ತೊಂದೆಡೆ ನಟಿಯ ಜೊತೆಗೆ ಮಲಯಾಳಂ ನಟ, ಫಹಾದ್ ಫಾಸಿಲ್​ ಕಾಣಿಸಿಕೊಳ್ಳಬೇಕಿತ್ತು. ಆದರೆ, ಅದು ಅಂದುಕೊಂಡಂತೆ ನಡೆದಿಲ್ಲ.

ಈ ಹಾಡಿನಲ್ಲಿ, ಪೂಜಾ ಜೊತೆಗೆ ಹೆಜ್ಜೆ ಹಾಕಿರುವ ಮಲಯಾಳಂ ನಟ ಸೌಬಿನ್ ಶಾಹಿರ್ ಬದಲಿಗೆ ಪುಷ್ಪ ಚಿತ್ರದ ವಿಲನ್​ ಪಾತ್ರಧಾರಿ ಫಹಾದ್ ಫಾಜಿಲ್ ಇರಬೇಕಿತ್ತು. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್​ ಅವರೇ ಬಹಿರಂಗಪಡಿಸಿದ್ದಾರೆ. ಫಹಾದ್​ರನ್ನು ಗಮನದಲ್ಲಿಟ್ಟುಕೊಂಡೇ ಈ ಪಾತ್ರವನ್ನು ಬರೆದಿದ್ದೇ. ಆದ್ರೆ, ಅವರು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಮೊದಲಿಗೆ ನಾನು ಫಹದ್​ರನ್ನು ಸಂಪರ್ಕಿಸಿದೆ. ಆಗ ಅವರು ತಮ್ಮ ಇತರ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದರು. ಇದೆಲ್ಲದರ ನಡುವೆ ನಮ್ಮ ಕೂಲಿ ಚಿತ್ರದ ಹಾಡಿನ ಭಾಗವಾಗಲು ಅವರು ಹಿಂದೇಟು ಹಾಕಿದರು. ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ಕಟುವಾಗಿ ತಿರಸ್ಕರಿಸಲಿಲ್ಲ. ನಮ್ಮ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದರು. ಹೀಗಾಗಿಯೇ, ಅವರ ಜಾಗಕ್ಕೆ ಸೌಬಿನ್​ರನ್ನು ಆಯ್ಕೆ ಮಾಡಿಕೊಂಡೆವು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಶ್ರುತಿ ಹಾಸನ್ ಮತ್ತು ಕನ್ನಡದ ನಟ ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ ಹೀರೋ ಆಮಿರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಸಿನಿಮಾ ಇದೇ ಆಗಸ್ಟ್ 14ರಂದು ತೆರೆ ಕಾಣಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net