ಸುಲಭವಾಗಿ ತಯಾರಿಸಿ ತಾಜಾ ಹಣ್ಣಿನ ಕಸ್ಟರ್ಡ್​ ರೆಸಿಪಿ..|Recipe

untitled-design-2025-09-08t145831565-68bea1c3f1567
Published on

Recipe: ಇಂದಿನ ದಿನಗಳಲ್ಲಿ ತಾಜಾ ಹಣ್ಣುಗಳನ್ನು ಬಹಳಷ್ಟು ಜನ ಸೇವಿಸಲು ಬಯಸುತ್ತಾರೆ. ಅದೇ ರೀತಿ ಹಣ್ಣುಗಳನ್ನು ಕಸ್ಟರ್ಡ್​ ರೂಪದಲ್ಲಿ ತಯಾರಿಸಿ ತಿನ್ನುವುದರಿಂದ ರುಚಿಯೂ ಹೆಚ್ಚಾಗುತ್ತದೆ. ಈ ರೆಸಿಪಿ ನಿಮ್ಮ ಮನೆಯಲ್ಲಿರುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುತ್ತದೆ. ಹಾಗಾಗಿ ಕಸ್ಟರ್ಡ್​ ರೆಸಿಪಿಯನ್ನು ಒಂದು ಬಾರಿ ಮನೆಯಲ್ಲಿ ತಯಾರಿಸಿ....

ಬೇಕಾಗುವ ಪದಾರ್ಥಗಳು

* 3 ಚಮಚ ಕಸ್ಟರ್ಡ್​ ಪೌಡರ್​

* 1/2 ಲೀಟರ್​ ಹಾಲು

* 1/2 ಕಪ್​ ಸಕ್ಕರೆ

* 4 ಚಮಚ ಹಸಿರು ದ್ರಾಕ್ಷಿ

* 4 ಚಮಚ ಕೆಂಪು ದ್ರಾಕ್ಷಿ

* 4 ಚಮಚ ಕಪ್ಪು ದ್ರಾಕ್ಷಿ

* 3 ಚಮಚ ದಾಳಿಂಬೆ ಹಣ್ಣು

* 1 ಬಾಳೆ ಹಣ್ಣು

* ಸ್ವಲ್ಪ ಮಾವಿನ ಹಣ್ಣು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ಕಸ್ಟರ್ಡ್​ ಪೌಡರ್​ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕಲಸಿ ಪಕ್ಕಕ್ಕಿಟ್ಟುಕೊಳ್ಳಿ. ನಂತರ ಒಂದು ಕಡಾಯಿಗೆ 1/2 ಲೀಟರ್​ ಹಾಲು ಹಾಕಿ ಕುದಿಸಿರಿ. ಅದಕ್ಕೆ ಸಕ್ಕರೆ ಸೇರಿಸಿ. ನಂತರ ರೆಡಿ ಮಾಡಿಕೊಂಡಿರುವ ಕಸ್ಟರ್ಡ್​ ಮಿಲ್ಕನ್ನು ಸೇರಿಸಿ. 4 ನಿಮಿಷ ಚೆನ್ನಾಗಿ ಬಿಸಿ ಮಾಡಿ ತಣ್ಣಗಾಗಲು ಬಿಡಿ. ಈ ಅದಕ್ಕೆ ಹಸಿರು ದ್ರಾಕ್ಷಿ, ಕೆಂಪು ದ್ರಾಕ್ಷಿ, ಕಪ್ಪು ದ್ರಾಕ್ಷಿ, ಸೇಬು, ದಾಳಿಂಬೆ ಹಣ್ಣು, ಬಾಳೆ ಹಣ್ಣು, ಮಾವಿನ ಹಣ್ಣು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ 2 ಗಂಟೆ ಫ್ರಿಜ್​ನಲ್ಲಿಡಿ ನಂತರ ಸೇವಿಸಿ...(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net