SEBI ಮಾಜಿ ಅಧ್ಯಕ್ಷೆ ಮಾಧಬಿ ಸೇರಿ ಐವರ ವಿರುದ್ಧ FIR ದಾಖಲಿಸಲು ತಡೆ ನೀಡಿದ ಬಾಂಬೆ ಹೈಕೋರ್ಟ್​; ಏನಿದು ಪ್ರಕರಣ?

dk - 2025-03-04T143929.547
Published on

SEBI ಮಾಜಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಸೇರಿ ಇತರೆ 5 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶಿಸಿದ ಎಸಿಬಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ಮೂಲಕ ಬಾಂಬೆ ಹೈಕೋರ್ಟ್ ಅವರಿಗೆ ಪರಿಹಾರ ನೀಡಿದೆ ಎಂದು ಮಂಗಳವಾರ ವರದಿಯಾಗಿದೆ.

ವಿಶೇಷ ನ್ಯಾಯಾಲಯವು ಸೆಬಿಯೊಂದಿಗೆ ಸಮಾಲೋಚಿಸದೆ, ಯಾವುದೇ ಸೂಚನೆ ನೀಡದೆ ಅಥವಾ ದಾಖಲೆಗಾಗಿ ವಾಸ್ತವಾಂಶಗಳ ಕುರಿತು ತನ್ನ ನಿಲುವನ್ನು ಮಂಡಿಸಲು ಅವಕಾಶ ನೀಡದೆ ಪ್ರಕರಣದ ಅರ್ಜಿಯನ್ನು ಅನುಮತಿಸಿದೆ ಹೀಗಾಗಿ, ನಾಲ್ಕು ವಾರಗಳವರೆಗೆ ಎಫ್​ಐಆರ್​ಗೆ ತಡೆ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ವಾದ ಮಂಡಿಸಿದರು.

ಅರ್ಜಿವಿಚಾರಣೆ ನಡೆಸಿದ ಕೋರ್ಟ್​ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, ಎಫ್​ಐಆರ್​​ಗೆ 4 ವಾರಗಳ ನೀಡಿ ಆದೇಶಿಸಿದೆ.

ಷೇರು ಮಾರುಕಟ್ಟೆ ವಂಚನೆ ಮತ್ತು ನಿಯಂತ್ರಕ ಉಲ್ಲಂಘನೆ ಆರೋಪದ ಮೇಲೆ ಮಾಜಿ ಸೆಬಿ(SEBI) ಅಧ್ಯಕ್ಷೆ ಮಾಧಭಿ ಪುರಿ ಬುಚ್ ಸೇರಿದಂತೆ ಇತರ 5 ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಈ ಹಿಂದೆ ನಿರ್ದೇಶನ ನೀಡಿತ್ತು.

''ಈ ಪ್ರಕರಣದಲ್ಲಿ ಆರೋಪಗಳು ಮೇಲ್ನೋಟಕ್ಕೆ ಅಪರಾಧ ಎಸಗಿದ್ದಾರೆ ಎಂದು ಕಾಣಿಸುತ್ತಿದ್ದು, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ" ಎಂದು ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಅವರಿದ್ದ ಏಕಸದಸ್ಯ ಪೀಠ ಶನಿವಾರ ನೀಡಿದ ಆದೇಶದಲ್ಲಿ ತಿಳಿಸಿತ್ತು.

ಏನಿದು ಪ್ರಕರಣ

1992ರ SEBI ಕಾಯ್ದೆ ಮತ್ತು ಅದರ ಅಡಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸದೆ, ನಿಯಂತ್ರಕ ಅಧಿಕಾರಿಗಳ, ವಿಶೇಷವಾಗಿ SEBIಯ ಸಕ್ರಿಯ ಒಪ್ಪಿಗೆಯೊಂದಿಗೆ ಸ್ಪಾಕ್ ಎಕ್ಸ್‌ಚೆಂಚ್‌ನಲ್ಲಿ ಕಂಪನಿಯೊಂದನ್ನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net