More

    ಕರ್ನಾಟಕದ ಇಬ್ಬರಿಗೆ ಜೀವನ​ ರಕ್ಷಾ ಪದಕ; ಒಟ್ಟು 54 ಮಂದಿಗೆ ಸರ್ವೋತ್ತಮ, ಉತ್ತಮ, ಜೀವನ ರಕ್ಷಾ ಪದಕ ಪ್ರದಾನಕ್ಕೆ ರಾಷ್ಟ್ರಪತಿ ಸಮ್ಮತಿ

    ನವದೆಹಲಿ: 2020ರ ಗಣರಾಜ್ಯೋತ್ಸವದ ಅಂಗವಾಗಿ ಜೀವನ​ ರಕ್ಷಾ ಪದಕವನ್ನು 54 ಮಂದಿಗೆ ಪ್ರದಾನ ಮಾಡಲು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಒಪ್ಪಿಗೆ ಸೂಚಿಸಿದ್ದಾರೆ.

    ಅದರಂತೆ 7 ಮಂದಿಗೆ ಸರ್ವೋತ್ತಮ ಜೀವನ ರಕ್ಷಾ ಪದಕ, 8 ಉತ್ತಮ ಜೀವನ ರಕ್ಷಾ ಪದಕ ಮತ್ತು ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 39 ಮಂದಿಗೆ ಜೀವನ​ ರಕ್ಷಾ ಪದಕ ಪ್ರದಾನ ಮಾಡಲಾಗುತ್ತದೆ.

    ಕರ್ನಾಟಕದ ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ ಮತ್ತು ಶಿವಾನಂದ ದಶರಥ ಹೊಸಟ್ಟಿ ಎಂಬ ಬಾಲಕರಿಬ್ಬರಿಗೆ ಈ ಬಾರಿ ಜೀವನ​ ರಕ್ಷಾ ಪದಕ ದೊರೆಯಲಿದೆ.

    ವ್ಯಕ್ತಿಯ ಜೀವ ಉಳಿಸುವಲ್ಲಿ ಮಾಡಿರುವ ಪ್ರಶಂಸನೀಯ ಕಾರ್ಯಕ್ಕಾಗಿ ಜೀವನ ರಕ್ಷ ಪದಕ ಸರಣಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಸರ್ವೊತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವ ರಕ್ಷಾ ಪದಕ ಮತ್ತು ಜೀವ ರಕ್ಷಾ ಪದಕ ಎಂದು ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಎಲ್ಲ ವರ್ಗದ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ. ಅಲ್ಲದೆ ಪ್ರಶಸ್ತಿಯನ್ನು ಮರಣೋತ್ತರವಾಗಿ ಕೂಡ ಪ್ರದಾನ ಮಾಡಲಾಗುತ್ತದೆ.

    ಪದಕ, ಗೃಹ ಸಚಿವರು ಸಹಿ ಮಾಡಿದ ಪ್ರಮಾಣ ಪತ್ರ ಮತ್ತು ಗೌರವ ಧನವನ್ನು ಪ್ರಶಸ್ತಿಗಳು ಒಳಗೊಂಡಿವೆ. ಪ್ರಶಸ್ತಿ ವಿಜೇತರಿಗೆ ಆಯಾ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳ ಕಡೆಯಿಂದ ಪ್ರದಾನ ಕೊಡಮಾಡಲಾಗುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts