

Chaithany Baghel: ಛತ್ತೀಸ್ಗಡದ ಮಾಜಿ ಸಿಎಂ ಭೂಪೇಲ್ ಬಘೇಲ್ ಅವರ ಪುತ್ರ ಚೈತನ್ ಬಘೇಲ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಛತ್ತೀಸ್ಗಡ ಅಬಕಾರಿ ಹಗರಣಕ್ಕೆ ಸಂಬಂಧಪಟ್ಟಂತೆ ಶುಕ್ರವಾರ (ಜು. 18) ಬೆಳಗ್ಗೆ ಚೈತನ್ಯ ಬಘೇಲ್ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಬಕಾರಿ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಚೈತನ್ಯ ಬಘೇಲ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಹಗರಣಕ್ಕೆ ಸಂಬಂಧಪಟ್ಟಂತೆ ಹೊಸ ಸಾಕ್ಷ್ಯ ಕಲೆ ಹಾಕಿ ಇಂದು 2ನೇ ಬಾರಿ ಚೈತನ್ಯ ಬಘೇಲ್ರ ನಿವಾಸ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾರ್ಚ್ ತಿಂಗಳಲ್ಲೂ ಚೈತನ್ಯಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು.
ಛತ್ತೀಸ್ಗಡ ಅಬಕಾರಿ ಹಗರಣ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದ್ದು, ಸಿಂಡಿಕೇಟ್ ಸದಸ್ಯರಿಗೆ 2,100 ಕೋಟಿ ರೂ. ಲಾಭವಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಚೈತನ್ಯ ಬಘೇಲ್ ಹಣ ಪಡೆದಿರುವ ಬಗ್ಗೆ ಶಂಕೆಯಿದೆ ಇಡಿ ತಿಳಿಸಿದೆ,(ಏಜೆನ್ಸೀಸ್).