More

    ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ: ಕುಡಿದ ಅಮಲಲ್ಲಿ ತೇಲಾಡಿದ ಕೆಲ ಯುವಕ-ಯುವತಿಯರು

    ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಅದ್ದೂರಿಯಲ್ಲಿ 2023ನ್ನು ಸ್ವಾಗತಿಸಲಾಯಿತು. ಹಾಡು, ಕುಣಿತ, ಮೋಜು-ಮಸ್ತಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವ ಮೂಲಕ ಹಲವರು 2022ಕ್ಕೆ ಬೈ ಬೈ ಹೇಳಿ 2023ಕ್ಕೆ ಹಾಯ್​ ಹಾಯ್​ ಅಂದರು. ಕೆಲ ಯುವಕ-ಯುವತಿಯರು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತಾ ತೇಲಾಡಿದರು. ಕೆಲ ಗಲಾಟೆ ಗದ್ದಲಗಳಿಗೂ ಈ ಬಾರಿಯ ಹೊಸ ವರ್ಷ ಸಾಕ್ಷಿಯಾಯಿತು.

    ಎಂ.ಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಯುವ ಸಮೂಹ ಸೇರಿತ್ತು. ಪಾಶ್ಚಾತ್ಯ ಸಂಗೀತ, ಕಲರ್​ಫುಲ್​​ ಲೈಟಿಂಗ್ಸ್​, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ “ಹ್ಯಾಪಿ ನ್ಯೂ ಇಯರ್​’ ಎಂದು ಜೋರಾಗಿ ಕೂಗುತ್ತಾ, ತಮ್ಮ ಆಪ್ತರನ್ನು ತಬ್ಬಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಭ್ರಮಾಚರಣೆಗೆ ರಾತ್ರಿ 1 ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಎಲ್ಲೆಡೆ ಪೊಲೀಸ್​ ಕಣ್ಗಾವಲಿತ್ತು.

    ಚರ್ಚ್ ಸ್ಟ್ರೀಟ್​ನಲ್ಲಿ ಕೆಲ ಕಾಲ ಹೈಡ್ರಾಮ ನಡೆಯಿತು. ಕಂಠಪೂರ್ತಿ ಕುಡಿದು ರಸ್ತೆಯಲ್ಲೇ ಕೆಲ ಯುವಕ‌ ಯುವತಿಯರು ತೇಲಾಡುತ್ತಿದ್ದರು. ಅವರೆಲ್ಲರನ್ನೂ ಮನೆಗೆ ಕಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸಂಭ್ರಮಾಚರಣೆಯ ಅವಧಿ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರಿಗೂ ಮನೆಗೆ ಹೋಗುವಂತೆ ಮೈಕ್​ನಲ್ಲಿ ಮೂಲಕ ಪೊಲೀಸರು ಅನೌನ್ಸ್ ಮಾಡುತ್ತಾ ಸೂಚನೆ ಕೊಡುತ್ತ ಜನರ ಗುಂಪನ್ನ ಚದುರಿಸಿದರು. ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ಟ್ರಾಫಿಕ್​ ಜಾಮ್ ಉಂಟಾಗಿತ್ತು. ಪಾರ್ಟಿ ವೇಳೆ ಅಸ್ವಸ್ಥರಾಗಿದ್ದ ಕೆಲ ಯುವತಿಯರನ್ನ ಲೇಡಿಸ್ ಸೇಫ್ಟಿ ಕ್ಯಾಂಪ್​ಗೆ ಪೊಲೀಸ್​ ಸಿಬ್ಬಂದಿ ಕರೆದೊಯ್ದರು. ಕೆಲವೆಡೆ ಯುವಕರು ಕುಡಿದು ರಸ್ತೆಬದಿಯಲ್ಲೇ ಬಿದ್ದಿದ್ದರು. ಜನರನ್ನ ಚದುರಿಸಲು ಪೊಲೀಸರು ಲಾಠಿಯನ್ನೂ ಎತ್ತಬೇಕಾಯಿತು.

    ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆ, ಚರ್ಚ್​ ಸ್ಟ್ರೀಟ್​ ಹಾಗೂ ಕೋರಮಂಗಲ, ಇಂದಿರಾನಗರ, ವೈಟ್​ಫೀಲ್ಡ್​ ಪ್ರದೇಶಗಳಲ್ಲಿನ ಬಾರ್​, ಪಬ್​, ಡಿಸ್ಕೊಥೆಕ್​ ರೆಸ್ಟೋರೆಂಟ್​ಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಪಬ್​ಗಳಲ್ಲಿ ಮಹಿಳಾ ಬಾಡಿಗಾರ್ಡ್​ ಮತ್ತು ಪುರುಷ ಬಾಡಿರ್ಗಾರ್ಡ್​ಗಳನ್ನು ನಿಯೋಜಿಸಲಾಗಿತ್ತು. ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಸೇರಿಸಬಾರದು ಎಂದು ಪೊಲೀಸರು ಕಟ್ಟು ನಿಟ್ಟಾಗಿ ಸೂಚಿಸಿದ್ದರು. ಕೆಲವರು ಅದನ್ನು ಉಲ್ಲಂಘಿಸಿ ಹೆಚ್ಚಿನ ಜನರನ್ನು ಸೇರಿಕೊಂಡಿರುವುದು ಕಂಡು ಬಂತು.

    ಸಿಸಿ ಕ್ಯಾಮರಾ, ಡ್ರೋನ್​ ಕಣ್ಗಾವಲು: ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆದಿದ್ದವರ ಮೇಲೆ ಕಣ್ಣಿಡಲು ಸಿಸಿ ಕ್ಯಾಮರಾ, ಡ್ರೋನ್​ ಮತ್ತು ಭದ್ರತೆಗಾಗಿ 3 ಸಾವಿರಕ್ಕೂ ಅಧಿಕ ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 8ಕ್ಕೂ ಹೆಚ್ಚು ಡ್ರೋನ್​ಗಳನ್ನು ಹಾರಿ ಬಿಡಲಾಗಿತ್ತು. ಅದು ಪ್ರತಿಯೊಬ್ಬರ ಚಲನ-ವಲನದ ದೃಶ್ಯವನ್ನು ಸೆರೆ ಹಿಡಿದು ನೀಡುತ್ತಿತ್ತು. ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಪಿಂಕ್​ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿತ್ತು. ಆ ಸಿಬ್ಬಂದಿ ಹೆಣ್ಣು ಮಕ್ಕಳ ಜತೆ ಅನುಚಿತವಾಗಿ ವರ್ತನೆ ಮಾಡುವರರನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಹೋಮ್​ಗಾರ್ಡ್​, ಸಿವಿಲ್​ ಡಿಫೆನ್ಸ್​ ಸಿಬ್ಬಂದಿಯ ನೆರವು ಪಡೆಯಲಾಗಿತ್ತು.

    ಚರ್ಚ್​ ಸ್ಟ್ರೀಟ್​ ಬಳಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬ್ಯಾರಿಕೇಡ್​ಗಳನ್ನು ಹಾಕಿ ಪಾದಚಾರಿ ಮಾರ್ಗಗಳ ಮೂಲಕ ಜನರ ಓಡಾಟ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಲಿಲ್ಲ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್​ ಗೌಡ ನೇತೃಡ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿತ್ತು.

    ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ! 2 ವರ್ಷದ ಬಳಿಕ ಮರುಕಳಿಸಿದ ಸಂಭ್ರಮ, 2022ಕ್ಕೆ ಬೈಬೈ- 2023ಕ್ಕೆ ಹಾಯ್​ಹಾಯ್​

    ಹೆಲ್ಮೆಟ್​ ಹಾಕಿಲ್ಲ ಎಂದು ಕಾರು ಮಾಲೀಕನಿಗೆ ನೋಟಿಸ್​ ಕಳಿಸಿದ ಟ್ರಾಫಿಕ್​ ಪೊಲೀಸರು! ಮಂಗಳೂರಲ್ಲಿ ಘಟನೆ

    ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts