More

    ಮೊದಲ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್​ ಮಹಿಳಾ ಕ್ರಿಕೆಟ್​​ನ ಸಲಿಂಗಿ ದಂಪತಿ

    ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ್ತಿಯರು ಹಾಗೂ ಸಲಿಂಗಿ ದಂಪತಿಯಾಗಿರುವ ಆ್ಯಮಿ ಸ್ಯಾಟರ್ತ್​ವೈಟ್​ ಮತ್ತು ಲಿಯಾ ತಹುಹು ಮೊದಲ ಮಗುವಿಗೆ ಜನ್ಮ ನೀಡಿರುವ ಮಾಹಿತಿಯನ್ನು ಗುರುವಾರ ಬೆಳಗ್ಗೆ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್​ ಮಾಡಿರುವ ಲಿಯಾ ತಹುಹು, ನಾನು ಮತ್ತು ಆ್ಯಮಿ ಜನವರಿ 13ರಂದು ಗ್ರೇಸ್​ ಮರಿಯಾ ಸ್ಯಾಟರ್ತ್​ವೈಟ್ ಅನ್ನು ಬರಮಾಡಿಕೊಂಡಿದ್ದೇವೆ. ನಾವು ಕೃತಜ್ಞರಾಗಿದ್ದು, ಇದಕ್ಕಿಂತ ಸಂತೋಷ ಬೇರೆ ಏನಿದೆ ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ ಆ್ಯಮಿ ಮತ್ತು ಲಿಯಾ 2014ರಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂರು. ಬಳಿಕ 2017ರಲ್ಲಿ ವಿವಾಹವಾದರು. 2013ರಿಂದ ಸಲಿಂಗಿ ವಿವಾಹವನ್ನು ನ್ಯೂಜಿಲೆಂಡ್​ ಕಾನೂನುಬದ್ಧಗೊಳಿಸಿದೆ. 2010ರಿಂದಲೂ ಒಟ್ಟಿಗೆ ಇರುವ ಆ್ಯಮಿ ಮತ್ತು ಲಿಯಾ ತಮ್ಮ ಸಂಬಂಧವನ್ನು ಹೊರಜಗತ್ತಿಗೆ ತಿಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

    ಮಹಿಳಾ ಕ್ರಿಕೆಟ್​ನಲ್ಲಿ ಆ್ಯಮಿ ಮತ್ತು ಲಿಯಾ ಮೊದಲ ಸಲಿಂಗಿ ದಂಪತಿ ಎನಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರೇ ಅಲ್ಲ. ಕಳೆದ ವರ್ಷ ನ್ಯೂಜಿಲೆಂಡ್​ ಮತ್ತು ಪರ್ತ್​ಸ್ಕೋರ್ಚರ್ಸ್​ ಆಲ್​ರೌಂಡರ್​ ಹೆಲೇ ಜೆನ್​ಸೆನ್​ ಅವರು ಬಹುಕಾಲದ ಗೆಳತಿ ನಿಕೋಲಾ ಹ್ಯಾಂಕಾಕ್​ರೊಂದಿಗೆ ವಿವಾಹವಾದರು. 2018ರ ಜುಲೈನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಡೇನ್​ ವ್ಯಾನ್​ ನೈಕರ್ಕ್​ ತಂಡದ ಸಹ ಆಟಗಾರ್ತಿ ಮರಿಯನ್ನೆ ಕಪ್ಪ್​ರೊಂದಿಗೆ ಮದುವೆಯಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts