More

    VIDEO| ನ್ಯಾಯಾಲಯ, ಸರ್ಕಾರಗಳು ಅಪರಾಧಿಗಳ ಮುಂದೆ ತಲೆ ಬಾಗುತ್ತಿವೆ: ನಿರ್ಭಯಾ ತಾಯಿ ಆಶಾದೇವಿ ಆಕ್ರೋಶದ ನುಡಿ

    ನವದೆಹಲಿ: ಫೆ. 1ಕ್ಕೆ ನಿಗದಿಯಾಗಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಮತ್ತೊಮ್ಮೆ ಮುಂದೂಡಿದ್ದಕ್ಕೆ ಕುಸಿದುಹೋದ ನಿರ್ಭಯಾ ತಾಯಿ ಆಶಾದೇವಿ ಕಣ್ಣೀರಿಟ್ಟರು.

    ನಾಳೆ ನಡೆಯಬೇಕಿದ್ದ ಮರಣದಂಡನೆಗೆ ತಡೆಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದ್ದು, ಮತ್ತೊಂದು ಆದೇಶ ಹೊರಬೀಳುವವರೆಗೂ ಗಲ್ಲುಶಿಕ್ಷೆ ನಡೆಸದಂತೆ ದೆಹಲಿ ಪಟಿಯಾಲ ನ್ಯಾಯಾಲಯ ತಿಳಿಸಿತು.

    ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್, ಗಲ್ಲು ಶಿಕ್ಷೆ ಎಂದಿಗೂ ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದರು ಎಂದು ತಿಳಿಸಿದ ಆಶಾದೇವಿ, ನನ್ನ ಮಗಳಿಗೆ ನ್ಯಾಯ ದೊರಕುವವರೆಗೆ ಹೋರಾಟ ಮಾಡುತ್ತೇನೆ ಎಂದರು.

    ಇದನ್ನು ಎಲ್ಲರೂ ಕೇಳಿಸಿ ಕೊಳ್ಳಬೇಕು… ದೆಹಲಿ ಸರ್ಕಾರ, ಕೇಂದ್ರ ಸರ್ಕಾರ ಕೇಳಿಸಿಕೊಳ್ಳಬೇಕು. ನ್ಯಾಯಾಲಯಗಳು ಮತ್ತು ಸರ್ಕಾರಗಳು ಈ ಅಪರಾಧಿಗಳ ಮುಂದೆ ತಲೆ ಬಾಗುತ್ತಿವೆ ಎಂದು ಕೂಗಿದ ಅವರು ವಿಚಲಿತರಾದರು.

    ನಾನು ಬೆಳಗ್ಗೆ 10ಗಂಟೆಯಿಂದ ಕುಳಿತುಕೊಂಡಿದ್ದೇನೆ. ಅಪರಾಧಿಗಳನ್ನು ನ್ಯಾಯಾಲಯ ಉಳಿಸಿಕೊಳ್ಳಬಯಸಿದರೆ ಮತ್ತೆ ಇಷ್ಟು ಸುದೀರ್ಘ ವಿಚಾರಣೆ ಏಕೆ ಬೇಕಿತ್ತು? ನಾವಿಷ್ಟು ಹೊತ್ತು ಭರವಸೆ ಇಟ್ಟುಕೊಂಡು ಕುಳಿತುಕೊಳ್ಳುವ ಅಗತ್ಯವೇನಿತ್ತು, ನಮ್ಮನ್ನು ಮನೆಗೆ ಕಳುಹಿಸಬಹುದಿತ್ತು ಎಂದು ಗದ್ಗದಿತರಾದರು.

    ಗಲ್ಲಿಗೇರುವ ಮೊದಲೇ ನಾಲ್ವರು ಅಪರಾಧಿಗಳ ಮರಣದಂಡನೆ ಆದೇಶ ಹಿಂಪಡೆಯಲಾಗಿದೆ. ಇನ್ನು ಮುಂದಿನ ಆದೇಶದವರೆಗೆ ಅವರಿಗೆ ಗಲ್ಲಿಗೇರಿಸುವಂತಿಲ್ಲ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts