ಫೇಸ್‌ಬುಕ್ ಕಾಮೆಂಟ್‌ ವಿವಾದ; ಶ್ರೀಲಂಕಾ ಕಾರ್ಮಿಕನಿಗೆ ಸೌದಿಯಲ್ಲಿ ಮರಣದಂಡನೆ | Saudi Arabia Facebook case

ಫೇಸ್‌ಬುಕ್ ಕಾಮೆಂಟ್ ಪ್ರಕರಣದಲ್ಲಿ ಶ್ರೀಲಂಕಾದ 24 ವರ್ಷದ ಕಾರ್ಮಿಕನಿಗೆ ಸೌದಿ ಅರೇಬಿಯಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ವರದಿಯಾಗಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
Saudi Arabia Facebook case
ಫೇಸ್‌ಬುಕ್ ಕಾಮೆಂಟ್‌ಗೆ ಮರಣದಂಡನೆ?
Published on: 
Summary

ಶ್ರೀಲಂಕಾದ ಕಾರ್ಮಿಕನಿಗೆ ಸೌದಿಯಲ್ಲಿ ಮರಣದಂಡನೆ

ಫೇಸ್‌ಬುಕ್ ಕಾಮೆಂಟ್ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ

ಆರಂಭದಲ್ಲಿ 5 ವರ್ಷ ಜೈಲು, 30 ಲಕ್ಷ ಸೌದಿ ರಿಯಾಲ್ ದಂಡ

Saudi Arabia death sentence: ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಲಂಕಾ ತಮಿಳು ಕಾರ್ಮಿಕನಿಗೆ ಫೇಸ್‌ಬುಕ್ ಕಾಮೆಂಟ್ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಆರೋಪದಲ್ಲಿ ಮೊದಲು 5 ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು.

ಶ್ರೀಲಂಕಾದ ಧಾರ್ಮಿಕ ವಿಚಾರವೊಂದರ ಬಗ್ಗೆ ನಡೆದ ಸಾಮಾಜಿಕ ಜಾಲತಾಣದ ಚರ್ಚೆಯಲ್ಲಿ ಅನೋಜನ್ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದರು ಎನ್ನಲಾಗಿದೆ. ಅದನ್ನು ಸೌದಿ ಅಧಿಕಾರಿಗಳು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸುವಂತದ್ದು ಎಂದು ಪರಿಗಣಿಸಿದ್ದಾರೆ. ಬಳಿಕ ಅನೋಜನ್ ಪೋಸ್ಟ್ ಡಿಲೀಟ್​ ಮಾಡಿ ಕ್ಷಮೆ ಕೇಳಿದ್ದರು ಎಂದು ವರದಿಯಾಗಿದೆ.

ಮೊದಲು 5 ವರ್ಷ ಜೈಲು ಶಿಕ್ಷೆ

ಅಲ್-ಅಹ್ಸಾ ಕೋರ್ಟ್ ಅನೋಜನ್‌ಗೆ ಮೊದಲು 5 ವರ್ಷ ಜೈಲು ಹಾಗೂ 30 ಲಕ್ಷ ಸೌದಿ ರಿಯಾಲ್ ದಂಡ ವಿಧಿಸಿತ್ತು. ಬಳಿಕ ಸೌದಿ ಪ್ರಾಸಿಕ್ಯೂಷನ್ ಹೆಚ್ಚಿನ ಶಿಕ್ಷೆ ಕೋರಿ ಮೇಲ್ಮನವಿ ಸಲ್ಲಿಸಿದ್ದು, ಸೆಪ್ಟೆಂಬರ್ 17ರಂದು ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸಲಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ವಿಜಯಿತ ಹೆರತ್ ತಿಳಿಸಿದ್ದಾರೆ.

ಶ್ರೀಲಂಕಾ ಸರ್ಕಾರದ ರಾಜತಾಂತ್ರಿಕ ಪ್ರಯತ್ನ

ಪ್ರಕರಣದ ಬಗ್ಗೆ ಶ್ರೀಲಂಕಾ ವಿದೇಶಾಂಗ ಸಚಿವಾಲಯ ಗಮನ ಹರಿಸಿದ್ದು, ರಿಯಾದ್‌ನಲ್ಲಿರುವ ರಾಯಭಾರ ಕಚೇರಿ ಮೂಲಕ ಸೌದಿ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದೆ. ಅನೋಜನ್‌ಗೆ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಬಸ್, ರೈಲು, ವಿಮಾನದಲ್ಲಿ ವಿಂಡೋ ಸೀಟ್‌ಗೇ ಯಾಕೆ ಡಿಮ್ಯಾಂಡ್? ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ! | Window Seat

ಸೆಪ್ಟೆಂಬರ್ 20ರಂದು ಸೌದಿ ನ್ಯಾಯಾಲಯದ ಲಿಖಿತ ತೀರ್ಪು ಶ್ರೀಲಂಕಾ ಸರ್ಕಾರಕ್ಕೆ ಸಿಕ್ಕಿದೆ. ಇದರ ಆಧಾರದ ಮೇಲೆ ಮುಂದಿನ ಕಾನೂನು ಮತ್ತು ರಾಜತಾಂತ್ರಿಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net