

ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದಾಖಲೆಯನ್ನು ನಿರ್ಮಿಸಿದ '2018' ಚಿತ್ರದ ನಿರ್ದೇಶಕ ಆಂಥನಿ ಜೋಸೆಫ್ ಅವರಿಗೆ ಲೈಕಾ ಪ್ರೊಡಕ್ಷನ್ಸ್ ವತಿಯಿಂದ ದೊಡ್ಡ ಆಫರ್ ಒಂದು ಅರಸಿ ಬಂದಿದೆ.
ಮೇ 2023 ರಲ್ಲಿ ಬಿಡುಗಡೆಯಾದ ಮಲಯಾಳಂ ಚಲನಚಿತ್ರ ‘2018’ ಮಾಲಿವುಡ್ ಅಂಗಳದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2018 ಫಿಲಂ ಮಲಯಾಳಂ ಚಿತ್ರರಂಗಕ್ಕೆ ಒಂದು ಮೈಲಿಗಲ್ಲನ್ನು ತಂದುಕೊಟ್ಟಿದ್ದು, ಈ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಜೂಡ್ ಆಂಥನಿ ಜೋಸೆಫ್ ಅವರಿಗೆ ಅನೇಕ ಆಫರ್‌ಗಳು ಹರಿದುಬಂದಿವೆ.
ಆಫರ್ಗಳನ್ನು ಪರಿಶೀಲಿಸಿ ಆಯ್ದುಕೊಳ್ಳುವಲ್ಲಿ ಆಂಥನಿ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ಪೈಕಿ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡುವಲ್ಲಿ ಅಗ್ರಸ್ಥಾನ ಗಳಿಸಿರುವ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಇದೀಗ 2018 ನಿರ್ದೇಶಕರನ್ನು ಸಂಪರ್ಕಿಸಿದೆ. ತಮ್ಮ ಬ್ಯಾನರ್ನಲ್ಲಿ ಮುಂದಿನ ಚಿತ್ರವನ್ನು ನಿರ್ದೇಶಿಸಲು ಆಂಥನಿ ಅವರಿಗೆ ಮನವಿ ಮಾಡಿದೆ.
ಈ ಚಿತ್ರಕ್ಕಾಗಿ ನಿರ್ದೇಶಕ ಆಂಥನಿಗೆ ಲೈಕಾ ಪ್ರೊಡಕ್ಷನ್ಸ್ ಭಾರಿ ಕೊಡುಗೆಯನ್ನು ನೀಡಿದೆ. ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಡುವ ನಿಟ್ಟಿನಲ್ಲಿ ಲೈಕಾ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ 30 ಸೆಕೆಂಡ್ ಇರುವ ವೀಡಿಯೋ ತುಣುಕನ್ನು ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದೆ. ಮೂಲಗಳ ಪ್ರಕಾರ, ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ನಿವಿನ್ ಪೌಲಿ ಮತ್ತು ವಿಜಯ್ ಸೇತುಪತಿ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).