

ಬೆಂಗಳೂರು: ಬಸ್ ಚಾಲನೆ ಮಾಡುತ್ತಿರುವಾಗಲೇ ಮಾರ್ಗಮಧ್ಯೆ ಬಿಎಂಟಿಸಿ (BMTC)ಬಸ್ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡ ಪರಿಣಾಮ ಬಸ್ ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೋಮವಾರ (ಅ.13) ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಚಾಲಕನಿಗೆ ಇದ್ದಕ್ಕಿಂದತೆ ಮೂರ್ಛೆರೋಗ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಬಸ್ ಚಲಿಸುತ್ತಲೇ ಇದ್ದುದರಿಂದ ಅದನ್ನು ನಿಯಂತ್ರಿಸಲು ಕಂಡಕ್ಟರ್ ಹೆಣಗಾಡಿ ಕೊನೆಯದಾಗಿ ಆಕ್ಸಿಲರೇಟರ್ ಬಟನ್ ಒತ್ತಿ ಗಾಡಿಯನ್ನು ನಿಲ್ಲಿಸಿದ್ದಾನೆ. ಈ ವೇಳೆಗಾಗಲೇ ಬಸ್ ನಿಯಂತ್ರಣ ತಪ್ಪಿ 9 ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಬಂದಿದೆ.
ಇದನ್ನೂ ಓದಿ:ರಸ್ತೆಯಲ್ಲಿ ಭಯಾನಕ ಸ್ಟಂಟ್! ವಿಡಿಯೋ ವೈರಲ್ ಬೆನ್ನಲ್ಲೇ ಚಾಲಕನಿಗೆ ತಕ್ಕ ಪಾಠ ಕಲಿಸಿದ ಖಾಕಿ | Viral Video ಅಪಘಾತದ ಸಮಯದಲ್ಲಿ ಬಸ್ನಲ್ಲಿ ಸುಮಾರು 15 ಪ್ರಯಾಣಿಕರಿದ್ದರು ಅವರಲ್ಲಿ ಯಾರಿಗೂ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಎದುರು ಬರುತ್ತಿದ್ದ 3 ಆಟೋ ರಿಕ್ಷಾ, ಹಲವಾರು ದ್ವಿಚಕ್ರ ವಾಹನಗಳಿಗೆ ಗುದ್ದಿದ್ದು, ಆಟೋ ಹಾಗೂ ಅದರಲ್ಲಿದ್ದ ಒಬ್ಬ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂದು ವರದಿ ಬಂದಿದೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ಬಿಎಂಟಿಸಿ ಅಧಿಕಾರಿಗಳು ಚಾಲಕನ ಹಠಾತ್ ಆರೋಗ್ಯ ಸ್ಥಿತಿಯೇ ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ಇನ್ನು ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
(ಏಜೆನ್ಸೀಸ್)